ಪುನೀತ್ ರಾಜ್ ಕುಮಾರ್ ಯುವ ಜನತೆಯ ಸ್ಪೂರ್ತಿ

122

Get real time updates directly on you device, subscribe now.


ತುಮಕೂರು: ಸ್ಪೂರ್ತಿ ಚಿದಾನಂದ ಅಭಿಮಾನಿಗಳ ಬಳಗದ ವತಿಯಿಂದ ಕರ್ನಾಟಕ ರತ್ನ ಡಾ.ಪುನಿತ್ ರಾಜ್ಕುಮಾರ್ ಅವರ ಹುಟ್ಟ ಹಬ್ಬದ ಅಂಗವಾಗಿ ಸ್ಪೂರ್ತಿ ದಿವಸ್ ಕಾರ್ಯಕ್ರಮ ನಗರದ ಟೌನ್ಹಾಲ್ ಪಕ್ಕದಲ್ಲಿರುವ ಪಾರ್ಕ್ನಲ್ಲಿ ಆಯೋಜಿಸಲಾಗಿತ್ತು.
ಯುವ ಜನತೆಯ ಸ್ಪೂರ್ತಿಯಾಗಿರುವ ಡಾ.ಪುನಿತ್ ರಾಜಕುಮಾರ್ ಅವರ ಹುಟ್ಟು ಹಬ್ಬವನ್ನು ವಿಶೇಷವಾಗಿ ಮತ್ತು ವಿಶಿಷ್ಟವಾಗಿ ಆಚರಿಸಬೇಕೆಂಬ ಉದ್ದೇಶದಿಂದ ಸ್ಪೂರ್ತಿ ಚಿದಾನಂದ ಅಭಿಮಾನಿಗಳ ಬಳಗ, ಟೌನ್ಹಾಲ್ ಮುಂಭಾಗದಲ್ಲಿರುವ ಶೆಟ್ಟಾಳಯ್ಯ ಟೀ ಅಂಗಡಿಯಿಂದ ಉಚಿತ ಟೀ ಸೌಲಭ್ಯದ ಜೊತೆಗೆ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

300 ಲೀಟರ್ ಹಾಲಿನಲ್ಲಿ ಇಡೀ ದಿನ ಬರುವ ಸಾರ್ವಜನಿಕರಿಗೆ ಉಚಿತವಾಗಿ ಟೀ ಹಂಚುವ ವ್ಯವಸ್ಥೆ ಮಾಡಿದ್ದಲ್ಲದೆ, ಜನ ನಿಬಿಡ ಪ್ರದೇಶದಲ್ಲಿ ಈ ಭಾಗಕ್ಕೆ ಬರುವ ಜನರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಕರ್ನಾಟಕ ರತ್ನ ಡಾ.ಪುನಿತ್ ರಾಜಕುಮಾರ ಅವರ ಹುಟ್ಟು ಹಬ್ಬದ ಅಂಗವಾಗಿ ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸ್ಪೂರ್ತಿ ಚಿದಾನಂದ್, ನಡೆದಾಡುವ ದೇವರು ಎಂದು ಭಕ್ತರಿಂದ ಕರೆಯಿಸಿಕೊಂಡಿದ್ದ ಡಾ.ಶಿವಕುಮಾರ ಸ್ವಾಮೀಜಿಗಳ ರೀತಿ, ಸಿದ್ದೇಶ್ವರ ಸ್ವಾಮೀಜಿಗಳ ರೀತಿ ಪುನಿತ್ ರಾಜಕುಮಾರ್ ಅವರು ಸಹ ಯಾವುದೇ ಪ್ರಚಾರವಿಲ್ಲದೆ ಸಾವಿರಾರು ಕುಟುಂಬಗಳಿಗೆ ನೆರವು ನೀಡಿ ನೋವಿನಿಂದ ಬಂದವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಬಲಗೈಯಿಂದ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಎಂಬಂತೆ ತಮ್ಮ ದುಡಿಮೆಯ ಒಂದು ಪಾಲನ್ನು ಸಮಾಜ ಸೇವೆಗೆ ಮೀಸಲಿಟ್ಟು, ಜನಾನುರಾಗಿ ಗಳಾಗಿದ್ದಾರೆ. ಅವರ ಸಾವಿನ ವರೆಗೆ ಪುನೀತ್ ರಾಜ್ಕುಮಾರ್ ಅವರು ಮಾಡಿರುವ ಯಾವ ಸಹಾಯವೂ ನಾಡಿನ ಜನತೆಗೆ ಗೊತ್ತಿರಲಿಲ್ಲ. ಇದೇ ನಿಜವಾದ ಸಹಾಯ, ಇದು ಎಲ್ಲರಿಗೂ ಮಾದರಿಯಾಗಬೇಕು. ಹಾಗಾಗಿ ಅಂತಹವರ ಜನ್ಮ ಜಯಂತಿಯನ್ನು ನಮ್ಮ ಅಭಿಮಾನಿಗಳು ಸ್ಪೂರ್ತಿ ದಿನದ ಹೆಸರಿನಲ್ಲಿ ಆಚರಿಸುವ ಮೂಲಕ ವಿಶೇಷತೆ ತೋರಿದ್ದಾರೆ ಎಂದರು.

ಪುನೀತ್ ರಾಜಕುಮಾರ್ ಕಲೆಯಲ್ಲಿ ಎಷ್ಟು ಹೆಸರು ಗಳಿಸಿದ್ದರೋ ಅದಕ್ಕಿಂತಲೂ ಹೆಚ್ಚು ಹೆಸರನ್ನು ಸಮಾಜ ಸೇವೆಯಲ್ಲಿ ಗಳಿಸಿದ್ದಾರೆ. ಶರಣರ ಸೇವೆ ಮರಣದಲಿ ನೋಡು ಎಂಬಂತೆ ಪುನೀತ್ ಅವರ ಸಾವಿನ ನಂತರ ಅವರು ಮಾಡಿರುವ ಧಾನ, ಧರ್ಮಗಳ ಪರಿಚಯ ಕನ್ನಡನಾಡಿನ ಜನರಿಗೆ ಆಯಿತು. ಅದಕ್ಕಾಗಿಯೇ ಸರಕಾರ ಅವರ ಹುಟ್ಟಿದ ದಿನವನ್ನು ಸ್ಪೂರ್ತಿಯ ದಿನ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ನಾವು ಕೂಡ ನಮ್ಮ ಕೈಲಾದ ರೀತಿ ಬಡಜನರಿಗೆ ನೆರವಾಗುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಶಾಸಕ ಜಿ.ಬಿ.ಜೋತಿಗಣೇಶ್, ಆಟೋ ಶಿವಕುಮಾರ್, ಗೋಪಿ, ರಾಮಚಂದ್ರರಾವ್, ಶೆಟ್ಟಾಳಯ್ಯ, ಆಟೋ ಚಾಲಕರು, ಟ್ಯಾಕ್ಸಿ ಡ್ರೈವರ್ಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!