ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಅವರು ಕಳೆದ 2018ರ ಚುನಾವಣೆಯಲ್ಲಿ ನಕಲಿ ಬಾಂಡ್ ವಿತರಿಸಿ ಜನರಿಗೆ ಮೋಸ ಮಾಡಿದ್ದಾರೆ. ಹಾಗಾಗಿ ಅವರ ಶಾಸಕ ಸ್ಥಾನ ಅನರ್ಹಗೊಳಿಸುವಂತೆ ಮಾಜಿ ಶಾಸಕ ಸುರೇಶ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ನಲ್ಲಿ ಸುದೀರ್ಘ ವಾದ ಮಂಡನೆಯಾಗಿ ತೀರ್ಪನ್ನು ಒಂದೇ ಸಾಲಿನಲ್ಲಿ ನೀಡಿದ್ದರು. ಅದನ್ನು ಪ್ರಶ್ನಿಸಿ ಗೌರಿಶಂಕರ್ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಅಲ್ಲಿ ಅವರ ಅಪೀಲು ಒಪ್ಪಿಗೆಯಾಗಿ ತಡೆಯಾಜ್ಞೆಸಿಕ್ಕಿದೆ.
ಚುನಾವಣೆಗೆ ಸ್ಪರ್ಧಿಸಲು ಈಗ ಯಾವುದೇ ರೀತಿಯ ಅಡ್ಡಿಯಿಲ್ಲ, ಸ್ಪರ್ಧಿಸಬಹುದಾಗಿದೆ. ಸದ್ಯಕ್ಕೆ ಕೇಸ್ನ್ನು ತಡೆ ಹಿಡಿಯಲಾಗಿದೆ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದ್ದು, ಚುನಾವಣೆಯ ಹೊಸ್ತಿಲಲ್ಲಿ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಸೇರಿದಂತೆ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಹಾಗೂ ಮತದಾರರಿಗೆ ಎದುರಾಗಿದ್ದ ಆತಂಕ ಇದೀಗ ದೂರವಾದಂತಾಗಿದೆ.
ಸುಪ್ರೀಂ ಕೋರ್ಟ್ ತಡೆಯಾಜ್ಞೆ ಹೊರ ಬೀಳುತ್ತಿದ್ದಂತೆ ತುಮಕೂರಿನಲ್ಲಿ ಶಾಸಕ ಡಿ.ಸಿ ಗೌರಿಶಂಕರ್ ಅವರ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಸುಪ್ರಿಂ ತಡೆಯಾಜ್ಞೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಜೆಡಿಎಸ್ ಮುಖಂಡರಾದ ಹಿರೇಹಳ್ಳಿ ಮಹೇಶ್, ಹಾಲೂರು ಅನಂತ್ ಸೇರಿದಂತೆ ಹಲವು ಮುಖಂಡರು ಸಂತಸ ವ್ಯಕ್ತಪಡಿಸಿದ್ದು, ಸುಪ್ರೀಂ ಕೋರ್ಟ್ ಆದೇಶವನ್ನ ಸ್ವಾಗತಿಸಿದ್ದು ಇನ್ನು ನಮ್ಮ ಕ್ಷೇತ್ರದ ಜನಪ್ರಿಯ ಶಾಸಕ ಡಿ.ಸಿ.ಗೌರಿಶಂಕರ್ ಅವರ ಗೆಲುವಿಗಾಗಿ ಹಗಲಿರುಳು ಶ್ರಮ ಹಾಕಿ ಅವರನ್ನು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಲು ಈಗಿನಿಂದಲೇ ಮತ್ತಷ್ಟು ಕೆಲಸ ನಿರ್ವಹಿಸಲು ಮುಂದಾಗುತ್ತೇವೆ ಎಂದರು.
ಗೌರಿಶಂಕರ್ ಗೆ ಸುಪ್ರಿಂನಿಂದ ಬಿಗ್ ರಿಲೀಫ್
ಚುನಾವಣಗೆ ನಿಲ್ಲಲು ಅವಕಾಶ- ಕಾರ್ಯಕರ್ತರ ಸಂಭ್ರಮ
Get real time updates directly on you device, subscribe now.
Next Post
Comments are closed.