ಕೌಶಲ್ಯವರ್ಧನೆ ನಿರಂತರ ಪ್ರಕ್ರಿಯೆಯಾಗಲಿ: ವೆಂಕಟೇಶ್ವರಲು

72

Get real time updates directly on you device, subscribe now.


ತುಮಕೂರು: ಕೌಶಲ್ಯವರ್ಧನೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಅದು ನಿರಂತರ ಪ್ರಕ್ರಿಯೆಯಾಗಬೇಕು. ಆಗ ಮಾತ್ರ ಮಾಡುವ ಕೆಲಸದಲ್ಲಿ ವೇಗ ಮತ್ತು ನಿಖರತೆ ಸಾಧಿಸಿ ಕಾರ್ಯದಕ್ಷತೆ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವ ವಿದ್ಯಾಲಯದ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ ಹಾಗೂ ಆಂತರಿಕಗುಣಮಟ್ಟ ಭರವಸೆ ಕೋಶದವತಿಯಿಂದ ಆಯೋಜಿಸಿದ್ದ ವಿಶ್ವವಿದ್ಯಾಲಯ ಬೋಧಕೇತರ ಸಿಬ್ಬಂದಿಗೆ ಡಿಜಿಟಲ್ ಸಾಕ್ಷರತೆ ಮತ್ತು ಸಂವಹನಾತ್ಮಕ ಆಂಗ್ಲ ಭಾಷಾತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಇಪ್ಪತ್ತೊಂದನೇ ಶತಮಾನದ ತಾಂತ್ರಿಕ ಯುಗದಲ್ಲಿ ಉತ್ತಮ ಸೇವೆ ನೀಡಬೇಕಾದಲ್ಲಿ ಡಿಜಿಟಲ್ ಸಾಕ್ಷರತೆ ಮತ್ತು ಆಂಗ್ಲಭಾಷಾ ಸಂವಹನ ಕೌಶಲ್ಯ ಅತ್ಯಗತ್ಯ. ಕಾರ್ಯಾಗಾರದ ಸಂಪೂರ್ಣ ಪ್ರಯೋಜನವನ್ನು ಬೋಧಕೇತರ ಸಿಬ್ಬಂದಿ ಪಡೆದುಕೊಂಡು ಡಿಜಿಟಲ್ ಸಾಕ್ಷರತೆಯ ಅಗತ್ಯ ತಿಳಿದು ಕೌಶಲ್ಯ ಹೆಚ್ಚಿಸಿಕೊಳ್ಳಿ ಎಂದರು.

ತುಮಕೂರು ವಿಶ್ವ ವಿದ್ಯಾಲಯದ ಐಕ್ಯೂಎಸಿ ನಿರ್ದೇಶಕ ಪ್ರೊ.ರಮೇಶ್, ಪಿಎಂಇಬಿ ನಿರ್ದೇಶಕ ಪ್ರೊ.ಬಿ.ಟಿ.ಸಂಪತ್ ಕುಮಾರ್, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ರೂಪೇಶ್ ಕುಮಾರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!