ತುಮಕೂರು: ಇದೇನಾ ಸಭ್ಯತೆ.. ಇದೇನಾ ಸಂಸ್ಕೃತಿ ಎನ್ನುವಂತಹ ಪ್ರಶ್ನೆಯನ್ನು ಸಾರ್ವಜನಕರು ರಾಜಕಾರಣಿಗಳಿಗೆ ಕೇಳುವ ಪರಿಸ್ಥಿತಿ ಎದುರಾಗಿದೆ. ಯಾಕೆಂದರೆ ನಗರ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಓರ್ವ ಮಹಿಳೆಯೊಂದಿಗೆ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರ ಹುಚ್ಚಾಟ ಎನ್ನಬೇಕೋ? ಅವರ ವರ್ತನೆಯೇ ಹೀಗೆನಾ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಇನ್ನೇನು ಚುನಾವಣೆಗೆ ಕೆಲವೇ ದಿನ ಬಾಕಿ ಇದ್ದು, ನಗರ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಬಿ- ಫಾರಂ ಪಡೆಯುವ ಮುನ್ನ ಆಡಿಯೋ ವಿವಾದಕ್ಕೆ ತಗಲಾಕಿಕೊಂಡಿರುವುದು ಜೆಡಿಎಸ್ ವರಿಷ್ಠರ ಅವಕೃಪೆಗೂ ಕಾರಣವಾಗಿದೆ ಎನ್ನಲಾಗಿದೆ.
ಜೆಡಿಎಸ್ ಅಭ್ಯರ್ಥಿ ಗೋವಿಂದರಾಜುಗೆ ತನ್ನ ಮನೆಗೆ ಬರುವಂತೆ, ಪದೇ ಪದೆ ಪುಸಲಾಯಿಸುವ ಮಹಿಳೆ ಯಾವ ತರಹದ ಹೆಣ್ಣು ಬೇಕು ಎಂದು ವಾಟ್ಸಾಪ್ ನಲ್ಲಿ ಫೋಟೋ ಕಳಿಸಿ ದೊಡ್ಡ ವಿವಾದ ಎಬ್ಬಿಸಿದ್ದಾಳೆ. ಇಷ್ಟು ಸಾಲದು ಎಂಬಂತೆ ಆಡಿಯೋ ವೈರಲ್ ಮಾಡಿ ನನಗೆ ಕಳಂಕ ತಂದಿರುವುದಕ್ಕೆ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರೆ ಕಾರಣ ಎಂದು ಕುವೆಂಪು ನಗರದ ಜೆಡಿಎಸ್ ಅಭ್ಯರ್ಥಿ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾಳೆ.
ಆಡಿಯೋ ವೈರಲ್ ಆಗುತ್ತಿದ್ದಂತೆ ರಾಜೀವ್ ಗಾಂಧಿ ನಗರದ ನಿವಾಸಿ ರೇಷ್ಮಾ ಎಂಬ ಮಹಿಳೆ ತನಗೆ ರಕ್ಷಣೆ ಕೋರಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪೊಲೀಸರು ಸೂಕ್ತ ನ್ಯಾಯ ಒದಗಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಜೆಡಿಎಸ್ ಅಭ್ಯರ್ಥಿ ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡ್ರು ಎಂಬಂತೆ ತಾವೇ ಸಮಸ್ಯೆ ಮೈಮೇಲೆ ಎಳೆದುಕೊಂಡು ಸಾರ್ವಜನಿಕರ ಅವಕೃಪೆಗೆ ಒಳಗಾಗಿದ್ದಾರೆ. ಇಷ್ಟೆಲ್ಲಾ ವಿದ್ಯಾಮಾನ ಗಮನಿಸುತ್ತಿರುವ ಜೆಡಿಎಸ್ ವರಿಷ್ಠರು ಇಷ್ಟಕ್ಕೆ ಸುಮ್ಮನಾಗುತ್ತಾರೋ? ಅಭ್ಯರ್ಥಿ ಬದಲಿಸುವ ಚಿಂತನೆ ನಡೆಸುತ್ತಾರೋ ಕಾದು ನೋಡಬೇಕು.
Comments are closed.