ತುಮಕೂರು: ನಮ್ಮ ದೈನಂದಿನ ಬದುಕಿನಲ್ಲಿ ಗೊತ್ತಿಲ್ಲದೆ ಪಾಪ ಮಾಡಿರುತ್ತೇವೆ. ಪಾಪ ವಿನಾಶಕ್ಕೆ ಇಂತಹ ಕ್ಷೇತ್ರಕ್ಕೆ ಬಂದು ಪಾಪ ತೊಳೆದು ಪುಣ್ಯ ಸಂಪಾದನೆ ಮಾಡಿ, ಆತ್ಮ ಕಲ್ಯಾಣಕ್ಕೆ ಅವಕಾಶ ದೊರೆಯುತ್ತಿದೆ ಎಂದು ಕಂಬದಹಳ್ಳಿ ಜೈನ್ ಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ತುಮಕೂರು ಹೊರವಲಯದ ಮಂದಾರಾಗಿರಿಯಲ್ಲಿ ನಡೆಯುತ್ತಿರೋ ದಿವ್ಯಾಕಾಶ ಸಮವಸರಣದ ಮೊದಲ ದಿನದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿ, ಈ ದಿನ ಶ್ರೀಕ್ಷೇತ್ರದಲ್ಲಿ ಬೆಟ್ಟದ ಮೇಲೆ ನಿರ್ಮಿತವಾಗಿರುವ ದಿವ್ಯಾಕಾಶ ಸಮವಸರಣವು ಯಾವುದೇ ಬಿಸಿಲು ಗಾಳಿಯಿಂದ ತೊಂದರೆಗೆ ಒಳಗಾಗದಂತೆ ಸಂರಕ್ಷಿಸಲು ಮುಂದಾಗಿರೋದು ಮುನಿಗಳ ಶ್ರಮ ನಿಜಕ್ಕೂ ಶ್ಲಾಘನೀಯ. ಹಸ್ತಿನಾಪುರದಲ್ಲಿ ಇಂತಹ ಸಮವಸರಣ ಇದೆ. ನಂತರದ ಸ್ಥಾನವೆಂದರೆ ಮಂದರಗಿರಿ ಕ್ಷೇತ್ರವಾಗಿದೆ ಎಂದರು.
ಭಾರತೀಯ ಜೈನ್ ಮಿಲನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಧರ್ಮಸ್ಥಳ ಸುರೇಂದ್ರ ಕುಮಾರ್ ಮಾತನಾಡಿ, ಈ ಸಮೋಸರಣ ನೋಡಲು ದೇಶ ವಿದೇಶಗಳಿಂದ ಆಗಮಿಸುತ್ತಿದ್ದಾರೆ. ಈ ಕ್ಷೇತ್ರಕ್ಕೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದೆ ನನ್ನ ಪೂರ್ವ ಜನ್ಮದ ಪುಣ್ಯವಾಗಿದೆ. ತುಮಕೂರು ಜೈನ ಸಮಾಜದವರು ಆಯೋಜಿಸುವ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರುತ್ತವೆ. ಇದಕ್ಕೆ ಇಂದು ನಡೆಯುತ್ತಿರುವ ಸಮೋಸರಣದ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಜೈನ ದಿಗಂಬರ ಮುನಿಗಳಾದ ಅಮರಕೀರ್ತಿ ಮನಿ ಮಹಾರಾಜ್ ಹಾಗೂ ಅಮೋಘ ಕೀರ್ತಿ ಮುನಿ ಮಹಾರಾಜ್ ವಹಿಸಿದ್ದರು.
ಪಾಲಿಕೆ ಸದಸ್ಯರಾದ ಮಂಜುಳಾ, ದೀಪಶ್ರೀ ಮಂಜುನಾಥ್, ಮೈದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾ ಮಂಜುನಾಥ್, ಉಪಾಧ್ಯಕ್ಷ ನರಸಿಂಹಮೂರ್ತಿ, ಮುಂಬೈನ ರಾಕೇಶ್ ಜೈನ್, ಜೈನ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆ ಪದ್ಮಿನಿ ಪದ್ಮರಾಜ, ಮಂಗಳೂರಿನ ಪುಷ್ಪರಾಜ ಜೈನ್, ಜೈನ್ ಸಮಾಜದ ಅಧ್ಯಕ್ಷ ನಾಗರಾಜ್, ಶ್ಯಾಮಲಾ ಅಜಿತ್ ಇತರರು ಇದ್ದರು.
Comments are closed.