ತುಮಕೂರು: ರೋಗಿಗಳಿಗೆ ನಾವು ನೀಡುವ ಆರೋಗ್ಯ ಭರವಸೆಯೇ ಪ್ರಥಮ ಚಿಕಿತ್ಸೆಯಾಗಿದ್ದು ರೋಗಿಗಳಲ್ಲಿ ಸುರಕ್ಷತೆ ಹಾಗೂ ನಂಬಿಕೆಯ ವಾತಾವರಣ ಮೂಡಿಸುವುದು ಯಾವುದೇ ವೈದ್ಯಕೀಯ ಸಿಬ್ಬಂದಿ ಕರ್ತವ್ಯವಾಗಬೇಕು ಎಂದು ಯುನೈಡೆಟ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ವೆಟೆರನ್ಸ್ ಅಫೈರ್ಸ್ನ ವೈದ್ಯಕೀಯ ನಿರ್ದೇಶಕ ಡಾ.ನಾಗಣ್ಣ ಚನ್ನವೀರಯ್ಯ ತಿಳಿಸಿದರು.
ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ ರೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಬೇಕು. ಮುಕ್ತ ಮನಸ್ಸಿನಿಂದ ಮಾತನಾಡುವಂತಾಗಬೇಕು. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮಾನಸಿಕ ಧೈರ್ಯ ತುಂಬಿದಾಗ ರೋಗಿಗಳು ಚೇತರಿಕೆಯಲ್ಲೂ ಗಮನಾರ್ಹ ಬದಲಾವಣೆ ಉಂಟಾಗಲಿದೆ ಎಂದರು.
ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ, ಡಾ.ನಾಗಣ್ಣ ಚನ್ನವೀರಯ್ಯ ಅವರು ಸಿದ್ಧಗಂಗಾ ಮಠದ ವಿದ್ಯಾರ್ಥಿಯಾಗಿದ್ದು ಯುಎಸ್ ಸರ್ಕಾರದಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿರುವುದು ನಮ್ಮ ನಾಡಿಗೆ ಹೆಮ್ಮೆ ತರುವಂತಹದ್ದು, ಅವರ ನಮ್ಮ ಆಸ್ಪತ್ರೆಗೆ ಆಗಮಿಸಿ ವೈದ್ಯಕೀಯ ಸಿಬ್ಬಂದಿಗೆ ಉಪಯುಕ್ತ ಮಾರ್ಗದರ್ಶನ ಮಾಡಿರುವುದು ನಮ್ಮ ಕಾರ್ಯಕ್ಷಮತೆ ಹೆಚ್ಚಿಸಿದೆ ಎಂದರು.
ಎಸ್ಐಟಿ ಸಿಇಓ ಡಾ.ಶಿವಕುಮಾರಯ್ಯ, ಸಿದ್ಧಗಂಗಾ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಪ್ರಾಚಾರ್ಯರಾದ ಡಾ.ಶಾಲಿನಿ.ಎಂ, ಎಸ್ಎಂಸಿಆರ್ಐ ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ನರ್ಸಿಂಗ್ ವಿಭಾಗದ ಮುಖ್ಯಸ್ಥ ನಾಗಣ್ಣ ಹಾಗೂ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಹಾಗೂ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು.
Comments are closed.