ತುಮಕೂರು: ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ- 2023ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 17 ರಂದು 35 ನಾಮಪತ್ರ ಸ್ವೀಕೃತಗೊಂಡಿವೆ.
ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಭಾರತೀಯ ಜನತಾಪಾರ್ಟಿ ಪಕ್ಷದಿಂದ ಜೆ.ಸಿ.ಮಾಧುಸ್ವಾಮಿ ಮತ್ತು ಬಹುಜನ ಸಮಾಜ ಪಾರ್ಟಿಯಿಂದ ಸತೀಶ ಕೆ.ಎಂ., ತಿಪಟೂರು ವಿ.ಸ.ಕ್ಷೇತ್ರಕ್ಕೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಕೆ.ಷಡಕ್ಷರಿ, ಭಾರತೀಯ ಜನತಾ ಪಕ್ಷದಿಂದ ಬಿ.ಸಿ.ನಾಗೇಶ್, ಸ್ವತಂತ್ರ ಅಭ್ಯರ್ಥಿ ಎಂ.ರವಿ, ಸ್ವತಂತ್ರ ಅಭ್ಯರ್ಥಿ ಹರೀಶ್.ಟಿ.ಎನ್. ನಾಮಪತ್ರ ಸಲ್ಲಿಸಿದರು.
ತುರುವೇಕೆರೆ ವಿ.ಸ.ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದಿಂದ ಜಯರಾಮ್.ಎ.ಎಸ್. 2 ನಾಮಪತ್ರ, ಜನತಾದಳ (ಜಾತ್ಯಾತೀತ) ಪಕ್ಷದಿಂದ ಎಂ.ಟಿ.ಕೃಷ್ಣಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಕಾಂತರಾಜ್.ಬಿ.ಎಂ. ನಾಮಪತ್ರ ಸಲ್ಲಿಸಿದರು.
ಕುಣಿಗಲ್ ವಿ.ಸ.ಕ್ಷೇತ್ರಕ್ಕೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ರಂಗನಾಥ್.ಹೆಚ್.ಡಿ. 2 ನಾಮಪತ್ರ, ಸ್ವತಂತ್ರ ಅಭ್ಯರ್ಥಿ ಸುಮಾ ರಂಗನಾಥ್.ಹೆಚ್.ಡಿ, ಭಾರತೀಯ ಜನತಾ ಪಕ್ಷದಿಂದ ಡಿ.ಕೃಷ್ಣಕುಮಾರ್, ಸ್ವತಂತ್ರ ಅಭ್ಯರ್ಥಿಯಾಗಿ ಬಿ.ಬಿ.ರಾಮಸ್ವಾಮಿ ಗೌಡ ನಾಮಪತ್ರ ಸಲ್ಲಿಸಿದ್ದಾರೆ.
ತುಮಕೂರು ನಗರ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದಿಂದ ಜಿ.ಬಿ.ಜ್ಯೋತಿಗಣೇಶ್ ಹಾಗೂ ಜನತಾದಳ (ಜಾತ್ಯಾತೀತ) ಪಕ್ಷದಿಂದ ಎನ್.ಗೋವಿಂದರಾಜು, ಕೊರಟಗೆರೆ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದಿಂದ ಬಿ.ಹೆಚ್.ಅನಿಲ್ ಕುಮಾರ್ 3 ನಾಮಪತ್ರ, ಸ್ವತಂತ್ರ ಅಭ್ಯರ್ಥಿ ಆರ್.ನಾರಾಯಣಪ್ಪ, ಗುಬ್ಬಿ ವಿ.ಸ.ಕ್ಷೇತ್ರಕ್ಕೆ ಆಮ್ ಆದ್ಮಿ ಪಕ್ಷದಿಂದ ಪ್ರಭುಸ್ವಾಮಿ.ಬಿ.ಎಸ್, ಜಾತ್ಯಾತೀತ ಜನತಾದಳ ಪಕ್ಷದಿಂದ ನಾಗರಾಜು.ಬಿ.ಎಸ್, ಭಾರತೀಯ ಜನತಾಪಕ್ಷದಿಂದ ಎಸ್.ಡಿ.ದಿಲೀಪ್ ಕುಮಾರ್ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಶಿರಾ ವಿ.ಸ.ಕ್ಷೇತ್ರಕ್ಕೆ ಆಮ್ ಆದ್ಮಿ ಪಕ್ಷದಿಂದ ಶಶಿಕುಮಾರ್.ಆರ್, ಸ್ವಯಂ ಕೃಷಿ ಪಾರ್ಟಿಯಿಂದ ಕೆ.ಟಿ.ಗುಂಡರಾಜ್, ಉತ್ತಮ ಪ್ರಜಾಕೀಯ ಪಕ್ಷದಿಂದ ಅಶೋಕ, ಭಾರತೀಯ ಜನತಾ ಪಕ್ಷದಿಂದ ಸಿ.ಎಂ.ರಾಜೇಶ್ ಗೌಡ, ಜನತಾದಳ (ಜಾತ್ಯಾತೀತ) ಪಕ್ಷದಿಂದ ಆರ್.ಉಗ್ರೇಶ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಟಿ.ಬಿ.ಜಯಚಂದ್ರ, ಪಾವಗಡ ವಿ.ಸ.ಕ್ಷೇತ್ರಕ್ಕೆ ಆಮ್ ಆದ್ಮಿ ಪಕ್ಷದಿಂದ ಎನ್.ರಾಮಾಂಜಿನಪ್ಪ, ಮಧುಗಿರಿ ವಿ.ಸ.ಕ್ಷೇತ್ರಕ್ಕೆ ಜನತಾದಳ (ಜಾತ್ಯಾತೀತ) ಪಕ್ಷದಿಂದ ಎಂ.ವಿ.ವೀರಭದ್ರಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಕೆ.ಎನ್.ರಾಜಣ್ಣ, ಉತ್ತಮ ಪ್ರಜಾಕೀಯ ಪಕ್ಷದಿಂದ ಮುದ್ದುರಾಜು.ಜಿ. ನಾಮಪತ್ರ ಸಲ್ಲಿಸಿದ್ದಾರೆ.
ಒಟ್ಟಾರೆ ಬಿಜೆಪಿ 11, ಕಾಂಗ್ರೆಸ್ 7, ಆಮ್ ಆದ್ಮಿ ಪಕ್ಷದಿಂದ 3, ಬಿಎಸ್ಪಿ 1, ಜೆಡಿಎಸ್ 5, ಸ್ವತಂತ್ರ 5 ಮತ್ತು ಇತರೆ ಪಕ್ಷಗಳಿಂದ 3 ನಾಮಪತ್ರ ಸ್ವೀಕೃತವಾಗಿವೆ.
Comments are closed.