ಗುಬ್ಬಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ

ವ್ಯಕ್ತಿಗಿಂತ ಪಕ್ಷದ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸಿ: ವಿಜಯೇಂದ್ರ

196

Get real time updates directly on you device, subscribe now.


ಗುಬ್ಬಿ: ಗುಬ್ಬಿ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷವು ಗೆದ್ದಿದೆ. ನಾಯಕರು ಮತ್ತು ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ 224 ಕ್ಷೇತ್ರಗಳಲ್ಲಿ ಮೊದಲು ಬಿಜೆಪಿ ಶಾಸಕರನ್ನು ಗುಬ್ಬಿಯಿಂದಲೇ ಕೊಡಬಹುದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು

ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಒಬಿಸಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ವೇದಿಕೆ ಮೇಲೆ ಇರುವ ಹಿರಿಯರು, ಪಕ್ಷದ ಮುಖಂಡರು ಗಟ್ಟಿ ಮನಸ್ಸು ಮಾಡಿದರೆ ಬಿಜೆಪಿ ಗೆಲ್ಲುತ್ತದೆ ಎಂಬ ಶಪಥವನ್ನು ತಾವೆಲ್ಲರೂ ಮಾಡಬೇಕಾಗಿದೆ. ಇಲ್ಲಿ ವ್ಯಕ್ತಿ ಗೆಲ್ಲಬೇಕು ಎನ್ನುವುದಕ್ಕಿಂತ ಪಕ್ಷ ಗೆಲ್ಲಬೇಕು ಎಂದು ಹೋರಾಟ ಮಾಡಿದಾಗ ಖಂಡಿತವಾಗಿಯೂ ಅಧಿಕಾರಕ್ಕೆ ಬರುತ್ತೇವೆ. ಕೇವಲ ನಗರಕ್ಕೆ ಸೀಮಿತವಾಗಿದ್ದ ಬಿಜೆಪಿ ಪಕ್ಷ ಇಂದು ಹಳ್ಳಿ ಹಳ್ಳಿಯಲ್ಲಿಯೂ ಬಿಜೆಪಿ ಪಕ್ಷ ಬಲವರ್ಧನೆಯಾಗಿದೆ ಎಂದರು.

ಸ್ವಾತಂತ್ರ್ಯ ಬಂದು 60 ರಿಂದ 70 ರ್ವ ಆದರೂ ಕಾಶ್ಮೀರದಲ್ಲಿ ನಮ್ಮ ಧ್ವಜ ಹಾರಿಸಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ರಾಹುಲ್ ಗಾಂಧಿ ಲಾಲ್ ಚೌಕ್ ನಲ್ಲಿ ಧ್ವಜಾರೋಹಣ ಮಾಡುತ್ತಾರೆ ಎಂದರೆ ಅದಕ್ಕೆ ಕಾರಣ ನಮ್ಮ ಮೋದಿ ಸರ್ಕಾರ, ಕಾಶ್ಮೀರದಲ್ಲಿ ಕಲಂ 370 ನ್ನು ತೆಗೆದು ಹಾಕುವ ಮೂಲಕ ಕಾಶ್ಮೀರದ ಜನ ಸಂತೋಷದ ಜೀವನ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ನಕ್ಸಲರು ಎಲ್ಲೂ ಇಲ್ಲ. ಭ್ರಷ್ಟಾಚಾರ ರಹಿತವಾಗಿ ಆಡಳಿತ ಮಾಡುತ್ತಿರುವ ಬಿಜೆಪಿ 9 ವರ್ಷಗಳಲ್ಲಿ ನವ ಭಾರತ ಸೃಷ್ಟಿಸಿದೆ. ಕರ್ನಾಟಕದಲ್ಲಿ ಸ್ವಲ್ಪಮಟ್ಟಿಗೆ ಕಾಂಗ್ರೆಸ್ ಉಸಿರಾಡುತ್ತಿದೆ. ದೀಪ ಉರಿಯುವಾಗ ಜೋರಾಗಿ ಉರಿಯುತ್ತದೆ ಎಂಬ ಮಾತಿನಂತೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನೆಲಕಚ್ಚುತ್ತದೆ. ಇನ್ನು ಜೆಡಿಎಸ್ ಪಕ್ಷವು ಯಾವುದೇ ಕಾರಣಕ್ಕೂ ಬಹುಮತದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಆದರೆ ಅತಂತ್ರ ವಿಧಾನಸಭಾ ಬರಬಹುದು ಎಂಬ ಆಸೆಯಲ್ಲಿ ಪಂಚರತ್ನ ಯೋಜನೆ ಮಾಡುತ್ತಾ ಓಡಾಡುತ್ತಿದ್ದಾರೆ ಎಂದರು.

ಇನ್ನು ಕೇವಲ ರಾಜ್ಯದಲ್ಲಿ ಎರಡು ತಿಂಗಳು ಮಾತ್ರ ಚುನಾವಣೆ ಬಾಕಿ ಇದ್ದು ಗಡಿಯಲ್ಲಿ ಯೋಧರು ಹಗಲು ರಾತ್ರಿ ಕೆಲಸ ಮಾಡುವಂತೆ ರಾಜ್ಯದಲ್ಲಿ ನಮ್ಮ ಕಾರ್ಯಕರ್ತರು ಬಿಜೆಪಿ ಗೆಲ್ಲಿಸಲು ಕೆಲಸ ಮಾಡಬೇಕಾಗಿದೆ. ತುಮಕೂರು ಜಿಲ್ಲೆಯಲ್ಲಿ ಈ ಬಾರಿ ಅತ್ಯಂತ ಹೆಚ್ಚು ವಿಧಾನಸಭೆ ಶಾಸಕರನ್ನು ಗೆಲ್ಲಿಸೋಣ ಎಂದು ತಿಳಿಸಿದರು.

ನಾನು ಕರ್ನಾಟಕದ ಯಾವುದಾದರು ಒಂದು ಭಾಗದಲ್ಲಿ ಚುನಾವಣೆಗೆ ನಿಲ್ಲುತ್ತೇನೆ. ಶಿರಾ ಮತ್ತು ಕೆಆರ್ ಪೇಟೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಊಹಿಸಿರಲಿಲ್ಲ. ಪಕ್ಷದ ಸಂಘಟನೆ ಎಲ್ಲರ ಒಗ್ಗಟ್ಟಿನಿಂದ ಗೆದ್ದಿದ್ದೇವೆ ಅದೇ ರೀತಿ ಇಲ್ಲಿಯೂ ಎಷ್ಟೇ ಒಡಕುಗಳಿದ್ದರೂ ಸಂಘಟನೆ ಮತ್ತು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಗುಬ್ಬಿ ವಿಧಾನಸಭಾ ಕ್ಷೇತ್ರ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ಇದೆ ಎಂದು ತಿಳಿಸಿದರು.

ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಫ್ಲೆಕ್ಸ್ ಗಳಲ್ಲಿ ಮೂರು ಮತ್ತೊಂದು ಹಾಕುವ ಬದಲು ಎಲ್ಲರೂ ಒಟ್ಟಾಗಿ ಇರುವಂತಹ ಕೆಲಸ ಮಾಡಿದಾಗ ಗುಬ್ಬಿ ಕ್ಷೇತ್ರ ಗೆಲ್ಲುವುದರಲ್ಲಿ ಎರಡು ಮಾತಿಲ್ಲ, ಕೇಂದ್ರದಲ್ಲಿ ಮೋದಿಜಿ ಅವರು ಮಾಡಿರುವ ಯೋಜನೆಗಳು ಇಡೀ ದೇಶದ ಜನರಿಗೆ ತಲುಪಿದ್ದು ರಕ್ಷಣೆಯಿಂದ, ಆತ್ಮಬಲದಿಂದ ಬದುಕುವುದನ್ನು ಕಲಿಸಿದ್ದಾರೆ. ತುಮಕೂರು ಜಿಲ್ಲೆಗೆ ಹೆಚ್ಎಎಲ್, ಕೈಗಾರಿಕಾ ವಲಯ ನೀಡಿರುವ ಬಿಜೆಪಿ ಸರ್ಕಾರ ಅತ್ಯಂತ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಎಂದು ತಿಳಿಸಿದರು.
ಹಿಂದುಳಿದ ವರ್ಗದ ಮುಖಂಡ ನೆ.ಲ.ನರೇಂದ್ರ ಬಾಬು ಮಾತನಾಡಿ, ನಮ್ಮ ಸಮುದಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದ್ದು ಬಿಜೆಪಿ ಸರ್ಕಾರ ಹಿಂದುಳಿದ ಸಮುದಾಯಕ್ಕೆ ನೂರಾರು ಯೋಜನೆ ನೀಡಿದೆ. ಗುಬ್ಬಿ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದವರು ಇದ್ದು ಅವರೆಲ್ಲರೂ ಕೈ ಹಿಡಿದರೆ ಬಿಜೆಪಿಯಿಂದ ಗುಬ್ಬಿ ಕ್ಷೇತ್ರದಲ್ಲಿ ಶಾಸಕರನ್ನು ಆಯ್ಕೆ ಮಾಡಬಹುದು. ಬಿಜೆಪಿ ಸಚಿವರಲ್ಲಿ 27 ಜನ ಹಿಂದುಳಿದ ವರ್ಗದವರೇ ಸಚಿವರು ಇದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಹಾರೋಹಳ್ಳಿ ಶಂಕರ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ಮಾಜಿ ಸಚಿವ ಸೊಗಡು ಶಿವಣ್ಣ, ತಾಲೂಕು ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ, ಪಪಂ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ಮುಖಂಡರಾದ ಮರಿಸ್ವಾಮಿ, ಸುರೇಶ್ ಬಾಬು, ವಿನಯ್ ಬಿದರೆ, ಪ್ರೇಮ ನಾಗಪ್ಪ, ಜಿ.ಎನ್.ಬೆಟ್ಟಸ್ವಾಮಿ ಎಸ್.ಡಿ.ದಿಲೀಪ್ ಕುಮಾರ್, ಚಂದ್ರಶೇಖರ ಬಾಬು, ಎನ್.ಸಿ.ಪ್ರಕಾಶ್, ಎಚ್.ಟಿ.ಭೈರಪ್ಪ, ಸಾಗನಹಳ್ಳಿ ವಿಜಯಕುಮಾರ್, ಅ.ನ.ಲಿಂಗಪ್ಪ ಇನ್ನಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!