ತಿಪಟೂರು: ನಗರ ಠಾಣಾ ವ್ಯಾಪ್ತಿಯ ಶಂಕರನಗರ ಬಡಾವಣೆಯಲ್ಲಿ ಕಳೆದ ವರ್ಷ ಎರಡು ಮನೆಗಳಲ್ಲಿ ಕಳವು ಮಾಡಿದ್ದ ಆರೋಪಿ ಮಂಜುನಾಥ ಅಲಿಯಾಸ್ ಕಲ್ಕೆರೆ ಮಂಜ ಬೆಂಗಳೂರು ಅವರನ್ನು ತಿಪಟೂರು ನಗರ ಪೊಲೀಸ್ ಠಾಣಾ ಪೊಲೀಸರು ಹಿಡಿದು ಆರೋಪಿಯಿಂದ ಕಳ್ಳತನ ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡು ತಿಪಟೂರು ಗೌರವಾನ್ವಿತ ಹಿರಿಯ ಸಿವಿಲ್ ಜಡ್ಜ್ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಘನ ನ್ಯಾಯಾಲಯದ ನ್ಯಾಯಾಧೀಶ ಮಹಮದ್ ಆರೀಫುಲ್ಲಾ ಸಿ.ಎಫ್ ಎರಡೂ ಪ್ರಕರಣಗಳಲ್ಲಿ ತಲಾ 01 ವಷರ್ದ ಸಾಧಾರಣ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ. ಈ ಪ್ರಕರಣಗಳಲ್ಲಿ ಠಾಣಾ ಇನ್ಸ್ಪೆಕ್ಟರ್ ಶ್ರೀಶೈಲಮೂರ್ತಿ ಹಾಗೂ ಎಎಸ್ಐ ನಿಸಾರ್ ಅಹಮದ್ ಅವರು ತನಿಖೆ ನಡೆಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರಗಳನ್ನು ಸಲ್ಲಿಸಿದ್ದು, ಸಹಾಯಕ ಸರ್ಕಾರಿ ಅಭಿಯೋಜಕ ಅನ್ಸರ್ ಪಾಷ.ಎಂ. ಅವರು ವಾದ ಮಂಡಿಸಿದ್ದರು.
ಎರಡು ಪ್ರತ್ಯೇಕ ಕಳವು ಪ್ರಕರಣ: ಆರೋಪಿಗೆ 02 ವರ್ಷ ಜೈಲು
Get real time updates directly on you device, subscribe now.
Prev Post
Next Post
Comments are closed.