ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಪ್ರತಿಭಟನೆ

66

Get real time updates directly on you device, subscribe now.


ಗುಬ್ಬಿ: ತಾಲ್ಲೂಕಿನ ಬೇಣಚಗೆರೆ, ಹಾರನ ಹಳ್ಳಿ ಸೇರಿದಂತೆ ಇನ್ನಿತರೆ ಭಾಗಗಳಿಗೆ ಸರಿಯಾದ ರೀತಿಯಲ್ಲಿ ರೈತರಿಗೆ ಹಾಗೂ ಗ್ರಾಮಗಳಿಗೆ ನಿರಂತರ ವಿದ್ಯುತ್ ನೀಡುತ್ತಿಲ್ಲ ಎಂದು ನೂರಾರು ರೈತರು ನಿಟ್ಟೂರು ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಪಂಚಾಕ್ಷರಿ, ಸುಮಾರು ಎರಡು ತಿಂಗಳಿನಿಂದಲೂ ಈ ಸಮಸ್ಯೆ ನಿರಂತರವಾಗಿದ್ದು ಇಲ್ಲಿನ ಅಧಿಕಾರಿಗಳು ಮಾತ್ರ ರೈತರಿಗೆ ಸ್ಪಂದಿಸುತ್ತಿಲ್ಲ. ಮನೆಗಳಿಗೆ ನೀಡುವ ನಿರಂತರ ವಿದ್ಯುತ್ನ್ನು ಸಹ ಸರಿಯಾಗಿ ನೀಡುತ್ತಿಲ್ಲ. ಇದರಿಂದ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗಿದೆ. ಇಲ್ಲಿರುವಂತಹ ಎಇಇ ಅನಿಲ್ ಕುಮಾರ್ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸದೆ ಇರುವುದರಿಂದ ನಿರಂತರವಾಗಿ ಇಲ್ಲಿ ಪ್ರತಿಭಟನೆ ನಡೆಯುತ್ತವೆ. ಕೂಡಲೇ ಇವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹ ಮಾಡಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ನರಸೇಗೌಡ ಮಾತನಾಡಿ, ಇಲ್ಲಿರುವ ಅಧಿಕಾರಿ ಯಾವುದೇ ರೀತಿಯಲ್ಲೂ ಜನರಿಗೆ ಸ್ಪಂದನೆ ಮಾಡುವುದಿಲ್ಲ. ರೈತರ ಸಮಸ್ಯೆ ಬಗ್ಗೆ ಆತನಿಗೆ ತಿಳಿದೇ ಇಲ್ಲ, ಇಂತಹ ಅಧಿಕಾರಿಗಳು ನಮಗೆ ಬೇಕಿಲ್ಲ, ಯಾವುದೇ ಕೆಲಸ ಹೇಳಿದರು ಸಹ ತಿಂಗಳುಗಟ್ಟಲೆ ಕೆಲಸವನ್ನೇ ಮಾಡುವುದಿಲ್ಲ.. ಹಳ್ಳಿಯ ಜನರ ಕೆಲಸ ಮಾಡದ ಮೇಲೆ ಇಂತಹ ಅಧಿಕಾರಿಗಳು ಇಲ್ಲಿ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಲೋಕೇಶ್ ಮಾತನಾಡಿ, ಎರಡು ತಿಂಗಳಿನಿಂದಲೂ ಸಮಸ್ಯೆ ಬಗ್ಗೆ ಎಷ್ಟು ಬಾರಿ ತಿಳಿಸಿದರು ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಇಂತಹ ಅಧಿಕಾರಿ ಇದ್ದರೆ ಮನೆಗಳಲ್ಲಿ ಮತ್ತು ರೈತರಿಗೆ ಅವಶ್ಯಕವಾದ ವಿದ್ಯುತ್ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪರೀಕ್ಷೆ ನಡೆಯುತ್ತಿದ್ದು ಮಕ್ಕಳು ಓದಲು ಸಹ ಸಾಧ್ಯವಾಗದ ಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಕಾಂತರಾಜು, ವಿಜಯ್ ಕುಮಾರ್, ಮಂಗಳ ಗೌರಮ್ಮ, ಗಿರೀಶ್, ಬಸವರಾಜು, ಸಿದ್ದರಾಮಣ್ಣ, ಚಂದನ್ ಇನ್ನಿತರರು ಭಾಗಿಯಾಗಿದ್ದರು.

Get real time updates directly on you device, subscribe now.

Comments are closed.

error: Content is protected !!