ತುಮಕೂರು: ಬಿಜೆಪಿ ಸರ್ಕಾರ ದೇಶದ ಭದ್ರತೆ, ಅಭಿವೃದ್ಧಿ ಗೆ ಆದ್ಯತೆ, ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಜಗತ್ತಿನ ಎಲ್ಲಾ ದೇಶಗಳು ಒಪ್ಪಿವೆ. ಎಕಾನಮಿಯಲ್ಲಿ ದೇಶ ಬಲಿಷ್ಠವಾಗಿದೆ, ಕೌಶಲ್ಯ ಹೊಂದಿದ ಬಲಿಷ್ಠ ಮ್ಯಾನ್ ಪವರ್ ಹೊಂದಿದ್ದು, ದೇಶ ಶಕ್ತಿಶಾಲಿಯಾಗಿದೆ ಎಂದು ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯುಷ್ ಗೋಯಲ್ ತಿಳಿಸಿದರು.
ನಗರದ ಸ್ನೇಹ ಸಂಗಮ ಕನ್ವೆಷನ್ ಹಾಲ್ನಲ್ಲಿ ತುಮಕೂರು ಜಿಲ್ಲೆಯ ಕೈಗಾರಿಕೋದ್ಯಮಿಗಳು ಹಾಗೂ ವರ್ತಕರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶ ಪ್ರಗತಿ ಹಾದಿಯಲ್ಲಿ ಸಾಗುತ್ತಿದೆ ಎಂದರು.
ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದಾಗ ಬರೀ ಸ್ಕಾಂಡಲ್ಗಳಲ್ಲಿ ಮುಳುಗಿತ್ತು. ಮೋದಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದು ದೇಶಲ್ಲಿ ಪಾರದರ್ಶಕ ಆಡಳಿತ ನೀಡುತ್ತಿದೆ. ಒಂದೇ ಒಂದು ಆರೋಪ ಇಲ್ಲದೆ ಸ್ವಚ್ಛವಾದ ಆಡಳಿತ ನೀಡುತ್ತಿದೆ. ದೇಶದ ಅಭಿವೃದ್ಧಿ ಗೆ ಸಾಕಷ್ಟು ಯೋಜನೆ ನೀಡಿ ಅನುಷ್ಠಾನಕ್ಕೆ ತಂದಿದೆ. ಮುನ್ನೂರು ಸ್ಕೀಮ್ ಗಳನ್ನು ಜನರಿಗೆ ನೀಡಿ ಸೌಲಭ್ಯ ಒದಗಿಸಲಾಗಿದೆ. ದೇಶದಲ್ಲಿ ಏರ್ ಪೋರ್ಟ್, ರೈಲ್ವೆ ಮಾರ್ಗ, ಉತ್ತಮ ರಸ್ತೆಗಳ ನಿರ್ಮಾಣ ಮಾಡಲಾಗಿದೆ ಎಂದರು.
ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಬಡವರು, ಗ್ರಾಮೀಣರ ಆರೋಗ್ಯ ಕಾಪಾಡಲಾಗುತ್ತಿದೆ. ಕೋವಿಡ್ ಬಂದಾಗ ಎಲ್ಲಾ ವರ್ಗದವರನ್ನು ಕೇರ್ ಮಾಡಲಾಯಿತು. ಪ್ರತಿ ಹಳ್ಳಿ, ನಗರ ಒಳಗೊಂಡಂತೆ ಎಲ್ಲರ ಆರೋಗ್ಯ ಕಾಪಾಡುವ ಕೆಲಸ ಆಯಿತು. ಕೊರೊನವನ್ನು ಸಮರ್ಥವಾಗಿ ಎದುರಿಸಿ ಮಹಾ ಮಾರಿಯನ್ನು ತಡೆಯಲಾಯಿತು ಎಂದರು.
ಉತ್ತರ ಪ್ರದೇದಲ್ಲಿ ಒಂದು ಕಾಲದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಮಾಫಿಯಾ ಜೋರಾಗಿತ್ತು, ಎಲ್ಲಿ ನೋಡಿದರು ಅಕ್ರಮ, ಅನ್ಯಾಯ ನಡೆಯುತ್ತಿತ್ತು. ಅಲ್ಲಿ ಬಿಜೆಪಿ ಸರ್ಕಾರ ಬಂದು ಯೋಗಿ ಆದಿತ್ಯ ಸಿಎಂ ಆದ ನಂತರ ಉತ್ತಮ ಆಡಳಿತ ನೀಡಿ ಸ್ಯಾಂಡ್, ಲ್ಯಾಂಡ್, ಲಿಕ್ಕರ್ ಮಾಫಿಮಾಗಳಿಗೆ ಕಡಿವಾಣ ಹಾಕಲಾಯಿತು, ಪಾರದರ್ಶಕ ರಾಜ್ಯವನ್ನಾಗಿ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದರು.
ತುಮಕೂರು ಅಭಿವೃದ್ಧಿ ಹೊಂದಿದ ಸುಂದರ ನಗರವಾಗಿದೆ ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದ ನಗರ ಎಂಬುದು ಹೆಮ್ಮೆಯ ವಿಚಾರ, ಈ ನಗರದ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದಿದೆ. ಬೆಂಗಳೂರಿಗೆ ಸಮೀಪ ಇರುವ ನಗರ ವೇಗವಾಗಿ ಬೆಳೆಯುತ್ತಿದೆ. ಉತ್ತಮ ಹೆದ್ದಾರಿ, ಮೂಲ ಸೌಕರ್ಯ ಒಳಗೊಂಡಿದೆ, ಈ ಸಿಟಿಗೆ ಬಂದಿರುವುದು ನನಗೆ ಹೆಮ್ಮೆ ಎನಿಸುತ್ತದೆ ಎಂದರು.
ಕೇಂದ್ರದಲ್ಲಿ ಬಿಜೆಪಿಗೆ ಬಹುಮತ ನೀಡಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಅದೇ ರೀತಿ ಕರ್ನಾಟಕದಲ್ಲಿ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸಿ, ಅದರಲ್ಲು ಬಹುಮತದ ಸರ್ಕಾರಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕ ಜ್ಯೋತಿಗಣೇಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ಡಿ.ಆರ್.ಮಲ್ಲೇಶಯ್ಯ, ಜಂಟಿ ಕಾರ್ಯದರ್ಶಿ ಪಿ.ಆರ್.ಕುರಂದ್ವಾಡ್, ಖಜಾಂಚಿ ಶ್ರೀಕಂಠ ಸ್ವಾಮಿ, ನಿರ್ದೆಶಕರಾದ ಜಿ.ಆರ್.ಎಸ್.ರವಿಶಂಕರ್, ಜಿ.ಆರ್.ಸುರೇಶ್, ಮಾಜಿ ಅಧ್ಯಕ್ಷ ಸುಜ್ಞಾನ್ ಹಿರೇಮಠ್, ಸುರೇಂದ್ರ ಷಾ, ಎಂ.ಎನ್.ಲೊಕೇಶ್ ಇತರರು ಇದ್ದರು.
Comments are closed.