ತುಮಕೂರು: ಮನುಷ್ಯನಾಗಿ ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡಲಾಗದಿದ್ದರೂ ಚಿಂತೆಯಿಲ್ಲ, ಆದರೆ ಒಬ್ಬನಿಗೂ ಕೆಟ್ಟದನ್ನು ಮಾಡಬಾರದು ಎಂದು ಗಾಯಕ ಶಶಿಧರಕೋಟೆ ಯುವಕರಿಗೆ ಸಲಹೆ ನೀಡಿದ್ದಾರೆ.
ನಗರದ ಮಂಚಕಲ್ ಕುಪ್ಪೆಯ ಹೆಚ್ಎಂಎಸ್ಐಟಿ ಆವರಣದಲ್ಲಿ ಏರ್ಪಡಿಸಿದ್ದ ಹೆಚ್ಎಸ್ಎಸ್ಐಟಿಯ ಸಾಂಸ್ಕೃತಿಕ ಹಬ್ಬ ಬಿಯಾನೋ- 2023 ಉದ್ಘಾಟಿಸಿ ಮಾತನಾಡಿ, ತಂದೆ ತಾಯಿಗೆ ವಿಧೇಯನಾಗಿ, ಗುರು ಹಿರಿಯರಿಗೆ ನೆಚ್ಚಿನ ಶಿಷ್ಯನಾಗಿ, ಸಮಾಜಕ್ಕೆ ಒಳ್ಳೆಯ ವ್ಯಕ್ತಿಯಾಗಿ ಬದುಕಿದರೆ ಇದಕ್ಕಿಂತ ಮತ್ತೊಂದು ಸಾರ್ಥಕ ಜೀವನವಿಲ್ಲ. ಸಾಧ್ಯವಾದರೆ ಒಬ್ಬರಿಗೆ ಒಳ್ಳೆಯದು ಮಾಡಿ ಎಂದರು.
ಭಾರತ ವಿವಿಧೆತೆಯಲ್ಲಿ ಏಕತೆ ಮೂಡಿಸಿಕೊಂಡ ದೇಶ, ದೇವರು, ಧರ್ಮದ ಹೆಸರಿನಲ್ಲಿ ಒಡೆದಾಡುವುದನ್ನು ಬಿಟ್ಟು ಗಾಂಧಿಜಿ ಅವರ ತತ್ವದಂತೆ ದೇವನೊಬ್ಬ ನಾಮ ಹಲವು ಎಂಬ ತತ್ವವನ್ನು ನಾವೆಲ್ಲರೂ ಅಳವಡಿಸಿ ಕೊಳ್ಳೋಣ, ಎಲ್ಲರನ್ನು ಪ್ರೀತಿಸೋಣ, ಮಾಡುವ ಕೆಲಸದಲ್ಲಿ ಶ್ರದ್ದೆ, ಭಕ್ತಿ ಇರಲಿ, ಕಳೆದ 41 ವರ್ಷಗಳ ಹಿಂದೆ ಒಂದು ಪ್ರಾಥಮಿಕ ಶಾಲೆಯೊಂದಿಗೆ ಆರಂಭಗೊಂಡ ಹೆಚ್ಎಂಎಸ್ ಶಿಕ್ಷಣ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದು ನಾಡಿನ ಪ್ರಮುಖ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿದೆ ಎಂದರೆ, ಇದರ ಹಿಂದಿನ ಶಕ್ತಿ ಡಾ.ಎಸ್.ಷಫಿ ಅಹಮದ್, ಅತ್ಯಂತ ಸರಳ, ಸಜ್ಜನಿಕೆಯ ಸಾಕಾರ ಮೂರ್ತಿಯಾದ ಎಸ್.ಷಫಿ ಅಹಮದ್ ಎಲ್ಲರ ಸಹಕಾರದೊಂದಿಗೆ ಈ ಸಂಸ್ಥೆೆಯನ್ನು ಹಂತ ಹಂತವಾಗಿ ಬೆಳೆಸಿ, ಜನ ಸಮುದಾಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್ಎಂಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್.ಷಫಿ ಅಹಮದ್ ಮಾತನಾಡಿ, ನಾವು ಕಳೆದ ಹತ್ತಾರು ವರ್ಷಗಳಿಂದ ಬಿಯಾನೋ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೆವೆ. ಪ್ರತಿವರ್ಷ ಒಬ್ಬೊಬ್ಬ ಕಲಾವಿದರನ್ನು ಕರೆಯಿಸಿ ಅವರಿಂದ ಮಕ್ಕಳಿಗೆ ತಿಳಿ ಹೇಳುವ ಕೆಲಸ ಮಾಡುತಿದ್ದೇವೆ. ಇದು ಮಕ್ಕಳಿಗೆ ಪಠ್ಯದ ಹೊರತಾಗಿ ಸಾಂಸ್ಕೃತಿಕ ವಲಯ ಪರಿಚಯಿಸುವ ಕೆಲಸ ಮಾಡುತ್ತಿದ್ದೇವೆ. ಪದವಿ ಪಡೆದು ಕಾಲೇಜಿನಿಂದ ಹೊರಹೋಗುವ ವಿದ್ಯಾರ್ಥಿಗಳು ಮೊದಲಿಗೆ ದೇಶ ಸೇವೆ, ಆನಂತರದಲ್ಲಿ ತಂದೆ ತಾಯಿಗಳ ಸೇವೆ ಮಾಡುವ ಮೂಲಕ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತೆ ಸಲಹೆ ನೀಡಿದರು.
ಹೆಚ್ಎಂಎಸ್ಐಟಿಯ ಪ್ರಾಂಶುಪಾಲರಾದ ಡಾ.ಕವಿತಾ.ಎ.ಎಸ್, ಉಪ ಪ್ರಾಂಶುಪಾಲ ಡಾ.ಮಂಜುನಾಥ್, ವಿವಿಧ ವಿಭಾಗಗಳ ಡೀನ್ ಗಳಾದ ಡಾ.ಸಿ.ಪಿ.ಲತಾ, ಡಾ.ಶಿವಕುಮಾರ್, ಡಾ.ರಾಜೀವ್,ಡಾ.ಫಾತಿಮಾ, ಪ್ರೊ.ಬಸವರಾಜು, ಪ್ರೊ.ಯೋಗೀಶ್, ಆರ್.ರಾಮಪ್ರಸಾದ್, ಅರ್ಜುನ್ ಇತರರು ಇದ್ದರು.
Comments are closed.