ಹಂಡ್ರೆಡ್ ಪರ್ಸೆಂಟ್ ಬಿಜೆಪಿ ಟಿಕೆಟ್!

ನಾನು ಅಭ್ಯರ್ಥಿಯಾಗಿ ಸ್ಪರ್ಧಿಸುವೆ: ಸೊಗಡು ಶಿವಣ್ಣ

75

Get real time updates directly on you device, subscribe now.


ತುಮಕೂರು: ನೂರಕ್ಕೆ ನೂರರಷ್ಟು ಬಿಜೆಪಿ ಟಿಕೆಟ್ ನನಗೆ ದೊರಯಲಿದೆ, ಇದರಲ್ಲಿ ಅನುಮಾನ ಬೇಡ ಎಂದು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮೀಕ್ಷೆಗಳು ನನ್ನ ಪರವಾಗಿ ಹೋಗಿವೆ. ಭ್ರಷ್ಟಚಾರ ರಹಿತ ಎಂಬ ವರದಿ ಹೋಗಿದೆ. 75 ರಷ್ಟು ಜನರೊಂದಿಗೆ ಒಡನಾಟವಿದೆ ಟಿಕೆಟ್ ನೀಡಲು ಇದಕ್ಕಿಂತ ಮತ್ತಿನ್ನೇನು ಬೇಕು ಎಂದರು.
ನಗರದಲ್ಲಿ ಯಾರ ಮನೆ ಬಾಗಿಲು ಜನರಿಗೆ ತೆಗೆದಿರುತ್ತದೆ. ಯಾರು ದೇವಸ್ಥಾನದಲ್ಲಿ ಇರುತ್ತಾರೆ. ದೇವಾಸ್ಥಾನದಲ್ಲಿ ಏನೆಲ್ಲ ಮಾಡುತ್ತಾರೆ ಎಂಬುದು ವರಿಷ್ಠರ ಗಮನಕ್ಕೆ ಹೋಗಿದೆ. ಕೋವಿಡ್ ಸಂದರ್ಭದಲ್ಲಿ ಮುಂದೆ ನಿಂತು ಔಷಧಿಗಳನ್ನು ಹಂಚಿದ್ದೇನೆ. ಸತ್ತವರ ಶವ ಸಂಸ್ಕಾರ ಮಾಡಿದ್ದೇವೆ ಎಂದರು.
ಯಾವುದೇ ಸಂಧಾನಕ್ಕೂ ನಾನು ಒಪ್ಪುವುದಿಲ್ಲ. ಪಕ್ಷದ ವರಿಷ್ಠರು ಹಾಗೂ ಹಿತೂಷಿಗಳ ಸಲಹೆ ಮೇರೆಗೆ ಕೆಲಸ ಮಾಡುತ್ತೇನೆ, ಪಕ್ಷದಲ್ಲಿ ಬಂಡಾಯಕ್ಕೆ ಆಸ್ಪದವಿಲ್ಲ. ತುಮಕೂರಿನ ಜನರು ಬುದ್ಧಿವಂತರಿದ್ದಾರೆ. ಬಂಡಾಯಕ್ಕೆ ಬೆಲೆ ಕೊಡುವುದಿಲ್ಲ ಎಂದರು.
ಜೋಳಿಗೆ ಕೊಟ್ಟವರ ಪ್ರೀತಿಗಾಗಿ ನಿಲ್ಲುತ್ತೇನೆ, ದೇವಸ್ಥಾನಕ್ಕೆ ಹೋಗಿ ಜೋಳಿಗೆ ಹಿಡಿದಿದ್ದೇನೆ. ಪತ್ರಕರ್ತರು, ಬುದ್ಧಿಜೀವಿಗಳು ಜೋಳಿಗೆ ತುಂಬಿದ್ದಾರೆ ಎಂದರು.
ಬಿಜೆಪಿ ಪಕ್ಷ ಜನರು ಹೇಳುವುದನ್ನೇ ಕೇಳುತ್ತಾರೆ ಹೊರತು ಮುಖಂಡರ ಮಾತಿಗೆ ಮಣೆ ಹಾಕುವುದಿಲ್ಲ. ಪಕ್ಷದ ವರದಿಯಲ್ಲಿ ಸೊಗಡು ಶಿವಣ್ಣನ ಹೆಸರಿದೆ, ನನಗೆ ಟಿಕೆಟ್ ಸಿಗಲಿದೆ ಎನ್ನುವ ವಿಶ್ವಾಸವಿದೆ ಎಂದರು.
ಬಿ.ಎಸ್.ಯಡಿಯೂರಪ್ಪ ನಮ್ಮ ನಾಯಕರು, ಅವರನ್ನು ಬಿಟ್ಟು ಏನು ಮಾಡೋಕೆ ಆಗಲ್ಲ. ಬಿಎಸ್ವೈ ಅವರನ್ನು ಹೊರಗೆ ಇಟ್ಟರೆ ಪಕ್ಷಕ್ಕೆ ಕಷ್ಟವಾಗಲಿದೆ. ಶಿಕಾರಿಪುರದಿಂದ ಪಕ್ಷ ಕಟ್ಟಿ ರಾಜ್ಯಕ್ಕೆ ಹರಡಿದವರು. ಅವರನ್ನು ಪಕ್ಷದಲ್ಲಿ ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಪ್ರಜಾಪ್ರಭ್ರುತ್ವ ವಿರೋಧಿಗಳು ಮಾಡಬಾರದನ್ನು ಮಾಡುತ್ತಿದ್ದಾರೆ. ಆದ್ದರಿಂದ ಜನ ಬೇಸತ್ತು ನನಗೆ ಚುನಾವಣೆಗೆ ನಿಲ್ಲುವಂತೆ ಪ್ರೀತಿ ತೋರಿಸುತ್ತಿದ್ದಾರೆ, ನಾನು ಜೋಳಿಗೆ ಹಿಡಿದು ಹೊರಟಾಗ, ಕ್ರಿಶ್ಚಿಯನ್ನರು, ಮುಸ್ಲಿಂರು ಎಲ್ಲರೂ ಬಂದು ನನಗೆ ಅರಸಿದ್ದಾರೆ. 4 ಬಾರಿ ಶಾಸಕನಾಗಿದ್ದಾಗ ತುಮಕೂರಿಗೆ ನೀರು, ಶಿಕ್ಷಣ, ರಸ್ತೆ ಅಭಿವೃದ್ಧಿಗೆ ಒತ್ತು ನೀಡಿದ್ದಲ್ಲದೆ ನನ್ನ ಕಾಲದಲ್ಲಿ ಜನ ನೆಮ್ಮದಿಯಿಂದ ಇದ್ದರು ಎಂದರು.
ನನ್ನ ಮನೆಯ ಬಾಗಿಲು ಸದಾ ತೆರೆದಿರುತ್ತದೆ. ಬೇರೆಯವರಂತೆ ಬಾಗಿಲು ಮುಚ್ಚಿರುವುದಿಲ್ಲ ಎಂದ ಅವರು, ಚುನಾವಣೆಗೆ ನಿಲ್ಲುವುದು ಸತ್ಯ, ಆಕಾಶ ನೋಡಲು ನೂಕು ನುಗ್ಗಲು ಏಕೆ, ಯಾರು ಬೇಕಾದರೂ ನಿಲ್ಲಲಿ, ನಾನು 2023ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುತ್ತೇನೆ ಎಂದರು.
ಮುಖಂಡ ಧನಿಯಾ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿದ್ದು ಸೊಗಡು ಶಿವಣ್ಣ ಅವರು ಮಾತ್ರ, ಕೊರೊನಾ ಸಂದರ್ಭದಲ್ಲಿ ಬೇರೆ ನಾಯಕರು ಕಿಟಕಿ, ಬಾಗಿಲು ಹಾಕಿಕೊಂಡಿದ್ದರೆ ಸೊಗಡು ಶಿವಣ್ಣ ಅವರು ಮಾತ್ರ ಸ್ಮಶಾನದಲ್ಲಿಯೂ ಇದ್ದರು. ಆಸ್ಪತ್ರೆಯಲ್ಲಿ ಓಡಾಡಿ ಚಿಕಿತ್ಸೆ ಕೊಡಿಸಿದರು ಎಂದರು.
ಶಾಸಕರಾಗಿದ್ದ ಅವಧಿಯಲ್ಲಿ ಸಾಮಾಜಿಕ ನ್ಯಾಯ ಪರಿಪಾಲಿಸುವ ಮೂಲಕ ಎಲ್ಲಾ ಜಾತಿಯವರಿಗೂ ಅಧಿಕಾರ ಹಂಚಿದರು. ಕುಟುಂಬ ರಾಜಕಾರಣ ಸ್ವಜಾತಿ ಪ್ರೇಮ ತೋರಲಿಲ್ಲ. ಮಕ್ಕಳನ್ನು ರಾಜಕಾರಣಕ್ಕೆ ಬರಬೇಡಿ ಎನ್ನುವ ರಾಜಕಾರಣಿ ಸೊಗಡು ಶಿವಣ್ಣ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಂಗನಾಯ್ಕ, ನರಸಿಂಹಯ್ಯ, ಜಯಸಿಂಹರಾವ್, ಶಾಂತರಾಜು, ಚೌಡಪ್ಪ, ಮುಂತಾದವರಿದ್ದರು.

Get real time updates directly on you device, subscribe now.

Comments are closed.

error: Content is protected !!