ಶಿರಾ ತಾಲ್ಲೂಕು ಅಭಿವೃದ್ಧಿಗೆ ಶ್ರಮಿಸಿದ್ದೇನೆ: ಟಿಬಿಜೆ

73

Get real time updates directly on you device, subscribe now.


ಪಟ್ಟನಾಯಕನಹಳ್ಳಿ: ಶಿರಾ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ 10 ವರ್ಷಗಳ ನನ್ನ ಅಧಿಕಾರ ಅವಧಿಯಲ್ಲಿ 3250 ಕೋಟಿ ರೂಪಾಯಿ ಅನುದಾನವನ್ನು ಶಿರಾ ಕ್ಷೇತ್ರಕ್ಕೆ ತರುವ ಮೂಲಕ ಅಭಿವೃದ್ಧಿ ಮಾಡಿದ್ದೇನೆ. ಶಿರಾ ಕ್ಷೇತ್ರದ ಜನತೆ ಈ ಬಾರಿ ಗುದ್ದಲಿ ಪೂಜೆ ಶಾಸಕರನ್ನು ಅರಿಸಿಕೊಳ್ಳುತ್ತೀರಾ ಅಥವಾ ಅಭಿವೃದ್ಧಿ ಕೆಲಸ ಮಾಡಿ ಮತ್ತಷ್ಟು ಕೆಲಸ ಮಾಡಲು ಯೋಚಿಸಿರುವ ನನಗೆ ಮತ ನೀಡುತ್ತೀರಾ ಯೋಚಿಸಿ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಬೆಟ್ಟಪ್ಪನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಚಂಗಾವರ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಡವ ಮತ್ತು ರೈತರ ಕಷ್ಟ ಅರಿತು ಉತ್ತಮ ಆಡಳಿತ ನೀಡುವಂತಹ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ರಾಜ್ಯದಲ್ಲಿ ಅಧಿಕಾರ ದೊರೆಯಲಿದೆ ಎಂಬ ವಿಶ್ವಾಸ ನನಗಿದೆ. ನೀವು ನನಗೆ ಆಶೀರ್ವಾದ ಮಾಡಬೇಕು ಎಂದರು.

ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ ಬಡವರ ಬದುಕಿನ ಮೇಲೆ ಬರೆ ಎಳೆದಿರುವ ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರುವಂತೆ ಮಾಡಲು ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚು ಸಂಘಟಿತರಾಗಿ ಕೆಲಸ ಮಾಡಬೇಕಿದೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ, ಕಾಡುಗೊಲ್ಲ ಮುಖಂಡ ಶ್ರೀನಿವಾಸ್ ಬಾಬು ಮಾತನಾಡಿ, ಜಯಚಂದ್ರ ಅವರು ಶಾಸಕರಾಗಿದ್ದ ಸಮಯದಲ್ಲಿ ಕಾಡುಗೊಲ್ಲ ಸಮುದಾಯದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಒಂದು ಎಕರೆ ಜಮೀನನ್ನು ಮಂಜೂರು ಮಾಡಿಸಿ 75 ಲಕ್ಷ ಅನುದಾನ ಕೊಟ್ಟಿದ್ದರು. ಅಲ್ಲದೆ ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮ ಮಾಡಲು ಶ್ರಮ ಹಾಕಿದ್ದನ್ನು ಮರೆಯಬಾರದು. ಸತ್ತ ಕುರಿಗೆ 5 ಸಾವಿರ ರೂಪಾಯಿ ಪರಿಹಾರ ಧನ ನೀಡುವಂತಹ ಯೋಜನೆ ಜಾರಿಗೊಳಿಸಿ ಕುರಿಗಾಯಿಗಳ ಹಿತ ರಕ್ಷಣೆ ಮಾಡಿದ್ದರು ಎಂದರು .
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಕೆಪಿಸಿಸಿ ಸದಸ್ಯ ಟಿ.ಲೋಕೇಶ್, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸುದರ್ಶನ್, ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಬಾಬು, ಚಂಗಾವರ ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ಬೊಮ್ಮಕ್ಕ, ಶಂಕರೇಗೌಡ, ಭೂತಮ್ಮ ನಾಗರಾಜ್, ಮುಖಂಡರಾದ ಶಿವು ಚಂಗಾವರ, ಕಾಡುಗೊಲ್ಲ ಮುಖಂಡ ಡಿಎಂಪಿ ಕರಿಯಣ್ಣ , ಜಯಪ್ರಕಾಶ್, ರಾಮಕೃಷ್ಣ, ಗಿರೀಶ್, ಕೃಷ್ಣಪ್ಪ, ನಾಗಮ್ಮ, ಸಂತೋಷ್, ಹನುಮಂತರಾಯಪ್ಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!