ಜೀವನದಲ್ಲಿ ಮಹಾತ್ಮರ ಆದರ್ಶ ಅಳವಡಿಸಿಕೊಳ್ಳಿ

112

Get real time updates directly on you device, subscribe now.


ಶಿರಾ: ಬದಲಾವಣೆ ಮೊದಲು ನಮ್ಮಲ್ಲಾಗಬೇಕು ತದನಂತರ ಸಮಾಜದ ಬದಲಾವಣೆ ಮಾಡಬೇಕು ಎಂಬುದು ಕಾಲಜ್ಞಾನಿ ಕೈವಾರ ತಾತಯ್ಯನವರ ಚಿಂತನೆ, ಕಾಲಜ್ಞಾನ ಬಹಳ ಕಠಿಣವಾದ ಶಾಸ್ತ್ರ, ನಮ್ಮ ಭವಿಷ್ಯ ಆಗಲೇ ಅಸ್ತಿತ್ವದಲ್ಲಿದೆ. ಘಟನೆಗಳ ಅನಾವರಣ ಮಾತ್ರ ನಾವು ನೋಡುತ್ತಿದ್ದೇವೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ತಿಳಿಸಿದರು.

ಶಿರಾ ತಾಲೂಕ್ ಕಚೇರಿಯಲ್ಲಿ ಏರ್ಪಡಿಸಿದ್ದ ಶ್ರೀಯೋಗಿ ನಾರೇಯಣ ಯತೀಂದ್ರರ 297ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧ್ಯಾತ್ಮಿಕ ಜ್ಞಾನವಿದ್ದರೆ ಎಂತಹ ಕಷ್ಟಕರ ಪರಿಸ್ಥಿತಿಯಲ್ಲೂ ಕೂಡ ನಾವು ಕೆಟ್ಟದ್ದನ್ನು ಮಾಡುವದಕ್ಕೆ ಬಯಸುವುದಿಲ್ಲ. ಭಜನೆ ಹಾಗೂ ಕೀರ್ತನೆಗಳು ನಮ್ಮ ಮನಸ್ಸಿನಲ್ಲಿ ಆಧ್ಯಾತ್ಮಿಕ ಭಾವನೆ ಹಾಗೂ ಶಾಂತ ಮನೋಭಾವದ ಸ್ಥಿತಿ ಉಂಟು ಮಾಡುತ್ತದೆ. ಮಹಿಳಾ ಭಜನಾ ಮಂಡಳಿಯವರು ಭಜನೆ ಮೂಲಕ ಸಮಾಜವನ್ನು ನೆಮ್ಮದಿ ಹಾಗೂ ಆಧ್ಯಾತ್ಮಿಕದ ಕಡೆ ಕೊಂಡೊಯ್ಯತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.

ಶಿರಾ ತಾಲೂಕು ಯೋಗಿ ನಾರೇಯಣ ಸಂಘದ ತಾಲೂಕ ಅಧ್ಯಕ್ಷ ಬಿ.ಗೋವಿಂದಪ್ಪ ಮಾತನಾಡಿ, ಎರಡು ವರ್ಷಗಳಿಂದ ಸರ್ಕಾರ ತಾತಯ್ಯನವರ ಜಯಂತಿ ಆಚರಿಸುತ್ತಿರುವುದರಿಂದ ನಾವು ನಮಗಾಗುತ್ತಿರುವ ಅನ್ಯಾಯಗಳ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲು ಅನುಕೂಲವಾಗುತ್ತಿದೆ. ಕಾಲಜ್ಞಾನಿ ಶ್ರೀಕೈವಾರ ತಾತಯ್ಯನವರ ಭವಿಷ್ಯ ಇಂದಿಗೂ ನಿಜವಾಗುತ್ತಿದೆ ಎಂದು ಈವರೆಗೂ ಅವರು ನುಡಿದ ಭವಿಷ್ಯದ ಹಲವು ಘಟನಾವಳಿಗಳನ್ನು ಪ್ರಸ್ತುತ ಪಡಿಸಿದರು.

ಈ ಸಂದರ್ಭದಲ್ಲಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಾರುತೇಶ್, ಉಪ ತಹಶೀಲ್ದಾರ್ ನರಸಿಂಹಯ್ಯ, ತಾಲೂಕ್ ಬಲಿಜ ಸಂಘದ ಅಧ್ಯಕ್ಷ ಶ್ರೀರಂಗಪ್ಪ, ಮಹಿಳಾ ಅಧ್ಯಕ್ಷೆ ಉಮಾದೇವಿ, ಶಿರಾ ತಾಲೂಕು ಯೋಗಿ ನಾರೇಯಣ ಬಲಿಜ ಸಂಘದ ಯುವ ಘಟಕದ ಅಧ್ಯಕ್ಷ ಸಿಂಚುನಾರಾಯಣ್, ನಿವೃತ್ತ ಪ್ರಾಶುಂಪಾಲ ಅಶೋಕ್ ಕುಮಾರ್, ಬಲಿಜ ಮುಖಂಡರಾದ ಎಂ.ಎನ್.ರಾಜು, ವಿಜಯಕುಮಾರ್, ವಿರೂಪಾಕ್ಷ, ಗಿರಿಧರ, ತುಳಸಿರಾಮ್, ಕೃಷ್ಣಮೂರ್ತಿ, ನಾರಾಯಣ್, ಮದಲೂರು ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುಮಿತ್ರ ರಾಮಚಂದ್ರಪ್ಪ, ತಾಲೂಕು ಬಲಿಜ ಭಜನಾ ಸೇವಾ ಮಂಡಳಿ ಸದಸ್ಯರು ಇದ್ದರು.

Get real time updates directly on you device, subscribe now.

Comments are closed.

error: Content is protected !!