ತುಮಕೂರು: ಅತ್ಯಂತ ಪ್ರಭಾವಿ, ಹಿರಿಯ ಮುತ್ಸದಿ, ಸಹಕಾರಿ ಧುರೀಣ, ಪ್ರಖ್ಯಾತ ಉದ್ಯಮಿ ಎನ್.ಆರ್.ಜಗದೀಶ್ ಬುಧವಾರ ನಿಧನ ಹೊಂದಿದರು.
ಟಿಜಿಎಂಸಿ ಸಹಕಾರಿ ಬ್ಯಾಂಕನ್ನು ಅತ್ಯುನ್ನತ ಶ್ರೇಣಿಗೇರಿಸಿರುವ ಕೀರ್ತಿ ಹತ್ತು ಹಲವಾರು ಸಂಘ ಸಂಸ್ಥೆಗಳನ್ನು ಹುಟ್ಟಿಹಾಕಿ ಸಾವಿರಾರು ಜನರಿಗೆ ತಮ್ಮ ಉದ್ದಿಮೆಗಳಲ್ಲಿ ಕೆಲಸ ನೀಡಿರುವುದಲ್ಲದೇ ಹತ್ತಾರು ಸಹಕಾರ ಕ್ಷೇತ್ರಗಳನ್ನು ಕಟ್ಟಿ ಬೆಳೆಸಿರುವ ಹಿರಿಯ ವ್ಯಕ್ತಿಯೂ ಆಗಿರುವ ಎನ್.ಆರ್.ಜಗದೀಶ್ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಧಾನ್ಯ ವರ್ತಕರ ಸಂಘ, ವೀರಶೈವ ಸಮಾಜದ ಹಿರಿಯ ವ್ಯಕ್ತಿಯಾಗಿ ಹಲವು ಸಂಘ-ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿ, ಸಮಾಜಮುಖಿಯಾಗಿ ದುಡಿದಿದ್ದರು.
ಇವರ ನಿಧನಕ್ಕೆ ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿದ್ಯಾವಾಹಿನಿ ಸಂಸ್ಥೆ ಸಂಸ್ಥಾಪಕ ಬಿ.ಜಯಣ್ಣ, ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್, ತುಮಕೂರು ನಗರ ವೀರಶೈವ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು, ನಿವೃತ್ತ ಜಿಲ್ಲಾಧಿಕಾರಿ ಡಾ.ಸಿ ಸೋಮಶೇಖರ್, ನಿವೃತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ, ಸದಾಶಿವಯ್ಯ, ಜ್ಯೋತಿ ಪ್ರಕಾಶ್, ಮಿರ್ಜಿ ಜೋತಿ, ಗಣೇಶ್ ಶರಣ್, ಲಯನ್ ಬಿ.ನಿರಂಜನ್, ಎಂ.ಬಿ. ಶಿವಶಂಕರಪ್ಪ ಇತರರು ಕಂಬನಿ ಮಿಡಿದಿದ್ದಾರೆ.
Comments are closed.