ಕುಣಿಗಲ್: ಸೋಲುವ ಅಭ್ಯರ್ಥಿಯನ್ನು ಯಾವ ಮಾನದಂಡದ ಆಧಾರದ ಮೇಲೆ ಕಾಂಗ್ರೆಸ್ ಪಕ್ಷದ ವರಿಷ್ಠರು ಟಿಕೆಟ್ ನೀಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ, ಕರ್ನಾಟಕದಲ್ಲಿ ಇರುವುದು ಕೆಪಿಸಿಸಿಯಲ್ಲ. ಕನಕಪುರ ಕಾಂಗ್ರೆಸ್ ಪಕ್ಷ, ಇಲ್ಲಿ ಕೆಪಿಸಿಸಿ ಅಧ್ಯಕ್ಷರಿಗಿಂತ ಅವರ ಸಹೋದರ ಸಂಸದರ ಕೈವಾಡ ಹೆಚ್ಚು ಎಂದು ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡ ಹೇಳಿದರು.
ಚುನಾವಣೆಗೆ ಜನರು ಮತ ಚಲಾಯಿಸಿ ಆಯ್ಕೆ ಮಾಡಬೇಕು, ಹೀಗಾಗಿ ಜನರ ಅಭಿಪ್ರಾಯ ಮಾನದಂಡ ಪಡೆದು ಟಿಕೆಟ್ ನೀಡಲಾಗುವುದು ಎಂದು ಪಕ್ಷದ ಹೈಕಮಾಂಡ್ ಹೇಳಿತ್ತು. ತಾಲೂಕಿನಲ್ಲಿ ನಡೆದ ಹಲವಾರು ಸರ್ವೇಯಲ್ಲೂ ಹಾಲಿ ಶಾಸಕರ ಹಿನ್ನಡೆ ಇತ್ತು. ಆದರೆ ಟಿಕೆಟ್ ಅವರಿಗೆ ನೀಡುವ ಮೂಲಕ ಪಕ್ಷದಲ್ಲಿ ಯಾವ ಮಾನದಂಡ ಅನುಸರಿಸಲಾಗಿದೆ ಎಂಬುದು ಅರಿವಾಗುತ್ತಿಲ್ಲ. ಕನಕಪುರ ಕಾಂಗ್ರೆಸ್ ಪಕ್ಷದ ಸ್ವಜನ ಪಕ್ಷಪಾತ ರಾಜಕಾರಣದಿಂದಾಗಿ ಈ ರೀತಿ ನಡೆಯುತ್ತಿದೆ. ಬಿಜೆಪಿ ಪಕ್ಷದೊಂದಿಗೂ ಒಳಮೈತ್ರಿ ಮಾಡಿಕೊಂಡು ಕನಕಪುರದಲ್ಲಿ ಯಾವುದೇ ಗಟ್ಟಿ ಅಭ್ಯರ್ಥಿಯನ್ನು ಬಿಜೆಪಿ ಹಾಕುತ್ತಿಲ್ಲ. ಬೇರೆ ವಿರೋಧ ಪಕ್ಷದ ಸ್ಥಿತಿಯೂ ಇದೆ ಆಗಿದೆ ಎಂದರು.
ತಾವು ತಮ್ಮ ಅವಧಿಯಲ್ಲಿ ಕುಣಿಗಲ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಮಾಡಿರುವ ಜನಪರ ಅಭಿವೃದ್ಧಿ ಕಾರ್ಯಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗುತ್ತೇನೆ. ನಾನು ಕಟ್ಟಾ ಕಾಂಗ್ರೆಸಿಗ, ಈಗಿನ ಕಾಂಗ್ರೆಸ್ಸಿಗರಿಗೆ ಇಂದಿರಾಗಾಂಧಿ, ರಾಜೀವ್ ಗಾಂಧಿ ಬೇಕಿಲ್ಲ. ಆದರೆ ನಾನು ಇಂದಿರಾ ಗಾಂಧಿ ಭಾವಚಿತ್ರ ಹಾಕಿಕೊಂಡು ಮುಂದಿನ ಚುನಾವನೆಯಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಜನತಾ ಜನಾರ್ಧರ ಮುಂದೆ ಹೋಗುತ್ತೇನೆ, ಇದು ಸತ್ಯ ಎಂದರು. ಮುಖಂಡರ ಸಂತೋಶ್, ಶ್ರೀನಿವಾಸ ಗೌಡ ಇದ್ದರು.
Comments are closed.