ಚಿಕ್ಕನಾಯಕನಹಳ್ಳಿ: ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯ ಖಾಸಗಿ ವಾಹನದ ಬಿಲ್ ಮಾಡಿಕೊಡಲು ಲಂಚ ಸ್ವೀಕರಿಸುವಾಗ ಹಿಂದುಳಿದ ವರ್ಗಗಳ ಪ್ರಭಾರ ಕಲ್ಯಾಣಾಧಿಕಾರಿ ಶಿವರಾಜ್ ಅವರನ್ನು ಲೋಕಾಯುಕ್ತ ಪೋಲಿಸ್ ಬಂಧಿಸಿದ್ದಾರೆ.
ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಓಡಾಡಲು ಖಾಸಗಿ ಕಾರನ್ನು ಟೆಂಡರ್ ಮೂಲಕ ಬಾಡಿಗೆ ಪಡೆಯಲಾಗಿದ್ದು, ಕಾರಿನ ಬಾಡಿಗೆ ಮೂರು ತಿಂಗಳಿಂದ ಬಾಕಿ ಉಳಿದಿದ್ದು, ಬಾಡಿಗೆ ಹಣದ ಬಿಲ್ ಮಾಡಿಕೊಡಲು ಬೇಡಿಕೆ ಇಟ್ಟಿದ. ಕಾರ್ ಬಾಡಿಗೆ ನೀಡದೆ ಶಿವರಾಜ್ ಸತಾಯಿಸುತ್ತಿದ್ದು, ಬಿಲ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಹಲವಾರು ವರ್ಷಗಳಿಂದ ಬಿಸಿಎಂ ಕಚೇರಿಗೆ ಗುತ್ತಿಗೆ ಆಧಾರದ ಮೇಲೆ ಚಿಕ್ಕನಾಯಕನಹಳ್ಳಿ ಪಟ್ಟಣದ ನರೇಂದ್ರರಾಜು ಕಾರನ್ನು ಬಾಡಿಗೆಗೆ ನೀಡುತ್ತಿದ್ದು, ಚಾಲಕನು ಇವರೇ ಆಗಿದ್ದು, ಲಂಚಕ್ಕೆ ಬೇಡಿಕೆ ಇಟ್ಟದ್ದರಿಂದ ತುಮಕೂರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಬುಧುವಾರ ಮಧ್ಯಾಹ್ನ ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್, ಹರೀಶ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಲಂಚ ಸ್ವೀಕರಿಸುವ ವೇಳೆ ಶಿವರಾಜ್ ರನ್ನು ಬಂಧಿಸಿದ್ದಾರೆ.
Comments are closed.