ಪಾರದರ್ಶಕ ಚುನಾವಣೆ ನಡೆಸಲು ಸಿದ್ಧತೆ

125

Get real time updates directly on you device, subscribe now.


ಕುಣಿಗಲ್: ಪಾರದರ್ಶಕ ,ಮುಕ್ತ, ನಿರ್ಭೀತ ಮತದಾನ ನಡೆಸಲು, ಎಲ್ಲಾ ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ ಎಂದು ಚುನಾವಣಾಧಿಕಾರಿ ಕೆ.ಎಚ್.ರವಿ ತಿಳಿಸಿದರು.

ಸಹಾಯಕ ಚುನವಣಾಧಿಕಾರಿ, ತಹಶಿಲ್ದಾರ್ ಮಹಾಬಲೇಶ್ವರ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಒಟ್ಟು 1,93,624 ಮತದಾರರಿದ್ದು, ಈ ಪೈಕಿ 97,561 ಪುರುಷ ಹಾಗೂ 96,032 ಮಹಿಳಾ ಮತದಾರರು ಇದ್ದಾರೆ. ಇತರೆ 1 ಹಾಗೂ ಸರ್ವಿಸ್ನಲ್ಲಿರುವ 77 ಮಂದಿ ಮತದಾರರಿದ್ದಾರೆ, ಏ.11ರ ದಿನಾಂಕದ ವರೆಗೂ ಮತದಾರರ ಪಟ್ಟಿಗೆ ಸೇರ್ಪಡೆಗೆ ಅವಕಾಶ ಇದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಅಂಚೆಪಾಳ್ಯ, ಚಿಕ್ಕೋನಹಳ್ಳಿ ಗೇಟ್, ಎಡೆಯೂರು ಹಾಗೂ ನಿಡಸಾಲೆ ಬಳಿ ನಾಲ್ಕು ಚೆಕ್ ಪೋಸ್ಟ್ ತೆರೆಯಲಾಗಿದೆ. ಮೂರು ಪಾಳಿಯಲ್ಲಿ ಇಲ್ಲಿ ಸಿಬ್ಬಂದಿ, 24 ಗಂಟೆಯೂ ಕರ್ತವ್ಯ ನಿರ್ವಹಿಸಲಿದ್ದಾರೆ. 21 ಮಂದಿ ಸೆಕ್ಟರ್ ಅಫೀಸರ್ಗಳನ್ನು ನೇಮಕ ಮಾಡಲಾಗಿದೆ. 18 ಫೈಯಿಂಗ್ ಸ್ಕ್ವಾಡ್, ಮೂರು ಪಾಳಿಯಲ್ಲಿ ಕ್ಷೇತ್ರದಲ್ಲಿ ಗಸ್ತು ನಡೆಸುತ್ತವೆ.

ಅಭ್ಯರ್ಥಿಯ ಖರ್ಚು ವೆಚ್ಚದ ಮೇಲೆ ನಿಗಾ ಇಡಲು ವೀಡಿಯೋ ಸ್ಕ್ರೀನಿಂಗ್ ಟೀಂ ರಚನೆ ಮಾಡಲಾಗಿದೆ, ಚುನಾವಣೆ ಅಕ್ರಮಗಳು ಕಂಡು ಬಂದಲ್ಲಿ ದೂರು ನೀಡಲು 24 ಗಂಟೆಗ ಕಾಲ ಕಾರ್ಯನಿರ್ವ ಹಿಸುವ ಹೆಲ್ಪ್ಲೈನ್ ತೆರೆಯಲಾಗಿದೆ. 80 ವಯಸ್ಸಿನ ಮೇಲಿನ ವೃದ್ಧರು ಹಾಗೂ ವಿಕಲಚೇತನರು ಮನೆಯಲ್ಲೇ ಮತದಾನ ಮಾಡಲು ಅವಕಾಶ ಇದೆ. ಬಿಎಲ್ಒ ಬಳಿ ಅರ್ಜಿ ಪಡೆದು ಅಗತ್ಯ ಮಾಹಿತಿ ಭರ್ತಿಮಾಡಿ ಸಲ್ಲಿಸುವುದು ಕಡ್ಡಾಯವಾಗಿದೆ. ಚುನಾವಣೆ ದಿನ ಮತಗಟ್ಟೆಯಲ್ಲಿ ಇರುವಂತೆ ಮನೆಯಲ್ಲಿಯೂ ಮತಗಟ್ಟೆ ಸ್ಥಾಪನೆ ಮಾಡಿ ಗುಪ್ತ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು. ಪಾರದರ್ಶಕ, ನಿರ್ಭೀತ, ಮುಕ್ತ ಮತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳ ಲಾಗಿದೆ ಎಂದರು.

Get real time updates directly on you device, subscribe now.

Comments are closed.

error: Content is protected !!