ತೀರ್ಥಂಕರರು ಸಾರಿದ ಧಾರ್ಮಿಕ ಮೌಲ್ಯ ಪಾಲಿಸಿ

145

Get real time updates directly on you device, subscribe now.


ತುಮಕೂರು: ಜಗತ್ತಿಗೆ ತ್ಯಾಗ ವೈರಾಗ್ಯ ಪರಿಚಯಿಸಿದವರು ಜೈನರಾಗಿದ್ದಾರೆ. 24 ತೀರ್ಥಂಕರ ಮಹಾತ್ಮರು ಸಾರಿದ ಧಾರ್ಮಿಕ ಮೌಲ್ಯಗಳು ಸೂರ್ಯ ಚಂದ್ರ ಇರುವರೆಗೂ ಶಾಶ್ವತವಾಗಿರುತ್ತವೆ. ಕನ್ನಡ ಸಾಹಿತ್ಯದ ಬೆಳವಣಿಗೆ ಜೈನ ಸಾಹಿತಿಗಳ ಕೊಡುಗೆ ಅಪಾರವಾದುದು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಮಂದಾರಗಿರಿಯಲ್ಲಿ ನಡೆಯುತ್ತಿರುವ ದಿವ್ಯಾಕಾಶ ಸಮವಸರಣ ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವದಲ್ಲಿ ನಡೆದ ಕಾರ್ಯ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕ್ರೌರ್ಯ ಸಮಾಜಕ್ಕೆ ಶಾಂತಿ ಸಂದೇಶ ನೀಡಿದ್ದೆ ಜೈನ ಸಮುದಾಯ, ಧಾರ್ಮಿಕವಾಗಿ ಜೈನ ಸಮಾಜ ಇಂದಿಗೂ ಕೂಡ ಎಚ್ಚರಿಕೆ ತಪ್ಪಿಲ್ಲ. ಮಂದಾರಗಿರಿಯು 2ನೇ ಧರ್ಮಸ್ಥಳ, ಎರಡನೇ ಶ್ರವಣಬೆಳಗೊಳ ಆಗಬೇಕು ಎಂದು ತಿಳಿಸಿದರು.

ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ತ್ಯಾಗದಿಂದ ಮಾತ್ರ ಅಮರತ್ವ ಸಾಧ್ಯ ಎಂಬ ಮಹತ್ವದ ಸಂದೇಶವನ್ನು ಸಾರಿದ್ದು ಜೈನ ಧರ್ಮವಾಗಿದೆ ಎಂದು ತಿಳಿಸಿದರು.
ಧರ್ಮದಲ್ಲಿನ ಆಚಾರ ವಿಚಾರಗಳಲ್ಲಿ ಚಾಚೂ ತಪ್ಪದೆ ಪಾಲಿಸಿಕೊಂಡು ಬರುವಂತಹ ಧರ್ಮಗಳಲ್ಲಿ ಜೈನ ಧರ್ಮ ಕೂಡ ಒಂದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಜೈನ ಧರ್ಮ ಅತ್ಯಂತ ಪವಿತ್ರವಾದದು ಎಂದು ಹೇಳಿದರು.

ಎಲ್ಲರನ್ನೂ ಆತ್ಮೀಯವಾಗಿ ನಡೆಸಿಕೊಳ್ಳುವುದು ಜೈನ ಧರ್ಮವಾಗಿದೆ. ದಿಗಂಬರ ಜೈನ ಮುನಿಗಳ ಉಪದೇಶ ಕೇಳುವುದೇ ನಮ್ಮ ಧನ್ಯತೆಯಾಗಿದೆ. ವಿಶೇಷವಾಗಿ ತುಮಕೂರಿಗೆ ಬರುವ ಎಲ್ಲಾ ಮುನಿಗಳು ತಮ್ಮ ಮಠಕ್ಕೆ ಭೇಟಿ ನೀಡುತ್ತಾರೆ. ಇದು ನಮ್ಮ ಸೌಭಾಗ್ಯವಾಗಿದೆ ಎಂದು ಹೇಳಿದರು.
ಮಂದಾರಗಿರಿಯಲ್ಲಿ ನಡೆಯುತ್ತಿರೋ ಪಂಚ ಕಲ್ಯಾಣ ಕಾರ್ಯಕ್ರಮ ವಿಶೇಷವಾಗಿದ್ದು, ಇದು ನಮ್ಮ ಹೆಮ್ಮೆಯಾಗಿದೆ ಎಂದರು.
ಸಿದ್ದರಬೆಟ್ಟ ಕ್ಷೇತ್ರದ ಬಾಳೆಹೊನ್ನೂರು ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಾಪ ದೋಷಗಳಿದ್ದರೆ ಅದನ್ನು ನಿವಾರಣೆ ಮಾಡಲು ಪುಣ್ಯಕ್ಷೇತ್ರಗಳು ನಿರ್ವಹಣಾ ನಿರ್ಮಾಣ ಮಾಡಲಾಗಿರುತ್ತದೆ. ಧರ್ಮವನ್ನು ಜಾಗೃತಿ ಮಾಡಲು ಇಂತಹ ಪುಣ್ಯಕ್ಷೇತ್ರಗಳು ಮಹತ್ವದ ಕಾರ್ಯ ಮಾಡುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಅಮೋಘ ಕೀರ್ತಿ ಮಹಾರಾಜ್ ಮತ್ತು ಅಮರ ಕೀರ್ತಿ ಮಹಾರಾಜ್ ಸಾನಿಧ್ಯ ವಹಿಸಿದ್ದರು. ಕನಕಗಿರಿ ಜೈನ ಮಠದ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿ, ನರಸಿಂಹರಾಜಪುರ ಜೈನಮಠದ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ, ಸ್ವಾದಿ ಸೋಂದ ಮಠದ ಭಟ್ಟಾಕಳಂಕ ಭಟ್ಟಾರಕ ಸ್ವಾಮೀಜಿ, ಆರತಿಪುರ ಜೈನಮಠದ ಸಿದ್ಧಾಂತ ಕೀರ್ತಿ ಭಟ್ಟಾರಕ ಸ್ವಾಮೀಜಿ, ಹೈಕೋರ್ಟ್ ನ್ಯಾಯಾಧೀಶ ಪಿ.ಎನ್.ದೇಸಾಯಿ, ಐಪಿಎಸ್ ಅಧಿಕಾರಿ ಜಿನೇಂದ್ರ ಖನಗಾವಿ, ಕರ್ನಾಟಕ ಜೈನ್ ಅಸೋಸಿಯೇಷನ್ ನಿರ್ದೇಶಕ ಆರ್.ಜೆ.ಸುರೇಶ್, ಧರ್ಮಸ್ಥಳದ ಸುರೇಂದ್ರ ಕುಮಾರ್, ದಿಗಂಬರ ಜೈನ್ ಪಾರ್ಶ್ವನಾಥ ಸ್ವಾಮಿ ಜಿನ ಮಂದಿರ ಸಮಿತಿ ಅಧ್ಯಕ್ಷ ನಾಗರಾಜ್, ಪತ್ರಕರ್ತ ನಾಗಣ್ಣ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!