ಕುಣಿಗಲ್: ತಾಲೂಕಿನ ಅಮೃತೂರಿನ ದೇವಾಲಯ ಜೀರ್ಣೋದ್ಧಾರ ಮಾಡುವಾಗ ಚಿನ್ನದ ನಾಣ್ಯಗಳು ಪತ್ತೆಯಾಗಿರುವ ಘಟನೆ ನಡೆದಿದೆ.
ಅಮೃತೂರಿನ ಬ್ಯಾಟರಾಯ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ದೇವಾಲಯದ ಕೆಳ ಬದಿಯಲ್ಲಿ ಮಡಿಕೆ ಪತ್ತೆಯಾಗಿದೆ. ಮಡಿಕೆಯಲ್ಲಿ ಚೋಳರ ಕಾಲದ್ದೆಂದು ಹೇಳಲಾಗುವ ತಲಾ 35ಗ್ರಾಂ ತೂಕದ ಒಟ್ಟು 65 ಚಿನ್ನದ ನಾಣ್ಯ ಪತ್ತೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಅರ್ಚಕ ಕುಮಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಮೃತೂರು ಪೊಲೀಸರು ಸ್ಥಳ ಪರಿಶೀಲನೆ ನಡೆದಿ ಕುಣಿಗಲ್ ತಹಶೀಲ್ದಾರ್ ಗೆ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಕಂದಾಯಾಧಿಕಾರಿಗಳು ಸದರಿ ನಾಣ್ಯಗಳನ್ನು ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳ ವಶಕ್ಕೆ ನೀಡಲು ಸೂಕ್ತ ಮಾಹಿತಿ ರವಾನೆ ಮಾಡಿದ್ದಾರೆ.
Comments are closed.