ಕುಣಿಗಲ್: ಚಿಕಿತ್ಸೆಗೆ ಬಂದ ವೃದ್ದ ಸಾವನ್ನಪ್ಪಿದ್ದು ವೈದ್ಯರ ನಿರ್ಲಕ್ಷ್ಯ ಎಂದು ರೋಗಿ ಕಡೆಯವರು ಅರೋಪಿಸಿದರೆ. ರೋಗಿಯು ಹೃದಯಘಾತದಿಂದ ಮೃತಪಟ್ಟಿದ್ದಾನೆಂದು ವೈದ್ಯರು ಹೇಳಿಕೆ ನೀಡಿದ ಘಟನೆ ನಡೆದಿದೆ.
ತಾಲೂಕಿನ ಕಸಬಾ ಹೋಬಳಿಯ ವಾಜರಪಾಳ್ಯದ ಗಂಗಾಧರಯ್ಯ(56)ನನ್ನು ಹೊಟ್ಟೆ ಉಬ್ಬರ ಎಂದು ಶುಕ್ರವಾರ 12 ಗಂಟೆಗೆ ಪತ್ನಿ ರಂಗಮ್ಮ ಪಟ್ಟಣದ ಸಾರ್ವಜನಿಕ ಅಸ್ಪತ್ರೆಗೆ ಕರೆತಂದಿದ್ದು, ವೈದ್ಯರು ಸ್ಕ್ಯಾನಿಂಗ್ ಗೆ ಸೂಚಿಸಿದರು. ಕೂಡಲೆ ಸ್ಕ್ಯಾನಿಂಗ್ ಮಾಡಿ, ರೋಗಿಯ ಯಕೃತ್ತು, ಮೂತ್ರಪಿಂಡ ಸಮಸ್ಯೆ ಇದೆ ಎಂದು ಗುರುತಿಸಿದ ವೈದ್ಯರು, ಮುಂದಿನ ಚಿಕಿತ್ಸೆಗೆ ಸೂಚಿಸಿದ್ದರು ಎನ್ನಲಾಗಿದೆ.
ಕೆಲಹೊತ್ತಿನ ನಂತರ ರೋಗಿ ಮೃತಪಟ್ಟಿದ್ದು ಸಾರ್ವಜನಿಕ ಅಸ್ಪತ್ರೆಯ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಅವರ ನಿರ್ಲಕ್ಷ್ಯದಿಂದಲೆ ರೋಗಿ ಮೃತಪಟ್ಟಿದ್ದಾರೆ ಎಂದು ಅರೋಪಿಸಿ ರೋಗಿಯ ಕಡೆಯವರ ಪರವಾಗಿ ಬಿಜೆಪಿ ಅಲ್ಪಸಂಖ್ಯಾತ ಮೊರ್ಚದ ಸಲ್ಮಾನ್ ಖಾನ್, ತಾಲೂಕು ಜೆಡಿಎಸ್ ವಕ್ತಾರ ತರಿಕರೆಪ್ರಕಾಶ್ ಅಗಮಿಸಿ, ವೈದ್ಯರಿಂದ ಘಟನೆ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಮರತನ ಪತ್ನಿ ಸ್ಕ್ಯಾನಿಂಗ್ ಮಾಡಿಸಿ ತಂದು ಒಂದು ಗಂಟೆ ಮಲಗಿಸಿದ್ದರೂ ಯಾರೂ ಚಿಕಿತ್ಸೆ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೋಗಿ ಕಡೆಯವರ ಅರೋಪ ನಿರಾಕರಿಸಿದ ವೈದ್ಯ ನವೀನ್, ರೋಗಿಗೆ ಕೆಲ ಅಂಗಾಗಳ ತೊಂದರೆ ಇದ್ದು, ಚಿಕಿತ್ಸೆ ನೀಡುವ ವೇಳೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದರಲ್ಲಿ ಸಾರ್ವಜನಿಕ ಅಸ್ಪತ್ರೆಯ ವೈದ್ಯರ ಕರ್ತವ್ಯ ನಿರ್ಲಕ್ಷ್ಯವಿಲ್ಲ ಎಂದು ಸ್ಪಷ್ಟ ಪಡಿಸಿದರು.
ತರಿಕೆರೆ ಪ್ರಕಾಶ್, ಸಾರ್ವಜನಿಕ ಅಸ್ಪತ್ರೆಗೆ ಬಡರೋಗಿಗಳು ಬರುತ್ತಾರೆ, ಅಸ್ಪತ್ರೆ ವೈದ್ಯರು ಕರ್ತವ್ಯ ನಿರ್ಲಕ್ಷ್ಯ ಮಾಡದೆ ಇರುವ ವ್ಯವಸ್ಥೆಯಲ್ಲೆ ಉತ್ತಮ ಚಿಕಿತ್ಸೆ ನೀಡುವಂತೆ ಅಗ್ರಹಿಸಿ, ಘಟನೆ ಮರುಕಳಿಸಿದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿ, ಮೃತನ ಕಡೆಯವರಿಗೆ ಮನವರಿಕೆ ಮಾಡಿಕೊಟ್ಟ ಮೇರೆಗೆ ಪರಿಸ್ಥಿತಿ ತಿಳಿಗೊಂಡಿತು.
Get real time updates directly on you device, subscribe now.
Prev Post
Next Post
Comments are closed.