ತುಮಕೂರು: ಸಂಶೋಧನೆಗಳ ನಾಡೆಂದು ಪ್ರಖ್ಯಾತಿ ಹೊಂದಿರುವ ಭಾರತಕ್ಕೆ ಭೇಟಿ ನೀಡಿರುವುದು ಸಂತೋಷ ತಂದಿದೆ, ವಿಜ್ಞಾನ, ಅರ್ಥಶಾಸ್ತ್ರ, ಕಲೆ, ಸಂಗೀತ, ಗಣಿತ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಹೆಚ್ಚು ಸಂಶೋಧನೆಗಳಾದರೆ ಉತ್ಕೃಷ್ಟತೆಯನ್ನು ವಿಶ್ವವಿದ್ಯಾನಿಲಯಗಳು ಸಾಧಿಸಬಹುದು ಎಂದು ಹಂಗೇರಿಯ ಮಿಸ್ಕೋಲ್ ವಿಶ್ವ ವಿದ್ಯಾಲಯದ ಮೆಷಿನ್ ಅಂಡ್ ಪ್ರಾಡಕ್ಟ್ ಡಿಸೈನ್ ಸಂಸ್ಥೆಯ ಮುಖ್ಯಸ್ಥೆ ಪ್ರೊ.ಗೇಬ್ರಿಯೆಲ್ಲಾ ಬೊಗ್ನಾರ್ ಹೇಳಿದರು.
ತುಮಕೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಗಣಿತಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಆಯೋಜಿಸಿದ್ದ ಅಪ್ಲಿಕೇಷನ್ಸ್ ಆಫ್ ಫ್ಲೂಯಿಡ್ ಮೆಕಾನಿಕ್ಸ್ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಹಂಗೇರಿಯ ಮಿಸ್ಕೋಲ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್ಡಿ ಮಾಡಲು ಅವಕಾಶವಿರುವ ಕುರಿತು ಹಾಗೂ ಅಲ್ಲಿ ನೀಡುವ ವಿದ್ಯಾರ್ಥಿ ವೇತನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೇರಣೆ ನೀಡಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಯಾವುದೇ ವಿದ್ಯಾ ಸಂಸ್ಥೆಯು ಉನ್ನತಿ ಕಾಣುವುದು ಅಲ್ಲಿನ ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದದ ಅಪಾರ ಕೊಡುಗೆಯ ಮೇಲೆ, ಶೈಕ್ಷಣಿಕವಾಗಿ ತುಮಕೂರು ವಿವಿ ರಾಜ್ಯದಲ್ಲೇ ಹೆಸರುವಾಸಿಯಾಗಿರುವುದು ಸಹಭಾಗಿತ್ವವೇ ಧ್ಯೇಯವೆಂದು ನಂಬಿ ನಡೆಯುತ್ತಿರುವುದರಿಂದ, ವಿದ್ಯಾರ್ಥಿಗಳು ಹೆಚ್ಚು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್ಜಮ್, ಸ್ನಾತಕೋತ್ತರ ಗಣಿತಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಡಾ. ಪಾಟೀಲ್ ಮಲ್ಲಿಕಾರ್ಜುನ್.ಬಿ, ಡಾ.ಚಂದ್ರಾಲಿ ಬೈಶ್ಯ, ಬೋರೆಗೌಡ.ಎಚ್.ಎಸ್, ಡಾ.ನರಹರಿ.ಎನ್. ಭಾಗವಹಿಸಿದ್ದರು.
Comments are closed.