ಶಾಸಕರ ಅನರ್ಹತೆ ಜಿಲ್ಲೆಗೆ ಕಪ್ಪು ಚುಕ್ಕೆ

ನ್ಯಾಯಾಲಯದ ತೀರ್ಪು ಐತಿಹಾಸಿಕ: ಸುರೇಶ್ ಗೌಡ

86

Get real time updates directly on you device, subscribe now.


ತುಮಕೂರು: 2018 ರ ಎಂಎಲ್ಎ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರದ ಈಗಿನ ಶಾಸಕರು ಸುಮಾರು 16 ಸಾವಿರ ಮಕ್ಕಳಿಗೆ ಪಾಲಿಸಿ ನಕಲಿ ಇನ್ಶುರೆನ್ಸ್ ಬಾಂಡ್ ನೀಡಿ ಆಮಿಷವೊಡ್ಡಿ ಮತದಾರರನ್ನ ಸೆಳೆಯುವ ಕೆಲಸ ಮಾಡಿದ್ದರು. ನಕಲಿ ಬಾಂಡ್ಗಳ ವಿತರಣೆ ಮಾಡುವ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಚುನಾವಣಾ ಅಧಿಕಾರಿಗಳಿಗೆ ಚುನಾವಣಾ ಅಕ್ರಮ ಎಸಗಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈ ಸಂಬಂಧ ನ್ಯಾಯಾಲಯದ ಮೊರೆ ಹೋದ ಪರಿಣಾಮ ನಮ್ಮ ಪರ ತೀರ್ಪು ಬಂದಿಟ್ಟು ಇದೊಂದು ಐತಿಹಾಸಿಕ ತೀರ್ಪು ಎಂದು ಮಾಜಿ ಶಾಸಕ ಸುರೇಶ್ ಗೌಡ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 2018 ರ ಮೇ 12 ರ ಚುನಾವಣೆ ಇತ್ತು. ಮೇ 8 ರಂದು ನಕಲಿ ಬಾಂಡ್ ರದ್ದು ಮಾಡ್ತಾರೆ. ಇದಾದ ಬಳಿಕ ಹಿರೇಹಳ್ಳಿ ಮಹೇಶ್ ಹಾಗೂ ಶಾರದಮ್ಮ ಎಂಬುವವರು ಸುದ್ದಿಗೊಷ್ಠಿ ನಡೆಸಿ ಇದು ಒರಿಜಿನಲ್ ಬಾಂಡ್, ನಕಲಿ ಅಲ್ಲಾ ಎಂದು ಹೇಳುತ್ತಾರೆ. ಗೂಳೂರಿನ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಪಾಲನೆತ್ರಯ್ಯ ಎಂಬಾತ ಬಾಂಡ್ ಗಳನ್ನ ತಮ್ಮ ಕಾರಿನಲ್ಲಿ ತೆಗೆದುಕೊಂಡು ಹೋಗುವಾಗ ರೇಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳುತ್ತಾರೆ. ಚುನಾವಣಾ ಅಕ್ರಮ ನಡೆಸಿದ್ರೆ 45 ದಿನದ ಒಳಗೆ ಚುನಾವಣಾ ಆಯೋಗಕ್ಕೆ ನಾವು ತಕರಾರು ಅರ್ಜಿ ಸಲ್ಲಿಸಬೇಕು. ನಾವು ಆ ತಕರಾರು ಅರ್ಜಿ ಸಲ್ಲಿಸಿದೆವು. 6 ತಿಂಗಳಲ್ಲಿ ತಿರ್ಪು ಬರಬೇಕಿತ್ತು, ಕಾರಣಾಂತರಗಳಿಂದ ಇಷ್ಟು ದಿನ ಸಮಯ ಹಿಡಿತು ಎಂದರು.

ಅಕ್ರಮ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಹೈ ಕೋರ್ಟ್ ತನಿಖೆಗೆ ಸಹಕರಿಸುವಂತೆ ನಮಗೆ ಮಾಹಿತಿ ಕೊಡ್ತು, ಕೊರೊನಾ ಹಿನ್ನೆಲೆಯಲ್ಲಿ ಒಂದೂವರೆ ವರ್ಷಗಳ ಕಾಲ ಕೋರ್ಟ್ ಮುಚ್ಚಿತ್ತು. ಹೀಗಾಗಿ ತೀರ್ಪು ಬರಲು ತಡವಾಯ್ತು, ಈಗ ನಕಲಿ ಬಾಂಡ್ ಕೇಸ್ ಬಗ್ಗೆ ತೀರ್ಪು ಬಂದಿದೆ. ಗೌರಿಶಂಕರ್ ಅವರನ್ನ ಶಾಸಕ ಸ್ಥಾನದಿಂದ ಅನರ್ಹ ಮಾಡೋದು ಅಂತ ನ್ಯಾಯಾಲಯ ತೀರ್ಪು ನೀಡಿದ್ದು ನಾನು ಅದನ್ನ ಸ್ವಾಗತ ಮಾಡುವೆ, ರಾಮನವಮಿ ದಿನವೇ ತೀರ್ಪು ಬಂದಿದೆ ಇದು ಧರ್ಮಕ್ಕೆ ಮತ್ತು ಸತ್ಯಕ್ಕೆ ಸಿಕ್ಕ ಜಯವಾಗಿದೆ ಎಂದರು.

ಅಕ್ರಮ ಎಸಗಿ ಚುನಾವಣೆ ನಡೆಸಬಾರದು ಎಂಬ ಸಂದೇಶ ಕೊಟ್ಟಿದೆ. ಈಗ ಅವರಿಗೆ ಒಂದು ತಿಂಗಳ ಕಾಲ ಮೇಲ್ಮನವಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಗೌರಿಶಂಕರ್ ಜೊತೆ ಇನ್ನು ಐದು ಜನ ಅನರ್ಹರಾಗಿದ್ದಾರೆ. ಹಿರೇಹಳ್ಳಿ ಮಹೇಶ್, ರೇಣುರಮ್ಮ ಪಾಲನೇತ್ರಯ್ಯ ಸೇರಿದಂತೆ ಐದು ಜನ ಅನರ್ಹರಾಗಿದ್ದಾರೆ. ತಪ್ಪು ಮಾಡಿದೆ ಪ್ರತಿಯೊಬ್ಬರಿಗೂ ಶಿಕ್ಷೆ ಆಗುತ್ತೆ ಅನ್ನೋದಕ್ಕೆ ಈ ತೀರ್ಪು ಸಾಕ್ಷಿಯಾಗಿದೆ. ಇದು ಈ ಮಣ್ಣಿನ ಜಯ, ಶಾಸಕ ಅನರ್ಹ ಆಗಿರುವುದು ತುಮಕೂರು ಜಿಲ್ಲೆಗೆ ಕಪ್ಪು ಚುಕ್ಕೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ಮಾಜಿ ಎಂಎಲ್ಸಿ ಹುಲಿನಾಯ್ಕರ್, ವೈ.ಹೆಚ್.ಹುಚ್ಚಯ್ಯ, ಶಂಕರಪ್ಪ, ವಿಜಯ್ ಕುಮಾರ್, ರಾಮಚಂದ್ರಪ್ಪ, ಕೆ.ಪಿ.ಮಹೇಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!