ಪರೀಕ್ಷಾ ಕೇಂದ್ರದ ಮುಂದೆ ಡಿಜೆ ಸದ್ದು- ಜನರ ಆಕ್ರೋಶ

169

Get real time updates directly on you device, subscribe now.


ಶಿರಾ: ಪಿಯು ಪರೀಕ್ಷಾ ಕೇಂದ್ರದ ಮುಂಭಾಗ ಮೈಕ್, ಭಾಷಣ, ಡಿಜೆ ಶಬ್ದ ಮಾಡುವ ಮೂಲಕ ಕುಣಿದು ಕುಪ್ಪಳಿಸಿದ ಬಿಜೆಪಿ ಪಕ್ಷದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಬಿಜೆಪಿ ಪಕ್ಷ ಬರುವ ಚುನಾವಣೆ ನಿಮಿತ್ತ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಸೋಮವಾರ ಇಲ್ಲಿನ ದರ್ಗಾ ವೃತ್ತದಿಂದ ಪ್ರವಾಸಿ ಮಂದಿರ ವೃತ್ತದ ವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಪಕ್ಷದ ಕಾರ್ಯಕ್ರಮಗಳು ಅದರಲ್ಲೂ ಚುನಾವಣೆ ಸಂದರ್ಭ ಎಂದರೆ ಸದ್ದು ಗದ್ದಲ, ಘೋಷಣೆ, ಭಾಷಣ ಮೊದಲಾದುವು ಸಾಮಾನ್ಯ, ಪ್ರಸ್ತುತ ವರ್ಷ ನಡೆಯಲಿರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೂ ಮುನ್ನ ಬಿಜೆಪಿ ನಗರದಲ್ಲಿ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದ್ದು, ಇದರ ಮುಕ್ತಾಯಕ್ಕಾಗಿ ಆಯ್ಕೆ ಮಾಡಿಕೊಂಡಿದ್ದ ಸ್ಥಳ ಮಾತ್ರ ಸೂಕ್ತವಾಗಿರಲಿಲ್ಲ.

ಪ್ರವಾಸಿ ಮಂದಿರವೃತ್ತದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇದ್ದು, ಪ್ರಸ್ತುತ ಪಿಯು ಪರೀಕ್ಷೆಗಳು ನಡೆಯುತ್ತಿರುವ ವಿಚಾರ ಎಲ್ಲರಿಗೂ ತಿಳಿದಿರುವಂಥದ್ದೇ, ಅಂತಹದರಲ್ಲಿ ಪರೀಕ್ಷಾ ಸಮಯದಲ್ಲಿ ಕಾಲೇಜಿನ ಪಕ್ಕದಲ್ಲೇ ಡಿಜೆ ಶಬ್ದ ಮಾಡುವ ಮೂಲಕ ಆಡಳಿತ ಪಕ್ಷ ಸಂಭ್ರಮಾಚರಣೆ ಮಾಡಿದ್ದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಧಾನ ಭುಗಿಲೆದ್ದಿದೆ.

ಈ ಬಗ್ಗೆ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರೂಪೇಶ್ ಕೃಷ್ಣಯ್ಯ ಸಾಮಾಜಿಕ ಜಾಲತಾಣದ ಫೇಸ್ ಬುಕ್ನಲ್ಲಿ ಬರಹವೊಂದನ್ನು ಪೋಸ್ಟ್ ಮಾಡಿದ್ದು, ಪರೀಕ್ಷಾ ಕೇಂದ್ರದ ಮುಂದೆ ಡಿಜೆ ಹಾಕಿಕೊಂಡು ಕುಣಿದು ಕುಪ್ಪಳಿಸಿದ ಸುಸಂಸ್ಕೃತ ಪಕ್ಷದವರಿಗೆ ಅಭಿನಂದನೆಗಳು ಎಂದು ವ್ಯಂಗ್ಯವಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆಯಾಗಿ 47 ಜನ ವಿವಿಧ ಭಾವನೆಗಳನ್ನು ಹೊರಹಾಕಿದ್ದು, ಬಗೆ ಬಗೆಯ ಕಮೆಂಟ್ ಗಳು ವ್ಯಕ್ತವಾಗಿವೆ. ನಗರಸಭೆಯಲ್ಲಿನ ಸಮ್ಮಿಶ್ರ ಆಡಳಿತವನ್ನೂ ಸೇರಿಸಿ ಸಾರ್ವಜನಿಕರು ತ್ರಿಬಲ್ ಇಂಜಿನ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!