ಮಹಾವೀರರ ತತ್ವಾದರ್ಶ ಪಾಲನೆಗೆ ಕರೆ

75

Get real time updates directly on you device, subscribe now.


ಕುಣಿಗಲ್: ರಾಜ್ಯ, ದೇಶ, ಜಗತ್ತು ಮಹಾವೀರರ ಸಂದೇಶ, ತತ್ವ ಪಾಲಿಸಿದಲ್ಲಿ ಇಂದು ಎದುರಿಸುತ್ತಿರುವ ಸಾವಿರಾರು ಸಮಸ್ಯೆಗಳಿಗೆ ಉತ್ತರ, ಪರಿಹಾರ ಸಿಗಲಿದೆ ಎಂದು ಕುಣಿಗಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ತಾಲೂಕು ಜೈನ ಸಮಾನದ ಕಾರ್ಯದರ್ಶಿ ಸಂತೋಷ್ ಕುಮಾರ್ ಹೇಳಿದರು.

ಮಂಗಳವಾರ ಮಹಾವೀರ ಜಯಂತಿ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ, ಅಶಕ್ತರಿಗೆ ಹಾಲು, ಬ್ರೆಡ್, ಹಣ್ಣು ವಿತರಿಸಿ ಮಾತನಾಡಿ, ಭಗವಾನ್ ಮಹಾವೀರರ ಸಂದೇಶಗಳಾದ ಅಹಿಂಸಾ ಪರಮೋ ಧರ್ಮಃ, ಪರೋಪಕಾರ, ಬದುಕು ಬದುಕಲು ಬಿಡು, ಪ್ರಾಣಿ ಹಿಂಸೆ ತ್ಯಜಿಸುವುದು ಇನ್ನೂ ಹಲವು ಪರಿಣಾಮಕಾರಿ ಸಂದೇಶಗಳು ಮಾನವ ಕುಲ ನೆಮ್ಮದಿಯಾಗಿ ಬದುಕಲು ಸಹಕಾರಿಯಾಗಿದೆ. ಇಂದಿನ ದಿನಗಳಲ್ಲಿ ಎಲ್ಲೆಡೆ ಹಿಂಸೆ, ಅಸೂಯೆ ಹೆಚ್ಚಾಗಿ ಮಾನವ ಕುಲ ನೆಮ್ಮದಿಯಿಂದ ತಾನು ಬಾಳಲಾಗದೆ, ಮತ್ತೊಬ್ಬರನ್ನು ಬಾಳಲು ಬಿಡದೆ, ಸದಾ ಗೊಂದಲದಲ್ಲೇ ಬದುಕುವ ವಾತಾವರಣ ನಿರ್ಮಾಣವಾಗುತ್ತಿದೆ. ಪರೋಪಕಾರ ತತ್ವವು ಮಹಾವೀರರ ಸಂದೇಶವಾಗಿದ್ದು ಪ್ರತಿಯೊಂದು ಜೀವಿಯಲ್ಲೂ ಬದುಕುವ ಹಕ್ಕನ್ನು ಸ್ಥಾಪಿಸಲು ಪರೋಪಕಾರ, ಅಹಿಂಸಾ ಧರ್ಮ ಪಾಲನೆ ಮಾಡುವ ಮೂಲಕ ಎಲ್ಲರೂ ಎಲ್ಲೆಡೆ ನೆಮ್ಮದಿಯಿಂದ ಇರಬಹುದಾಗಿದೆ. ಮಹಾವೀರದ ಜಯಂತಿ ಸಂದರ್ಭದಲ್ಲಿ ಅವರು ನೀಡಿದ ಸಂದೇಶಗಳನ್ನು ಪಾಲನೆ ಮಾಡುವ ಮೂಲಕ ಸರ್ವರೂ ಸುಖಿಯಾಗಿರಬಹುದು ಎಂದರು.

ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್ ಬಾಬು, ವೈದ್ಯರಾದ ಡಾ.ಶಶಾಂಕ್, ಡಾ.ಸತೀಶ್, ಜೈನ ಸಮಾಜದ ಅಧ್ಯಕ್ಷ ಮೋಹನ್ ಕುಮಾರ್, ಸಂಘದ ಪದಾಧಿಕಾರಿಗಳಾದ ಎಂ.ಡಿ.ಮೋಹನ್ ಜ್ವಾಲೆಂದ್ರ, ಮಹಾವೀರ, ನಾಗರಾಜು, ನಿರ್ಮಲ್, ಮಂಜುನಾಥ್ ಇತರರು ಇದ್ದರು. ತಾಲೂಕು ಆಡಳಿತದ ವತಿಯಿಂದಲೂ ಆಡಳಿತ ಸೌಧದಲ್ಲಿ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮಹಾವೀರ ಜಯಂತಿ ಸರಳವಾಗಿ ಆಚರಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!