ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಚಾಲನೆ

161

Get real time updates directly on you device, subscribe now.


ತುಮಕೂರು: ನಗರದ 23ನೇ ವಾರ್ಡಿಗೆ ಸೇರಿದ ಜಗನ್ನಾಥಪುರದಿಂದ ನವಿಲಹಳ್ಳಿವರೆಗೆಗಿನ ಸುಮಾರು 2.20 ಕಿ.ಮೀ. ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ 48ರಿಂದ ಆಗ್ನಿಬನ್ನಿರಾಯ ಬಡಾವಣೆ ಮತ್ತು ಸಾಯಿ ಬಡಾವಣೆಗೆ ಸಂಪರ್ಕ ಕಲ್ಪಿಸುವ 7.1ಕಿಮಿ.ಯನ್ನು ಲೋಕೋಪಯೋಗಿ ಇಲಾಖೆಯ ಎಆರ್ಎಫ್ ಅನುದಾನದಲ್ಲಿ ಅಭಿವೃದ್ದಿ ಪಡಿಸುತ್ತಿದ್ದು, ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚಾಲನೆ ನೀಡಿದರು.

ನವಿಲಹಳ್ಳಿ ಗ್ರಾಮ ಹಾಗೂ ಜಗನ್ನಾಥಪುರದ ಭಜನಾ ಮಂದಿರ ಮತ್ತು ಅಗ್ನಿಬನ್ನಿರಾಯ ಬಡಾವಣೆ ಬಳಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಲೋಕೋಪಯೋಗಿ ಇಲಾಖೆಯ ಎಆರ್ಎಫ್ ಅನುದಾನದಲ್ಲಿ ಜಗನ್ನಾಥಪುರದಿಂದ ನವಿಲಹಳ್ಳಿವರೆಗಿನ ಸುಮಾರು 2.20 ಕಿ.ಮಿ.ರಸ್ತೆಯನ್ನು 1.85 ಕೋಟಿ ಅನುದಾನದಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ. ರಸ್ತೆ ಯಾವ ಸ್ಥಿತಿಯಲ್ಲಿದೆಯೋ ಅದೇ ಸ್ಥಿತಿಯಲ್ಲಿ ಡಾಂಬರೀಕರಣ ನಡೆಯಲಿದೆ. ಇದರ ಜೊತೆಗೆ ರಾಷ್ಟ್ರೀಯ ಹೆದ್ದಾರಿಯಿಂದ ಅಗ್ನಿ ಬನ್ನಿರಾಯ ಬಡಾವಣೆ ಮತ್ತು ಸಾಯಿ ಲೇಔಟ್ ಗೆ ಸಂಪರ್ಕ ಕಲ್ಪಿಸುವ ಸುಮಾರು 710 ಮೀಟರ್ ರಸ್ತೆಯನ್ನು 58 ಲಕ್ಷ ರೂಗಳಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದೆ. ಮುಂದಿನ ಒಂದು ತಿಂಗಳಲ್ಲಿ ರಸ್ತೆ ಅಭಿವೃದ್ದಿ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.
ಜಗನ್ನಾಥಪುರ ಮತ್ತು ನವಿಲಹಳ್ಳಿ ರಸ್ತೆಯ ಅಭಿವೃದ್ದಿಯಿಂದ ಈ ಭಾಗದ ಸ್ವಾಂದೇನಹಳ್ಳಿ, ವಡ್ಡರಹಳ್ಳಿ, ಮುತ್ಸಂದ್ರ ಗ್ರಾಮಗಳಿಗೆ ತೆರಳುವ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಇದೇ ಮೊದಲ ಬಾರಿಗೆ ನಗರದ ಹೊರವಲಯದಲ್ಲಿರುವ ರಸ್ತೆಗಳಿಗೆ ಅನುದಾನ ನೀಡಿ ರಸ್ತೆ ಅಭಿವೃದ್ದಿ ಪಡಿಸಲಾಗುತ್ತಿದೆ ಎಂದು ಶಾಸಕ ಜ್ಯೋತಿಗಣೇಶ್ ನುಡಿದರು.

ತುಮಕೂರು ನಗರದ ಅಣೆತೋಟದ ಮೂಲಕ ಜಗನ್ನಾಥಪುರ ಸಂಪರ್ಕಿಸಲು ರಾಷ್ಟ್ರೀಯ ಹೆದ್ದಾರಿ 48ರ ಬೈಪಾಸ್ ರಸ್ತೆಗೆ ಜಗನ್ನಾಥಪುರದ ಬಳಿ ಒಂದು ಅಂಡರ್ ಪಾಸ್ ನಿರ್ಮಿಸಲು ಈಗಾಗಲೇ ಸಂಸದರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ. ನೆಲಮಂಗಲದಿಂದ ತುಮಕೂರಿ ಲಿಂಗಾಪುರದವರೆಗೆ ಈ ರಸ್ತೆ 8 ಪಥದ ರಸ್ತೆಯಾಗಲಿದ್ದು, ಈ ವೇಳೆ ಅಂಡರ್ ಪಾಸ್ ನಿರ್ಮಾಣ ಮಾಡುವ ನಿರೀಕ್ಷೆಯಿದೆ. ಯಾವ ರೀತಿ ಜನರಿಗೆ ಅನುಕೂಲ ಮಾಡಿಕೊಡಬಹುದು ಎಂಬ ನಿಟ್ಟಿನಲ್ಲಿ ಎನ್.ಹೆಚ್ಎ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಇದರ ಜೊತೆಗೆ ಸರ್ವಿಸ್ ರಸ್ತೆಯನ್ನು ಸಹ ಅಭಿವೃದ್ದಿ ಪಡಿಸಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಈ ವೇಳೆ 23ನೇ ವಾರ್ಡಿನ ಕೌನ್ಸಿಲರ್ ಹಾಗೂ ಪಾಲಿಕೆಯ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಟೂಡಾ ಸದಸ್ಯ ಸತ್ಯಮಂಗಲ ಜಗದೀಶ್, ಮುಖಂಡರಾದ ಅಣೆತೋಟ ಶ್ರೀನಿವಾಸ್, ಪಿಡಬ್ಲ್ಯೂಡಿ ಎಇಇ ವಿಜಯಕುಮಾರ್, ಎಇ ಗಳಾದ ಸಿದ್ದಪ್ಪ, ಸಂಪತ್ ಕುಮಾರ್, ಮುಂತಾದ ಮುಖಂಡರುಗಳು ಹಾಗೂ ನವಿಲಹಳ್ಳಿ, ಜಗನ್ನಾಥಪುರ ಗ್ರಾಮಸ್ಥರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!