ಸವಾಲು ಎದುರಿಸಿ ಉತ್ತಮ ಸಾಧನೆ ಮಾಡಿ: ಕರಿಯಣ್ಣ

170

Get real time updates directly on you device, subscribe now.


ತುಮಕೂರು: ಕಲಿಕೆಗೆ ಏಕಾಗ್ರತೆ, ಶ್ರದ್ಧೆ ಮತ್ತು ಉತ್ತಮ ಮನಸ್ಥಿತಿ ಮುಖ್ಯ, ಸವಾಲುಗಳನ್ನು ಎದುರಿಸಿದಾಗ ಮಾತ್ರ ಉನ್ನತಿ ಪಡೆಯಲು ಸಾಧ್ಯ ಎಂದು ತುಮಕೂರು ವಿಶ್ವ ವಿದ್ಯಾಲಯ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣಹೇಳಿದರು.
ತುಮಕೂರು ವಿಶ್ವ ವಿದ್ಯಾಲಯ ಕಲಾ ಕಾಲೇಜಿನ ವೃತ್ತಿ ಮಾರ್ಗದರ್ಶನ ಮತ್ತು ನೇಮಕಾತಿ ಕೋಶವು ಉನ್ನತಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ತಿಂಗಳ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಈ ಕಾರ್ಯಗಾರದ ಅನುಭವವನ್ನುಇಂಗ್ಲಿಷ್ನಲ್ಲಿ ಹಂಚಿಕೊಂಡಿದ್ದು ಸಾಧನೆಯ ಹಾದಿ ತೋರುತ್ತದೆ. ಇಚ್ಛಾಶಕ್ತಿ ಇದ್ದುದರಿಂದಲೇ ಇಂಗ್ಲಿಷ್ ಕಲಿಕೆ ಸಾಧ್ಯವಾಯಿತು. ಈವತ್ತಿನ ಇಂಗ್ಲಿಷ್ ಅನಿವಾರ್ಯತೆ ಎಷ್ಟರ ಮಟ್ಟಿಗೆ ಇದೆ ಎಂದು ಈಗಾಗಲೇ ನೀವು ತಿಳಿದುಕೊಂಡಿದ್ದೀರಿ ಎಂದರು.

ವೃತ್ತಿ ಮಾರ್ಗದರ್ಶನ ಮತ್ತು ನೇಮಕಾತಿ ಕೋಶದ ಸಂಚಾಲಕ ಡಾ.ಸಿಬಂತಿ ಪದ್ಮನಾಭ ಕೆ.ವಿ. ಮಾತನಾಡಿ, ಒಳ್ಳೆಯ ಸೌಜನ್ಯ ಮತ್ತು ಸಂವಹನ ಕಲೆ ಬೆಳೆಸಿಕೊಳ್ಳುವುದಕ್ಕೆ ಈ ಕಾರ್ಯಕ್ರಮ ಪೂರಕವಾಗಿತ್ತು. ಗುರುಗಳಿಗೆ, ಸ್ನೇಹಿತರಿಗೆ ಮತ್ತು ಹಿರಿಯರಿಗೆ ನೀಡುವ ಗೌರವ ನಮ್ಮಲ್ಲಿ ಒಳ್ಳೆಯ ವ್ಯಕ್ತಿತ್ವ ರೂಪಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ತುಮಕೂರು ವಿವಿ ಕಲಾ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಸಿ.ಶೋಭಾ ಮಾತನಾಡಿ, ಈ ಕಾರ್ಯಾಗಾರ ನಮ್ಮ ಕಾಲೇಜಿನ ಮಕ್ಕಳಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ. ಇಂಗ್ಲಿಷ್ ನಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಮಕ್ಕಳಿಗೆ ಇಂಗ್ಲಿಷ್ ಅವಶ್ಯಕತೆ ಇದೆ. ಇದೇ ರೀತಿ ಮತ್ತೊಂದು ಕಾರ್ಯಗಾರ ಹಮ್ಮಿಕೊಳ್ಳುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಉನ್ನತಿ ಸಂಸ್ಥೆಯ ಗಗನ್.ಕೆ.ಆರ್, ತುಮಕೂರು ವಿವಿ ಕಲಾ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ವನಜಾಕ್ಷಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!