ನೀರು ಒದಗಿಸದೆ, ಬೇರೆಡೆಗೆ ಸಾಗಿಸುವ ತಂತ್ರ!

ಲಿಂಕ್ ಕೆನಾಲ್ ಯೋಜನೆ ಅವೈಜ್ಞಾನಿ ಬೋಗಸ್ ಪ್ರಾಜೆಕ್ಟ್ ಗೆ ಎಸ್ ಪಿಎಂ ಕಿಡಿ

142

Get real time updates directly on you device, subscribe now.


ಕುಣಿಗಲ್: ತಾಲೂಕಿನ ಸಮಗ್ರ ನೀರಾವರಿಗೆ ಅಗತ್ಯ ಎಂದು ಸಂಸದ, ಶಾಸಕರು ಬಿಂಬಿಸುವ ಲಿಂಕ್ಕೆನಾಲ್ ಯೋಜನೆ ಸಂಪೂರ್ಣ ದುರುದ್ದೇಶದಿಂದ ಕೂಡಿದ ಬೋಗಸ್ ಯೋಜನೆ ಎಂದು ಮಾಜಿಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.
ಸುದ್ದಿಗೊಷ್ಟಿಯಲ್ಲಿ ಮಾತನಾಡಿ, ಚುನಾವಣೆ ಸಮಯದಲ್ಲಿ ಕೆಪಿಸಿಸಿ ಅದ್ಯಕ್ಷರು, ಸಂಸದರು, ಶಾಸಕರು ತಾಲೂಕಿಗೆ ಹೇಮೆ ನೀರುಹರಿಸುವ ಲಿಂಕ್ ಕೆನಾಲ್ ಯೋಜನೆ ಅಗತ್ಯವಾಗಿದೆ ಎಂತಲೂ, ಇದಕ್ಕೆ ಅಡ್ಡಿಪಡಿಸಿದವರು ಮತ ಯಾಚನೆಗೆ ಬರುತ್ತಾರೆ ಎಚ್ಚರ ಎಂತಲೂ ವಿನಾಕಾರಣ ಹೇಳುತ್ತಿದ್ದಾರೆ. ಅದರೆ, ವಾಸ್ತವವಾಗಿ ಲಿಂಕ್ ಕೆನಾಲ್ ಯೋಜನೆಯು ಅವೈಜ್ಞಾನಿಕವಾಗಿದೆ, ಅನಾವಷ್ಯಕವಾಗಿದೆ. ಇದರಿಂದ ತಾಲೂಕಿಗೆ ಒಂದು ನಯಪೈಸೆ ಪ್ರಯೋಜನವಿಲ್ಲ. ಸದರಿ ಯೋಜನೆ ಒಂದೆ ಕುಟುಂಬದ ಕೆಪಿಸಿಸಿ ಅಧ್ಯಕ್ಷ ಅಂದಿನ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಡಾ.ರಂಗನಾಥ್ ರವರು ನೀರಾವರಿ ತಜ್ಞರಾಗಿ, ತರಾತುರಿಯಲ್ಲಿ ಜಾರಿಗೊಳಿಸಿ, 640 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದು ಸಾಧುವಲ್ಲದ ಯೋಜನೆಯಾಗಿದೆ.

ಈ ಯೋಜನೆಯು ಸಮರ್ಪಕವಾಗಿಲ್ಲ ಎಂದು ಅಂದು ತಾವು ಸಂಸದರಾಗಿದ್ದಾಗ ಹಲವಾರು ಇಲಾಖೆ ಇಂಜಿನೀಯರ್ ಗಳು ಹೇಳಿದ್ದಾರೆ. ಅದರಿಂದ ಅಂದು ಸಹ ನಾನು ಈ ಬೋಗಸ್ ಯೋಜನೆ ವಿರೋಧಿಸಿದ್ದೆ, ಇಂದು ಸಹ ತಾಲೂಕಿನ ಹಿತದೃಷ್ಟಿಯಿಂದ ವಿರೋಧಿಸುತ್ತೇನೆ. ತಾಲೂಕಿಗೆ ಸಮರ್ಪಕ ಹೇಮೆ ನೀರು ಹರಿಸಬೇಕೆಂದರೆ ವಿತರಣೆ ನಾಲೆ ಅಧುನಿಕರಣ ಮಾಡಬೇಕಾಗಿದೆ ಅದರಂತೆ ಬಿಜೆಪಿ ಸರ್ಕಾರ ಅಡಳಿತಕ್ಕೆ ಬಂದ ನಂತರ ನಾಲೆ ಅಧುನಿಕರಣ ಕಾಮಗಾರಿ ನಡೆಯುತ್ತಿದೆ, ಹೇಮೆ ನೀರು ತಾಲೂಕಿಗೆ ಹರಿದು ಬರುತ್ತದೆ. ಇದಕ್ಕೆ ಸಚಿವ ಮಾಧುಸ್ವಾಮಿ ಸೇರಿದಂತೆ ಹಲವರು ಶ್ರಮಿಸುತ್ತಿದ್ದಾರೆ. ಲಿಂಕ್ ಕೆನಾಲ್ನಿಂದ ಶ್ರೀರಂಗಯೋಜನೆ ಮೂಲಕ ಬೇರಡೆ ನೀರು ಹೋಗುತ್ತದೆ ಹೊರತು ತಾಲೂಕಿಗೆ ನೀರು ಹರಿಯುತ್ತದೆ ಎಂಬುದರಲ್ಲಿ ಸತ್ಯಾಂಶವಿಲ್ಲ.
ಕುಣಿಗಲ್ ತಾಲೂಕನ್ನು ಮಾಜಿ ಸಚಿವರಾದ ಹುಚ್ಚಮಾಸ್ತಿಗೌಡ ಸೇರಿದಂತೆ ಹಲವು ಶಾಸಕರು ಸೇವೆ ಸಲ್ಲಿಸಿ, ನೀರಾವರಿ ಕ್ಷೇತ್ರಕ್ಕೆ ತಮ್ಮದೆ ಅದ ಕೊಡುಗೆ ನೀಡಿದ್ದಾರೆ. ತುಮಕೂರು ಜಿಲ್ಲೆಗೆ ಹೇಮಾವತಿ ನಾಲೆ ಯೋಜನೆ ಅನುಷ್ಠಾನಗೊಳಿಸಿದವರಲ್ಲಿ ಪ್ರಮುಖರಾದ ಮುಖ್ಯ ಇಂಜಿನೀಯರ್ ದಿ.ರತ್ನಾನಾಯಕ್ ಹಾಗೂ ಯೋಜನೆಯ ಮೂಲಪುರುಶರಾದ ದೇವರಾಜಅರಸು, ಹುಚ್ಚಮಾಸ್ತಿಗೌಡ, ವೈ.ಕೆ.ರಾಮಯ್ಯ ಸೇರಿದಂತೆ ಹಲವಾರು ಮಂದಿ ಇದ್ದು ಇವರಾರ ಕಲ್ಪನೆಗೂ ಬಾರದ, ರಾಜ್ಯದ ಯಾವುದೇ ಮೂಲೆಯಲ್ಲಿ ಜಾರಿಯಲ್ಲಿ ಇರದ ಲಿಂಕ್ ಕೆನಾಲ್ ಯೋಜನೆ ಇವರಿಗೆ ಹೇಗೆ ಬಂದಿತು ಎಂಬುದೆ ಪ್ರಶ್ನೆ.

ಐದುವರ್ಷ ಪೂರೈಕೆ ಮಾಡುತ್ತಿರುವ ಶಾಸಕರಿಗೆ, ಸಂಸದರಿಗೆ ಕಸಬಾ, ಹುಲಿಯೂರುದುರ್ಗ ಹೋಬಳಿಗೆ ಹೇಮೆ ನೀರು ಹರಿಸುವ ನಾಲಾ ಕಾಮಗಾರಿಗೆ ಚಾಲನೆ ನೀಡುವ ಬಗ್ಗೆ ಗಮನ ಹರಿಸಿಲ್ಲ. ಶಿಂಷಾನದಿಯ ಹೆಚ್ಚುವರಿ ನೀರು ಹುಲಿಯೂದುರ್ಗಕ್ಕೆ ಹರಿಸುವ ಬಗ್ಗೆಯಾಗಲಿ, ಮಾರ್ಕೋನಹಳ್ಳಿ-ಮಂಗಳಾ ಲಿಂಕ್ ಕೆನಾಲ್ ಜಾರಿ ಮಾಡಿ ಅಮೃತೂರು ಹೋಬಳಿಯ ಹಲವು ಕೆರೆತುಂಬಿಸುವ ಯೋಜನೆ ಬಗ್ಗೆಯಾಗಲಿ ಇಂಜಿನಿಯರ್ ಸಭೆ ನಡೆಸಿ, ಸ್ಥಳ ಪರಿಶೀಲನೆ ಮಾಡಲಿಲ್ಲ. ಮಾರ್ಕೋನಹಳ್ಳಿ ಜಲಾಶಯದ ಬಳಿ ಒಂದು ಸೇತುವೆ ನಿರ್ಮಾಣದ ಬಗ್ಗೆ ಇವರಿಗೆ ಯೋಚನೆ ಬರಲಿಲ್ಲ. ಜಲಾಶಯ ತುಂಬಿದಾಗ ಜಲಾಶಯದ ಏರಿ ಮೇಲೆ ವಾಹನ ಒಡಾಡುವಂತೆ ಅಗಿತ್ತು. ಸಂಸದ, ಶಾಸಕರ ಇವರು ನಿರ್ಲಕ್ಷ್ಯದಿಂದ ಕಸಬಾ, ಹುಲಿಯೂರುದುರ್ಗ ಹೋಬಳಿಗೆ ನೀರು ಕಲ್ಪಿಸುವ ಅವಕಾಶ ತಪ್ಪಿದಂತಾಗಿದೆ ಎಂದರು.

ಲಿಂಕ್ ಕೆನಾಲ್ ಕಾಮಗಾರಿ ಅನುಷ್ಠಾನ ಮಾಡಿದರೆ ಎಡೆಯೂರು ನೀರು ಹರಿಸುವ ಡಿ-26ವಿತರಣೆ ನಾಲೆಗೆ ನೀರುಬರುವುದಿಲ್ಲ ಅಗ ಎಡೆಯೂರುಹೋಬಳಿಗೆ ಹೇಮೆ ನೀರು ಹರಿಯುವುದಿಲ್ಲ. ಸಾಧುವಲ್ಲದ ಕೇವಲ ಮೂರೆ ಮಂದಿ ನೀರಾವರಿ ತಜ್ಞರಾಗಿ ಲಿಂಕ್ಕೆನಾಲ್ ಎಂಬ ಬೋಗಸ್ ಯೋಜನೆ ಸೃಷ್ಟಿಸಿ, ತಾಲೂಕಿನ ಜನತೆಗೆ ಮಂಕು ಬೂದಿ ಎರಚುವ ಕಾಂಗ್ರೆಸ್ ಮುಖಂಡರ ಬಗ್ಗೆ ಜನರು ಎಚ್ಚರದಿಂದ ಇರಬೇಕು. ಮುಂದಿನ ದಿನಗಳಲ್ಲಿ ಇವರ ಮತ್ತಷ್ಟು ವಿಷಯಗಳನ್ನು ಜನತೆ ಮುಂದೆ ಇಡುತ್ತೇನೆ ಎಂದರು. ಮಾಧ್ಯಮ ವಕ್ತಾರ ಮನೋಹರಗೌಡ, ಮುಖಂಡ ಕಪನಿಪಾಳ್ಯ ನಾರಾಯಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!