ಕುಣಿಗಲ್: ಮಕ್ಕಳ ಕಳ್ಳರೆಂದು ಆರೋಪಿಸಿ ಇಬ್ಬರು ಯುವಕರನ್ನು ಗ್ರಾಮಸ್ಥರು ಥಳಿಸಿ ಪೊಲೀಸರ ವಶಕ್ಕೆ ನೀಡಿರುವ ಘಟನೆ ಹುಲಿಯೂರು ದುರ್ಗದಲ್ಲಿ ಶುಕ್ರವಾರ ನಡೆದಿದೆ.
ಹುಲಿಯೂರು ದುರ್ಗದ ಹಳೇಪೇಟೆಯ ಬೀದಿಗಳಲ್ಲಿ ಇಬ್ಬರು ಅಪರಿಚಿತರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದು, ಮಕ್ಕಳ ಬಳಿ ತೆರಳುತ್ತಿದ್ದರು ಎನ್ನಲಾಗಿದೆ. ಇದನ್ನು ನೋಡಿದ ಕೆಲ ಯುವಕರು ಪ್ರಶ್ನಿಸಿದಾಗ ಯುವಕರು ಸಮರ್ಪಕ ಉತ್ತರ ನೀಡದ ಕಾರಣ ಆಕ್ರೋಶಗೊಂಡ ಯುವಕರು ಇಬ್ಬರನ್ನೂ ಹಿಡಿದು ತೀವ್ರವಾಗಿ ಪ್ರಶ್ನಿಸಿದಾಗ ಕೆಲವರು ಮಕ್ಕಳ ಕಳ್ಳರೆಂದು ಆರೋಪಿಸಿದರು.
ಇಬ್ಬರೂ ಯುವಕರನ್ನು ಥಳಿಸಿದ ಗ್ರಾಮಸ್ಥರು, ಇಬ್ಬರನ್ನು ಕರೆತಂದು ಹುಲಿಯೂರು ದುರ್ಗ ಪೊಲೀಸರ ವಶಕ್ಕೆ ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Get real time updates directly on you device, subscribe now.
Prev Post
Next Post
Comments are closed.