ಪ್ರವರ್ಗ- 1ರ ಅಭ್ಯರ್ಥಿಗಳಿಗೆ ಟಿಕೆಟ್ ಗೆ ಒತ್ತಾಯ

139

Get real time updates directly on you device, subscribe now.


ತುಮಕೂರು: ಮುಂಬರುವ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಪ್ರವರ್ಗ ಒಂದರ ಸಮುದಾಯಕ್ಕೆ ಹೆಚ್ಚಿನದಾಗಿ ರಾಜಕೀಯ ಪ್ರಾತಿನಿಧ್ಯ ನೀಡುವ ಮೂಲಕ ಮುಂಬರುವ ಚುನಾವಣೆಯಲ್ಲಿ ಪ್ರವರ್ಗ ಒಂದರ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಬೇಕು ಎಂದು ಪ್ರವರ್ಗ-1ರ ಜಾತಿಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇನ್ನು ರಾಜ್ಯದಲ್ಲಿ ಪ್ರವರ್ಗ-1 ರ ಜಾತಿಗಳ ಒಕ್ಕೂಟ ರಾಜ್ಯದ್ಯಂತ 95ಕ್ಕೂ ಹೆಚ್ಚು ಸಮಾಜ ಹಾಗೂ 376 ಉಪ ಸಮಾಜಗಳನ್ನ ಕಟ್ಟುವ ಕೆಲಸವನ್ನು ನಮ್ಮ ಸಂಘಟನೆ ಮಾಡಿದ್ದು ಇದುವರೆಗೂ ಹಿಂದುಳಿದಿರುವ ನಮ್ಮ ಸಮುದಾಯಗಳು ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಮ್ಮ ಹೋರಾಟ ಮಾಡುತ್ತಾ ಬಂದಿದ್ದು ಇನ್ನಾದರೂ ರಾಜಕೀಯ ಪಕ್ಷಗಳು ಪ್ರವರ್ಗ ಒಂದರ ಸಮುದಾಯಗಳ ಏಳಿಗೆಗೆ ಶ್ರಮಿಸುವ ಸಲುವಾಗಿ ತಮ್ಮ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಬೇಕು ಎಂದರು.

ರಾಜ್ಯದಲ್ಲಿ ಪ್ರವರ್ಗ ಒಂದಕ್ಕೆ ಸೇರಿದ 90 ಲಕ್ಷಕ್ಕೂ ಹೆಚ್ಚು ಮತದಾರರು ರಾಜ್ಯದಲ್ಲಿ ಇದ್ದು ನಮ್ಮ ಮನವಿಯನ್ನು ಮುಂದಿನ ದಿನದಲ್ಲಿ ತಿರಸ್ಕರಿಸಿದರೆ ಸ್ಪಷ್ಟ ನಿಲುವನ್ನ ಮುಂದಿನ ದಿನದಲ್ಲಿ ನಮ್ಮ ಸಮುದಾಯಗಳು ತೋರಿಸಲಿವೆ ಎಂದು ಎಚ್ಚರಿಕೆ ನೀಡಿದ ಅವರು ತುಮಕೂರು ಜಿಲ್ಲೆಯಲ್ಲಿ ಪ್ರವರ್ಗ ಒಂದರ ಅಡಿಯಲ್ಲಿ ಬರುವ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಸಾಸಲು ಸತೀಶ್ ಹಾಗೂ ಚಿಕ್ಕನಾಯಕನ ಹಳ್ಳಿಯ ರೇಣುಕಯ್ಯ ಅವರು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಪಕ್ಷ ಇವರಿಗೆ ಟಿಕೆಟ್ ನೀಡಬೇಕು. ಹಾಗೆಯೇ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದಲ್ಲೂ ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ತಿಳಿಸಿದ್ದಾರೆ.

ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ, ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿ ರೇಣುಕಯ್ಯ ಅರ್ಜಿ ಸಲ್ಲಿಸಿದ್ದಾರೆ. ಅವರು ಸ್ಥಳೀಯರಾಗಿ ಪಕ್ಷವನ್ನು ಕಟ್ಟಲು ಶ್ರಮಿಸಿದ್ದು, ಅವರಿಗೆ ಟಿಕೆಟ್ ನೀಡದರೆ ಹೆಚ್ಚಿನ ಅನುಕೂಲವಾಗಲಿದೆ. ಒಂದು ವೇಳೆ ಗೆಲ್ಲುವ ಮಾನದಂಡಕ್ಕೆ ಕಟ್ಟು ಬಿದ್ದು, ಟಿಕೆಟ್ ತಪ್ಪಿಸಿದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಕಾಂಗ್ರೆಸ್ ಎದುರಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಪ್ರವರ್ಗ- 1ರ ಜಾತಿಗಳ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಹೆಚ್.ವಿ.ಬಂಡಿ, ಮುಖಂಡರಾದ ಗಂಗಪ್ಪ, ಮಂಜುನಾಥ್, ಯೋಗೇಶ್, ರಾಜೇಶ್ ಇನ್ನಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!