ಅಲ್ಪಸಂಖ್ಯಾತರ ಮೀಸಲಾತಿ ರದ್ದು- ಮುಖಂಡರ ಆಕ್ರೋಶ

75

Get real time updates directly on you device, subscribe now.


ಕುಣಿಗಲ್: ಕೇಂದ್ರ,ರಾಜ್ಯ ಬಿಜಿಪಿ ಸರ್ಕಾರಗಳು ಮುಸ್ಲಿಂ ವಿರೋಧಿ ನೀತಿ ತಳೆಯುತ್ತಿದ್ದು, ಇದೀಗ ರಾಜ್ಯಸರ್ಕಾರವೂ ಮುಸ್ಲಿಂರಿಗೆ ಇದ್ದ ಶೇ.4 ರಷ್ಟು ಮೀಸಲಾತಿ ರದ್ದುದಗೊಳಿಸಿರುವ ಹಿಂದೆ ಜನಾಂಗವನ್ನು ವ್ಯವಸ್ಥಿತವಾಗಿ ದಮನಮಾಡುವ ಕೃತ್ಯವಾಗಿದೆ. ರಾಜ್ಯಸರ್ಕಾರ ಈ ಆದೇಶ ಕೂಡಲೆ ವಾಪಸ್ ಪಡೆಯಬೇಕೆಂದು ಪುರಸಭೆ ಮಾಜಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಒತ್ತಾಯಿಸಿದರು.
ರಾಜ್ಯ ಸರ್ಕಾರದ ಮೀಸಲಾತಿ ರದ್ದು ಕ್ರಮ ಖಂಡಿಸಿ ವಿವಿಧ ಮುಸ್ಲಿಂ ಮುಖಂಡರು ಪಟ್ಟಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸರ್ಕಾರದ ನಡೆ ಖಂಡಿಸಿ ಮಾತನಾಡಿ, ಮೊದಲು ತ್ರಿವಳಿ ತಲಾಕ್ ನಿಷೇಧಿಸಿದರು. ನಂತರ ಸಿಎಎ, ಎನ್ಆರ್ಸಿ, ಅನಂತರ ಹಿಜಾಬ್, ಅನಂತರ ಹಲಾಲ್ ಕಟ್, ಅನಂತರ ಆಜಾನ್ ನಿಷೇಧಿಸುವ ತಂತ್ರ ಈ ರೀತಿ ಪದೇ ಪದೆ ಮುಸ್ಲಿಂ ಜನಾಂಗದ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಲ್ಲದೆ ಇದೀಗ ಪವಿತ್ರ ರಂಜಾನ್ ಉಪವಾಸ ಆಚರಣೆ ಸಮಯದಲ್ಲಿ ಶೇ.4ರ ಮೀಸಲಾತಿ ರದ್ದುಗೊಳಿಸಿದ್ದಾರೆ. ಇದರಿಂದ ಜನಾಂಗದ ಮುಂದಿನ ಪೀಳಿಗೆಯ ಮಕ್ಕಳು ಅವಕಾಶ ವಂಚಿತರಾಗುವ ಸಾಧ್ಯತೆ ಹೆಚ್ಚಾಗುವ ಜೊತೆಯಲ್ಲಿ ಮುಸ್ಲಿಂರು ಯಾವುದೇ ಸರ್ಕಾರಿ ಕೆಲಸ ಪಡೆಯಲು ಪರದಾಡುವ ಸ್ಥಿತಿ ಉಂಟಾಗುವ ಜೊತೆ ಹಲವು ಸಮಸ್ಯೆಗೆ ಕಾರಣವಾಗುತ್ತದೆ. ಪವಿತ್ರ ರಂಜಾನ್ ಮಾಸಾಚರಣೆ ಇರುವ ಕಾರಣ ಶಾಂತಿಯುತವಾಗಿ ಹೇಳಿಕೆ ನೀಡುತ್ತಿದ್ದು, ರಂಜಾನ್ ಹಬ್ಬಾಚರಣೆ ನಂತರ ಜನಾಂಗದ ಹಿರಿಯರ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಮುಖಂಡ ಸನಾವುಲ್ಲಾ ಮಾತನಾಡಿ, ಬಿಜೆಪಿ ಸರ್ಕಾರ ಮುಸ್ಲಿಂರೊಂದಿಗೆ ತೀವ್ರ ತಾರತಮ್ಯ ಮಾಡುತ್ತಿದೆ. ನಾವು ಸಹ ಈ ದೇಶದ ಪ್ರಜೆಗಳು ಎಂಬುದ ಮರೆತಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಬಹಳಷ್ಟು ಮುಸ್ಲಿಂರು ಪ್ರಾಣ ತ್ಯಾಗ ಮಾಡಿದ್ದಾರೆ. ದೇಶ ಕಟ್ಟಲು ಮುಸ್ಲಿಂರ ಕೊಡುಗೆ ಇದೆ. ಹೀಗಿದ್ದರೂ ಜನಾಂಗವನ್ನು ನಿರ್ಲಕ್ಷ್ಯಸುತ್ತಿರುವುದು ಖಂಡನೀಯ. ನಮ್ಮ ಜನಾಂಗದ ಧಾರ್ಮಿಕ ವಿಷಯದಲ್ಲಿ ಧರ್ಮ ಗುರುಗಳ ತೀರ್ಮಾನ ಅಂತಿಮ, ಹೀಗಿರುವಾಗ ನ್ಯಾಯಾಲಯ ತೀರ್ಪು ಎಂದು ನಮ್ಮ ಮೇಲೆ ಬಲವಂತವಾಗಿ ಹೇರಿದ್ದಾರೆ. ತ್ರಿವಳಿ ತಲಾಖ್ ವಿಷಯದಲ್ಲಿ, ಸಾಚಾರ್ ಸಮಿತಿಯು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರ ಸ್ಥಿತಿಗತಿ ಬಗ್ಗೆ ಸಮಗ್ರ ವರದಿ ನೀಡಿದ್ದರೂ ಕೇಂದ್ರ, ರಾಜ್ಯಸರ್ಕಾರದ ಈ ನಡೆ ಖಂಡನೀಯ. ಮೀಸಲಾತಿ ವಿಷಯದಲ್ಲಿ ಸೂಕ್ತ ಕ್ರಮ ವಹಿಸದೆ ಇದ್ದರೆ ಜನಾಂಗದ ಪರವಾಗಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದರು.
ಮುಖಂಡ ಇಮ್ರಾನ್ ಪಾಶ ಮಾತನಾಡಿ, ರಾಜ್ಯದಲ್ಲಿ ಶೇ.13 ರಷ್ಟು ಮುಸ್ಲಿಂ ಜನಾಂಗ ಇದ್ದು ಸಂವಿಧಾನದ ಪ್ರಕಾರ ಜನಾಂಗಕ್ಕೆ ಶೇ.6.5 ರಷ್ಟು ಮೀಸಲಾತಿ ನೀಡಬೇಕು. ರಾಜ್ಯದಲ್ಲಿ ಇದುವರೆಗೂ ಸರ್ಕಾರ ಶೇ.4 ರಷ್ಟು ನೀಡುತ್ತಿದ್ದು ರದ್ದುಗೊಳಿಸಿದೆ. ಇದೀಗ ನಮ್ಮ ಬೇಡಿಕೆ ಶೇ.6.5 ರಷ್ಟು ಮೀಸಲಾತಿ ಇದಕ್ಕಾಗಿ ರಂಜಾನ್ ನಂತರ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು. ಸರ್ಕಾರ ಎಚ್ಚೆತ್ತು ಶೇ.6.5ರಷ್ಟು ಮೀಸಲಾತಿ ನೀಡಬೇಕು ಎಂದರು.
ಮುಖಂಡರಾದ ಸದಾಖತ್, ರಹಮತ್ ವುಲ್ಲಾ, ಅಕ್ಬರ್ಪಾಶ, ಏಜಾಸ್ ಮಾತನಾಡಿದರು. ಪ್ರಮುಖರಾದ ವಕೀಲ ನಿಜಾಂ, ಫಯಾಜ್, ಬಾಬು, ಮುಸ್ತಾಕ್, ಇಮ್ರಾನ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!