ಈ ಬಾರಿ ಗೆಲುವು ನಮ್ಮದೆ: ಪರಮೇಶ್ವರ್

ಡಾ.ಶಿವಕುಮಾರ ಶ್ರೀಗಳ ಆಶೀರ್ವಾದವೆ ನನಗೆ ಶ್ರೀರಕ್ಷೆ

83

Get real time updates directly on you device, subscribe now.


ಕೊರಟಗೆರೆ: ವೀರಶೈವ ಲಿಂಗಾಯಿತರ ಮತವನ್ನು ಬಿಜೆಪಿ ಪಕ್ಷಕ್ಕೆ ಮಾತ್ರ ಹಾಕ್ತಾರೆ ಎಂದು ಭ್ರಮೆಯಲ್ಲಿ ಇದ್ದಾರೆ, ಮತವನ್ನು ಕಾಂಗ್ರೆಸ್ ಗೆ ಹಾಕ್ತಾರೋ, ಬಿಜೆಪಿಗೆ ಹಾಕ್ತಾರೋ ನಿಮಗೆ ಚುನಾವಣೆಯಲ್ಲಿ ಗೊತ್ತಾಗುತ್ತೆ. ಈ ಬಾರಿ ಗೆಲುವು ನಮ್ಮದೆ ಎಂದು ಶಾಸಕ ಡಾ.ಜಿ ಪರಮೇಶ್ವರ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾದ ವೀರಶೈವ ಲಿಂಗಾಯಿತ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯರ ಆಶೀರ್ವಾದವೇ ನನಗೆ ಶ್ರೀರಕ್ಷೆ, ಬಸವಣ್ಣನವರ ನುಡಿಗಳೇ ನನಗೆ ಮಾರ್ಗದರ್ಶನ, ಇಬ್ಬರು ಕೂಡ ಸಮಾಜ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಎಂದು ತಿಳಿಸಿದರು.
ವಿಶ್ವದ ಪ್ರಜಾಪ್ರಭುತ್ವದತಂದೆ ಬ್ರಿಟಿಷ್ ಪಾರ್ಲಿಮೆಂಟ್ಎದುರೆ ಬಸವಣ್ಣನವರ ಪ್ರತಿಮೆ ಮಾಡಿದ್ದೇವೆ. ನಿಮ್ಮ ಮನೆ ದೇವರು ಶಿವ ನನ್ನ ಹೆಸರು ಕೂಡ ಪರಮೇಶ್ವರ, ನಾನು ನಿಮಗೆ ಮನೆ ಮಗ, ಬಿಜೆಪಿ ಪಕ್ಷವನ್ನುರಾಜ್ಯದಲ್ಲಿ ಕಟ್ಟಲು ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೇ ಕೆಳಗಿಳಿಸಿ ಅವರ ಪಕ್ಷದ ನಾಯಕರೇ ಸರ್ಕಾರ ನಡೆಸಿದ್ದಾರೆ.

ಇವರದ್ದು ಒಡೆದು ಆಳುವ ಪದ್ಧತಿ, ನಮ್ಮದು ಸರ್ವಜನಾಂಗದ ಶಾಂತಿಯ ತೋಟ ಪದ್ಧತಿ ಅನುಸರಿಸುವುದೆ ಕಾಂಗ್ರೆಸ್ ಪಕ್ಷದ ಮುಖ್ಯ ಧೈಯ ಎಂದರು.
ತುಮಕೂರಿನ ಸಿದ್ದಗಂಗಾ ಮಠ ವಿಶ್ವದಲ್ಲಿ ಪ್ರಖ್ಯಾತಿ ಪಡೆದ ಮಠ, ಇಂದಿಗೂ ಕೂಡ ಪ್ರತಿದಿನ 10 ಸಾವಿರ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಡಾ.ಶಿವಕುಮಾರ ಶ್ರೀಗಳು ಲಿಂಗೈಕ್ಯರಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂಅವರಿಗೆ ಭಾರತರತ್ನ ಪ್ರಶಸ್ತಿ ನೀಡಿಲ್ಲ. ಸರ್ಕಾರಕ್ಕೆ ಇದರ ವಿಚಾರವಾಗಿ ಸಾಕಷ್ಟು ಬಾರಿ ಅರ್ಜಿ ನೀಡಿದರೂ ಬಿಜೆಪಿ ಸರ್ಕಾರ ಅವರಿಗೆ ಪ್ರಶಸ್ತಿ ನೀಡದೆ ಅವರಿಗೆ ಅಗೌರವ ಸೂಚಿಸಿದೆ ಎಂದು ಮಾಜಿ ಡಿಸಿಎಂ ಪರಂ ಆರೋಪ ಮಾಡಿದರು.
ರಾಜ್ಯದ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಅನುಕೂಲಕ್ಕಾಗಿ ನೀಡುತ್ತಿದ್ದ ಸೈಕಲ್ ಕೂಡ ಬಿಜೆಪಿ ಸರ್ಕಾರ ನೀಡದೆ ನಿಲ್ಲಿಸಿದೆ. ಅನ್ನಭಾಗ್ಯ ಯೋಜನೆಯಲ್ಲೂ ವಂಚನೆ ಮಾಡಿದ್ದು, ಈಗಾಗಲೇ ದಾರವಾಡ- ಹುಬ್ಬಳ್ಳಿಯಲ್ಲಿ ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಮುಂದೊಂದು ದಿನ ಬೆಂಗಳೂರಿನಲ್ಲೂ ಕೂಡ ನೀರಿಗೆ ಅಲೆಯುವಂತಹ ಪರಿಸ್ಥಿತಿ ಎದುರಾಗಲಿದೆ ಎಂದರು.

ವಿಧಾನಸಭಾ ಚುನಾವಣೆಗೆ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ. ನಾಮಪತ್ರವನ್ನು ಏ.19 ಬೆಳಗ್ಗೆ 10 ಗಂಟೆಗೆ ಸಲ್ಲಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು, ಪಕ್ಷದ ಕಾರ್ಯಕರ್ತರರು ಭಾಗವಹಿಸಿ ಬೆಂಬಲ ನೀಡಬೇಕು ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಯುವ ವಕ್ತಾರ ನಿಕೇತ್ ರಾಜ್ ಮೌರ್ಯ, ಜಿಲ್ಲಾಧ್ಯಕ್ಷ ಚಂದ್ರಶೇಖರ್, ಪಪಂ ಸದಸ್ಯಎ.ಡಿ.ಬಲರಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥ್ ನಾರಾಯಣ್, ಅರಕೆರೆ ಶಂಕರ್, ತುಮಕೂರು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ನಾಯಕಸಂದ್ರ ಪ್ರದೀಪ್ ಕುಮಾರ್, ಅಖಿಲಾ ಭಾರತ ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ಲೋಕೇಶ್, ತಾ.ಸಂಘಟನಾ ಕಾರ್ಯದರ್ಶಿಕೆ.ಬಿ.ಲೋಕೇಶ್, ಮಾಜಿ ಪಪಂ ಸದಸ್ಯ ಸುರೇಶ್ ಪ್ರತಾಪ್, ವೀರಶೈವ ಮುಖಂಡರಾದ ಪ್ರತಾಪ್ ರುದ್ರ, ಸೋಮಣ್ಣ, ಪ್ರತಾಪ್, ಎಲ್ಐಸಿ ರಾಜಣ್ಣ, ಕೋಳಾಲ ಗಿರೀಶ್, ವೆಂಕಟೇಶ್ ಮೂರ್ತಿ, ಮಂಜುಳ ಆರಾಧ್ಯ, ಉಮೇಶ್, ವಿದ್ಯಾ, ಯುವ ಮುಖಂಡ ದರ್ಶನ್ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!