ಗುಬ್ಬಿ: ವಿಧಾನಸಭಾ ಚುನಾವಣೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಧಿಕೃತವಾಗಿ ಮಾಜಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ಟಿಕೆಟ್ ಕನ್ಫರ್ಮ್ ಆಗಿದ್ದು ಇನ್ನು ಹೆಚ್ಚಿನ ಉತ್ಸಾಹ ಕಾಂಗ್ರೆಸ್ ನಲ್ಲಿ ಮೂಡಿದೆ.
ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಮರ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದು, ಚುನಾವಣಾ ಉಸ್ತುವಾರಿ ಚಿಕ್ಕರಂಗೇಗೌಡ ಮಾತನಾಡಿ ಕಾಂಗ್ರೆಸ್ ನ ಜಿ.ಎಸ್.ಪ್ರಸನ್ನ ಕುಮಾರ್ ಹಾಗೂ ಹೊನ್ನಗಿರಿ ಗೌಡ ನಮ್ಮ ಪಕ್ಷವನ್ನು ಕಟ್ಟಿ ಬೆಳೆಸಿದವರು. ಹಾಗಾಗಿ ಅವರನ್ನು ಮತ್ತೆ ಪಕ್ಷಕ್ಕೆ ಬರುವಂತೆ ಮನವೊಲಿಸುವ ಕೆಲಸ ಮಾಡುತ್ತೇನೆ. ನಾನು ಸಹ ಶಾಸಕ ಶ್ರೀನಿವಾಸ್ ವಿರುದ್ಧವೇ ಚುನಾವಣೆ ನಿಂತು ವಿರೋಧಿಯಾಗಿದ್ದವನು. ಆದರೆ ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರಿಗೆ ಕೆಲಸ ಮಾಡುವುದು ನಮ್ಮ ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಹಾಗಾಗಿ ಯಾರಿಗೆ ಟಿಕೆಟ್ ನೀಡಿದರು ನಾನು ಅವರಿಗೆ ಕೆಲಸ ಮಾಡುತ್ತಿದ್ದೆ. ಶ್ರೀನಿವಾಸ್ ಅವರಿಗೆ ಅಧಿಕೃತವಾಗಿ ಟಿಕೆಟ್ ನೀಡಿದ್ದು ಈಗ ಮಾಡಿರುವ ಅಮಾನತು ಆದೇಶವನ್ನು ವಾಪಸ್ ತೆಗಿಸಿ ಮತ್ತೆ ಪಕ್ಷಕ್ಕೆ ಪ್ರಸನ್ನ ಕುಮಾರ್ ಅವರನ್ನು ಆಹ್ವಾನಿಸುತ್ತೇವೆ. ಇನ್ನು ಮುಂದಿನ ದಿನದಲ್ಲಿ ಪ್ರಸನ್ನ ಕುಮಾರ್ ಅವರಿಗೆ ಉತ್ತಮ ಅವಕಾಶಗಳಿದ್ದು, ಅವರು ಅದನ್ನು ಸದುಪಯೋಗ ಮಾಡಿಕೊಳ್ಳಲು ಉತ್ತಮ ಅವಕಾಶ. ಈ ಚುನಾವಣೆ ನಿರ್ಮಿಸುತ್ತಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಅಧಿಕೃತವಾಗಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದ್ದು ಪ್ರಚಾರ ಕಾರ್ಯ ಈಗಾಗಲೇ ಎರಡು ಗ್ರಾಮ ಪಂಚಾಯಿತಿ ಮುಗಿಸಿದ್ದು, ಶಿವಪುರ ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿದೆ. ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚು ಹುರುಪಿನಿಂದ ಕೆಲಸ ಮಾಡುತ್ತಿದ್ದು ಪಕ್ಷೇತರ ಅಭ್ಯರ್ಥಿಯಾಗಿ ನಾನು ನಿಂತು ಗೆದ್ದಂತಹ ಉತ್ಸಾಹ ಮತ್ತೊಮ್ಮೆ ಮೂಡಿಸಿದೆ ಎಂದರು.
ಕಾಂಗ್ರೆಸ್ ಪಕ್ಷದಿಂದ ಏಪ್ರಿಲ್ 18 ಮಂಗಳವಾರ ನಾಮಪತ್ರ ಸಲ್ಲಿಸುತ್ತೇನೆ. ಅಂದು ಯಾರು ಬರುತ್ತಾರೆ ಎಂಬುದರ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಎಲ್ಲರನ್ನು ಆಹ್ವಾನ ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಬೆ ಕಟ್ಟೆ ಜಯಣ್ಣ, ಮುಖಂಡರಾದ ಗುರು ರೇಣುಕಾರಾಧ್ಯ, ಹಪ್ಪನಹಳ್ಳಿ ಈಶಣ್ಣ, ಕುಮಾರಯ್ಯ, ಜುಂಜೇಗೌಡ, ಶಿವಣ್ಣ, ಸಿದ್ದರಾಜು, ರಾಘವೇಂದ್ರ, ಗೌಡಯ್ಯ, ಸಣ್ಣ ರಂಗಯ್ಯ, ಕುಮಾರಯ್ಯ, ಕಮಲಮ್ಮ, ಕೆಂಪರಾಜಮ್ಮ, ಮಹಾಲಕ್ಷ್ಮಿ, ಪ್ರಸನ್ನ, ಉಮೇಶ್, ಸದಾಶಿವ ಇತರರು ಇದ್ದರು.
Comments are closed.