ಅದ್ದೂರಿ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಆಚರಣೆಗೆ ಸಿದ್ಧತೆ

128

Get real time updates directly on you device, subscribe now.


ತುಮಕೂರು: ಕರ್ನಾಟಕ ಸರಕಾರ ತಿಗಳ ಸಮುದಾಯದ ಕುಲದೈವ ಶ್ರೀಅಗ್ನಿ ಬನ್ನಿರಾಯಸ್ವಾಮಿ ಜಯಂತಿಯನ್ನು ಮಾರ್ಚ್ 28 ರಂದು ನಗರದ ಅಮಾನಿಕೆರೆಯ ಗಾಜಿನಮನೆಯಲ್ಲಿ ಸರಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸದರಿ ಕಾರ್ಯಕ್ರಮವನ್ನು ಅದ್ದೂರಿ ಮತ್ತು ಅರ್ಥಪೂರ್ಣಗೊಳಿಸುವ ಸಲುವಾಗಿ ಹನುಮಂತಪುರದ ಶ್ರೀಕೋಲ್ಲಾಪುರದಮ್ಮ ಸಮುದಾಯ ಭವನದಲ್ಲಿ ತುಮಕೂರು ಜಿಲ್ಲಾ ಅಗ್ನಿವಂಶ ತಿಗಳ ಸಮುದಾಯದ ಯಜಮಾನರು, ಅಣೆಕಾರರು, ಮುದ್ರೆಯವರು ಹಾಗೂ ಸಮುದಾಯದ ಜನಪ್ರತಿನಿಧಿಗಳು, ಮುಖಂಡರ ಪೂರ್ವಭಾವಿ ಸಭೆ ನಡೆಯಿತು.

ತಿಗಳ ಸಮುದಾಯದ ಅಣೆಕಾರರಾದ ಹನುಮಂತರಾಜು, ಶಿವಕುಮಾರ್, ಗಂಗಹನುಮಯ್ಯ, ಸಮಾಜದ ಮುಖಂಡರಾದ ಟಿ.ಎಲ್.ಕುಂಭಯ್ಯ, ಕುಂಭಿನರಸಯ್ಯ, ಹಿರಿಯರಾದ ಹನುಮದಾಸ್, ರೇವಣ್ಣಸಿದ್ದಯ್ಯ, ರವೀಶ್ ಜಹಾಂಗೀರ್, ಪಾಲಿಕೆ ಉಪ ಮೇಯರ್ ಟಿ.ಕೆ.ನರಸಿಂಹಮೂರ್ತಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಹಾಗೂ ತುಮಕೂರು ನಗರ ಹಾಗೂ ಗ್ರಾಮಾಂತರದ ತಿಗಳ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ಸಭೆಯಲ್ಲಿ ಸಮಸ್ತ ತಿಗಳ ಸಮುದಾಯದ ಕುಲದೈವ ಶ್ರೀಅಗ್ನಿಬನ್ನಿರಾಯ ಸ್ವಾಮಿ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಂಡ ಸರಕಾರಕ್ಕೆ, ಇದಕ್ಕಾಗಿ ಶ್ರಮಿಸಿದ ಮಂತ್ರಿಗಳು, ಶಾಸಕರು, ಸಮುದಾಯದ ಮುಖಂಡರಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು.

ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಮಾರ್ಚ್ 28ರ ಬೆಳಗ್ಗೆ 10 ಗಂಟೆಗೆ ನಗರದ ಟೌನ್ಹಾಲ್ ವೃತ್ತದಿಂದ ಕಾರ್ಯಕ್ರಮ ನಡೆಯುವ ಗಾಜಿನ ಮನೆಯವರೆಗೆ ಹೂವಿನಿಂದ ಅಲಂಕೃತಗೊಂಡ ರಥದಲ್ಲಿ ಶ್ರೀಅಗ್ನಿಬನ್ನಿರಾಯ ಸ್ವಾಮಿ ಭಾವಚಿತ್ರದ ಮೆರವಣಿಗೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲೆಯ ಎಲ್ಲಾ ಸಚಿವರು, ಸ್ಥಳೀಯ ಶಾಸಕರು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ಪಾಲಿಕೆಯ ಸದಸ್ಯರು ಹಾಗೂ ತಿಗಳ ಸಮುದಾಯದ ಎಲ್ಲಾ ಮುಖಂಡರು ಪಾಲ್ಗೊಳ್ಳಲಿದ್ದು, ಕಾರ್ಯಕ್ರಮದಲ್ಲಿ ಎಲ್ಲಾ ತಿಗಳ ಸಮುದಾಯದ ಮುಖಂಡರು, ಸಮಾಜ ಭಾಂದವರು ಭಾಗವಹಿಸುವ ಮೂಲಕ ಸಮಸ್ತ ತಿಗಳ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿದ ಹಾಗೂ ಅಗ್ನಿ ಬನ್ನಿರಾಯಸ್ವಾಮಿ ಜಯಂತಿಗೆ ಆದೇಶ ಮಾಡಿದ ಸರಕಾರಕ್ಕೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತುಮಕೂರು ಉಪ ಮೇಯರ್ ಟಿ.ಕೆ.ನರಸಿಂಹ ಮೂರ್ತಿ ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!