ತುಮಕೂರು: ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ- 2023ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರ ಆರಂಭಗೊಂಡಿದ್ದು, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 13 ರಂದು 14 ನಾಮಪತ್ರ ಸ್ವೀಕೃತಗೊಂಡಿವೆ.
ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಮಲ್ಲಿಕಾರ್ಜುನಯ್ಯ.ಬಿ.ಎಸ್. ನಾಮಪತ್ರ ಸಲ್ಲಿಸಿದ್ದಾರೆ. ತಿಪಟೂರು ಕ್ಷೇತ್ರಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಗಂಗಾಧರಯ್ಯ.ಕೆ.ಎಸ್, ಕುಣಿಗಲ್ ಕ್ಷೇತ್ರಕ್ಕೆ ಆಮ್ ಆದ್ಮಿ ಪಕ್ಷದಿಂದ ಹೆಚ್.ಎ.ಜಯರಾಮಯ್ಯ 2 ನಾಮಪತ್ರ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ರಘು.ಜೆ.ಎಸ್. 2 ನಾಮಪತ್ರ ಸಲ್ಲಿಸಿದರು.
ತುಮಕೂರು ನಗರ ಕ್ಷೇತ್ರಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಗಜೇಂದ್ರ ಕುಮಾರ್ ಕೆ.ಎಸ್. ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ನರಸೇಗೌಡ ನಾಮಪತ್ರ ಸಲ್ಲಿಸಿರುತ್ತಾರೆ.
ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಕೆಆರ್ಎಸ್ನಿಂದ ವಿ.ಎ.ಆನಂದ್ ನಾಮಪತ್ರ ಸಲ್ಲಿಸಿದರೆ, ಕೊರಟಗೆರೆ ಕ್ಷೇತ್ರಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ರವಿಕುಮಾರ್.ಕೆ.ಸಿ, ಗುಬ್ಬಿ ಕ್ಷೇತ್ರಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಪ್ರವೀಣ್.ಎಸ್.ಆರ್, ಶಿರಾ ಕ್ಷೇತ್ರಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಪ್ರದೀಪ್ ಕುಮಾರ್, ಪಾವಗಡ ಕ್ಷೇತ್ರಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಗೋವಿಂದಪ್ಪ.ವಿ, ಮಧುಗಿರಿ ಕ್ಷೇತ್ರಕ್ಕೆ ವಿಧಾನ ಸಭಾ ಕ್ಷೇತ್ರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಜಯಂತ್.ಡಿ.ಸಿ. ನಾಮಪತ್ರ ಸಲ್ಲಿಸಿದ್ದು, ಒಟ್ಟಾರೆ ಆಮ್ ಆದ್ಮಿ ಪಕ್ಷದಿಂದ 2, ಸ್ವತಂತ್ರ 1 ಮತ್ತು ಇತರೆ ಪಕ್ಷಗಳಿಂದ 11 ನಾಮಪತ್ರ ಸ್ವೀಕೃತವಾಗಿವೆ.
Comments are closed.