ಜಗತ್ತೆ ಮೋದಿಗೆ ವಿಶ್ವ ನಾಯಕನ ಪಟ್ಟ ನೀಡಿದೆ

82

Get real time updates directly on you device, subscribe now.


ಕೊರಟಗೆರೆ: ಭಾರತ ದೇಶದ 130 ಕೋಟಿ ಜನರ ಆರೋಗ್ಯ ರಕ್ಷಣೆ ಮಾಡಿದ್ದು ನರೇಂದ್ರ ಮೋದಿ, ಕಾಯಿಲೆ ಬಂದರೆ ನಮಗೆ ವಿದೇಶದಿಂದ ಔಷಧಿ ಬರಬೇಕಿತ್ತು. ಆದರೆ ಮೋದಿ ಸರಕಾರ ವಿದೇಶಕ್ಕೆ ಕೊರೊನಾ ಔಷಧಿ ಕಳಿಸಿದ್ರು, ಸಿದ್ದರಾಮಯ್ಯ ಕೊರೊನಾ ಔಷಧಿಯ ಬಗ್ಗೆ ಲೇವಡಿ ಮಾಡಿದ್ರು, ಆಮೇಲೆ ಅವರೆ ಮೊದ್ಲು ಔಷಧಿ ಪಡೆದುಕೊಂಡ್ರು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು.

ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ವಾಲ್ಮೀಕಿ ಸಮುದಾಯದ ಬೃಹತ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಮಾಡ್ತಾರೆ. ಹಾಗಾದ್ರೆ ಕಾಶ್ಮೀರವನ್ನ ಭಾಗ ಮಾಡಿದೋರು ಯಾರು, ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ ಇತ್ತು. ವಿಶ್ವನಾಯಕ ಮೋದಿ ಬಂದ ನಂತರ ಸೈನ್ಯಕ್ಕೆ ಅಧಿಕಾರ ನೀಡಿ ಈಗ ಆಕಾಶದೆತ್ತರಕ್ಕೆ ತ್ರೀವರ್ಣ ಧ್ವಜ ಹಾರಾಡುತ್ತಿದೆ. ಜಗತ್ತೆ ಮೋದಿಗೆ ವಿಶ್ವ ನಾಯಕನ ಪಟ್ಟ ನೀಡಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ಗೆ ವಾರಂಟಿನೇ ಇಲ್ಲ. ಕಾಂಗ್ರೆಸ್ ಪಕ್ಷ ಜನರಿಗೆ ಸುಳ್ಳು ಭರವಸೆ ನೀಡೋದಿಕ್ಕೆ ಮಾತ್ರ ಫೇಮಸ್ಸು, ಕೊರಟಗೆರೆ ಜನತೆ ಕಾಂಗ್ರೆಸ್ ನಾಯಕರ ಮಾತನ್ನ ನಂಬದೇ ಬಿಜೆಪಿ ಪಕ್ಷಕ್ಕೆ ಮತ ಹಾಕಬೇಕು ಎಂದು ಹೇಳಿದರು.

ರಾಜ್ಯ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನರಸಿಂಹನಾಯ್ಕ ಮಾತನಾಡಿ, ವಾಲ್ಮೀಕ ಸಮುದಾಯಕ್ಕೆ ಮೋದಿ ನೇತೃತ್ವದ ಕೇಂದ್ರ ಮತ್ತುರಾಜ್ಯ ಸರಕಾರ ವಿಶೇಷ ಪ್ರಾಮುಖ್ಯತೆ ನೀಡಿದೆ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಎಸ್ಸಿ, ಎಸ್ಟಿಗೆ ನ್ಯಾಯ ನೀಡಲಿಲ್ಲ. ಈಗ ಆರೋಪ ಮಾಡ್ತಾರೆ ಅಷ್ಠೆ, ಅನಿಲ್ಕುಮಾರ್ ಆಕಾಂಕ್ಷಿ ಅಲ್ಲ. ಅವರೆ ಕೊರಟಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸರಕಾರಿ ಸೇವೆಯ ನಂತರ ಸಮಾಜ ಸೇವೆಗೆ ಕೊರಟಗೆರೆ ಕ್ಷೇತ್ರಕ್ಕೆ ಬಂದಿದ್ದಾರೆ. ಸರಕಾರಿ ಅಧಿಕಾರಿ ಆಗಿ ನಾವು ನೋಡಿದ್ದೇವೆ. ಜನ ನಾಯಕನಾಗಿ 2023ಕ್ಕೆ ನಾವೆಲ್ಲರೂ ನೋಡಬೇಕಿದೆ ಎಂದು ತಿಳಿಸಿದರು.

ಸಮಾವೇಶದಲ್ಲಿ ಮಧುಗಿರಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಬ್ಯಾಡನೂರು ಶಿವು, ಕೊರಟಗೆರೆ ಮಂಡಲ ಅಧ್ಯಕ್ಷ ಪವನಕುಮಾರ್, ಎಸ್ಟಿ ಮಂಡಲ ಮೋರ್ಚಾ ಅಧ್ಯಕ್ಷ ಗೋಪಾಲಕೃಷ್ಣ, ಮುಖಂಡರಾದ ಗುಡ್ಡದರಂಗಪ್ಪ, ಓನಮಃ ನಾರಾಯಣ್, ಸುಶೀಲಮ್ಮ, ಶಿವರುದ್ರಪ್ಪ, ಗುರುಧತ್, ರಘು, ಹನುಮಂತರಾಜು, ದಾಡಿ ವೆಂಕಟೇಶ್, ಅಶೋಕ್, ಕೆಂಪರಾಜು, ರಂಗಣ್ಣ, ತಿಮ್ಮರಾಜು, ನಾಗರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!