ತುಮಕೂರು: ರಾಜ್ಯದಲ್ಲಿಯೇ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಯಕ್ರಮಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಜನರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅರ್ಥವಾಗಿವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್ ನೇತೃತ್ವದಲ್ಲಿ ನಗರದ ಹೆಚ್ಎಂಎಸ್ ಷಾದಿ ಮಹಲ್ ಆವರಣದಲ್ಲಿರುವ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಕೆಪಿಸಿಸಿ ನಿರ್ದೇಶನದಂತೆ ಕುಟುಂಬದ ಹಿರಿಯರಿಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಿಸಿ ಮಾತನಾಡಿ, ಪ್ರತಿಮನೆಯ ಹಿರಿಯ ಮಹಿಳೆಗೆ ಮಾಸಿಕ 2000 ರೂ, ಪ್ರತಿ ಮನೆಗೆ ಮಾಸಿಕ 200 ಯೂನಿಟ್ ವಿದ್ಯುತ್ ಉಚಿತ ಹಾಗೂ ಪಡಿತರ ಚೀಟಿ ಹೊಂದಿರುವ ಕುಟುಂಬದ ಸದಸ್ಯನಿಗೆ 10 ಕೆಜಿ ಅಕ್ಕಿ ವಿತರಿಸುವ ಗ್ಯಾರಂಟಿಯನ್ನು ಕೆಪಿಸಿಸಿಯ ಎಲ್ಲಾ ಹಿರಿಯ ಮುಖಂಡರು ತೀರ್ಮಾನಿಸಿ ಕೈಗೊಂಡಿದ್ದಾರೆ. ಇದನ್ನು ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 100ಕ್ಕು ನೂರರಷ್ಟು ಗೆಲುವುದು ಖಚಿತ, ಹಾಗಾಗಿ ಈಗ ನೀಡಿರುತ್ತಿರುವ ಗ್ಯಾರಂಟಿ ಕಾರ್ಡು ಕೇವಲ ಭರವಸೆಯಲ್ಲ. ವಾಗ್ಧಾನ, ಇದನ್ನು ಪ್ರತಿ ಮನೆ ಮನೆಗೆ ತಲುಪಿಸುವ ಕೆಲಸವನ್ನು ಎಲ್ಲಾ ಕಾರ್ಯಕರ್ತರು, ಮುಖಂಡರು ಮಾಡುತ್ತಿದ್ದೇವೆ. ರಾಜ್ಯದಾದ್ಯಂತ ಇದು ಹೆಚ್ಚು ಪ್ರಚಾರಗೊಳ್ಳುತ್ತಿದೆ ಎಂದು ಚಂದ್ರಶೇಖರಗೌಡ ನುಡಿದರು.
ಡಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರ ನಿರ್ದೇಶನದಂತೆ ಮಾರ್ಚ್ 14 ರಂದು ಕಾಂಗ್ರೆಸ್ ನ ಪ್ರತಿ ಸದಸ್ಯ ಕನಿಷ್ಠ 50 ಮನೆಗಳಿಗೆ ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ ವಿತರಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಸೀದಿ ಪಕ್ಕದಲ್ಲಿಯೇ ಇರುವ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಕಾಂಗ್ರೆಸ್ ಪಕ್ಷದ 2000 ರೂ ಪ್ರತಿ ಮನೆಗೆ, 200 ಯೂನಿಟ್ ವಿದ್ಯುತ್ ಹಾಗೂ 10 ಕೆಜಿ ಅಕ್ಕಿ ನೀಡುವ ಗ್ಯಾರಂಟಿ ಕಾರ್ಡು ವಿತರಿಸಿ ಪ್ರತಿ ಮನೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳ ಬಗ್ಗೆ ತಿಳಿ ಹೇಳಲಾಗುತ್ತಿದೆ. ಜನರು ನಮ್ಮ ಮನವಿಗೆ ಸ್ಪಂದಿಸುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ 150 ಸೀಟು ಗೆಲ್ಲುವುದು ಖಚಿತ ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹೆಚ್.ಸಿ.ಹನುಮಂತಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷದ ಈ ಗ್ಯಾರಂಟಿ ಕಾರ್ಡ್ ಜನರು ಮತ್ತು ಪಕ್ಷದ ನಡುವೆ ನಡೆಯುತ್ತಿರುವ ಒಂದು ಅಗ್ರಿಮೆಂಟ್ ಎನ್ನಬಹುದು. ಕಾಂಗ್ರೆಸ್ ಪಕ್ಷ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಈ ಗ್ಯಾರಂಟಿಯನ್ನು ಜಾರಿಗೆ ತರಲಾಗುವುದು ಎಂದರು.
ಈ ವೇಳೆ ಪಾಲಿಕೆ ಸದಸ್ಯ ಮಹೇಶ್, ವೈ.ಎನ್.ನಾಗರಾಜು, ಸುಜಾತ, ಅಂಬರೀಷ್, ಮುಖಂಡರಾದ ಸುಹೇಲ್ ಅಹಮದ್, ಶಮಿಲ್, ಶಫೀಕ್ ಅಹಮದ್, ಜಗದೀಶ್, ನಯಾಜ್, ರಫಿ, ಶಿವಾಜಿ, ವಹೀದ್ ಇತರರು ಇದ್ದರು.
Comments are closed.