ಗುಬ್ಬಿಯಲ್ಲಿ ಭದ್ರತಾ ಪಡೆಯಿಂದ ಪಥ ಸಂಚಲನ

82

Get real time updates directly on you device, subscribe now.


ಗುಬ್ಬಿ: ತಾಲ್ಲೂಕಿನಲ್ಲಿ ವಿಧಾನಸಭಾ ಚುನಾವಣೆಯನ್ನು ಭಯಮುಕ್ತ ವಾತಾವರಣದಲ್ಲಿ ನಡೆಸುವ ಉದ್ದೇಶದಿಂದ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ಶಾಂತಿ ಹಾಗೂ ಸೌಹಾರ್ದತೆಗೆ ಧಕ್ಕೆ ಉಂಟಾಗದಂತೆ ವ್ಯವಸ್ಥಿತ ಕ್ರಮ ಕೈಗೊಳ್ಳುವ ಬಿಟ್ಟಿನಲ್ಲಿ ಈಗಾಗಲೇ ತಾಲ್ಲೂಕಿಗೆ ಗಡಿ ಭದ್ರತಾ ಪಡೆ ನಿಯೋಜಿಸಲಾಗಿದೆ. ಕ್ಷೇತ್ರದ ಪ್ರಮುಖ ಸ್ಥಳಗಳಲ್ಲಿ ನಿರಂತರವಾಗಿ ಪಥ ಸಂಚಲನ ನಡೆಸುವ ಮೂಲಕ ಮತದಾರರಲ್ಲಿ ಧೈರ್ಯ ತುಂಬುತ್ತಿದ್ದಾರೆ.

ಸೋಮವಾರ ಪಟ್ಟಣದಲ್ಲಿಯೂ ಬಿಎಸ್ಎಫ್ ಯೋಧರ ಪಥ ಸಂಚಲನ ನಡೆಸಲಾಯಿತು. ಪಟ್ಟಣದ ಚನ್ನ ಬಸವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಯೋಧರನ್ನು ಪಟ್ಟಣದ ಸಾರ್ವಜನಿಕರ ಪರವಾಗಿ ಸನ್ಮಾನಿಸುವ ಮೂಲಕ ಪಥ ಸಂಚಲನಕ್ಕೆ ಚಾಲನೆ ನೀಡಲಾಯಿತು.

ಪಥ ಸಂಚಲನ ಸಾಗಿದಂತೆ ನಾಗರಿಕರು ಯೋಧರಿಗೆ ಪುಷ್ಪವೃಷ್ಟಿ ಮಾಡಿ ಆರತಿ ಬೆಳಗಿದರು, ದಾರಿಯಲ್ಲಿ ಪಾನಕ, ಫಲಹಾರ, ಮಜ್ಜಿಗೆ ವಿತರಿಸಿ ಯೋಧರನ್ನು ಉಪಚರಿಸಿದರು.
ಮತದಾರರು ಯಾವುದೇ ಆಮಿಷಕ್ಕೆ ಹಾಗೂ ಗಾಳಿ ಸುದ್ದಿಗೆ ಕಿವಿಗೊಡ ಬಾರದು. ಯಾವುದೇ ಆತಂಕ ಅಥವಾ ಭಯದ ವಾತಾವರಣ ಕಂಡುಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ನಾಗರಿಕರು ಯೋಧರ ಜೊತೆ ಪಥ ಸಂಚಲನದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಬಿಎಸ್ಎಫ್ ಯೋಧರಿಗೆ ಆರಕ್ಷಕ ವೃತ್ತ ನಿರೀಕ್ಷಕ ಗೋಪಿನಾಥ್ ಹಾಗೂ ಸಹಾಯಕ ಪೊಲೀಸ್ ನಿರೀಕ್ಷಕ ಮುತ್ತುರಾಜ್ ಅವರು ಅಗತ್ಯವಿರುವ ಎಲ್ಲಾ ರೀತಿಯ ಮಾರ್ಗದರ್ಶನ ಹಾಗೂ ಸಲಹೆ ನೀಡುತ್ತಿದ್ದರು.

Get real time updates directly on you device, subscribe now.

Comments are closed.

error: Content is protected !!