ಅಪಾರ ಬೆಂಬಲಿಗರೊಂದಿಗೆ ಶ್ರೀನಿವಾಸ್ ನಾಮಪತ್ರ ಸಲ್ಲಿಕೆ

73

Get real time updates directly on you device, subscribe now.


ಗುಬ್ಬಿ: ಕಾಂಗ್ರೆಸ್ ಪಕ್ಷ ಹಲವು ಯೋಜನೆ ನೀಡಿದ್ದು ಜನಪರ ಸರ್ಕಾರ ನೀಡಿದೆ ಮತ್ತು ಮುಂದೆ ನೀಡುತ್ತದೆ ಎಂದು ಗುಬ್ಬಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ಮೆರವಣಿಗೆಯಲ್ಲಿ ಸಾಗಿ ಬಂದು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿ ಮಾತನಾಡಿ, ಜೆಡಿಎಸ್ ಪಕ್ಷವನ್ನು ನಾನು ಬಿಟ್ಟು ಬಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದು ಸಾವಿರಾರು ಕಾರ್ಯಕರ್ತರು ನನ್ನ ಜೊತೆಯಲ್ಲಿ ಸಾಗಿ ಬರುತ್ತಿರುವುದು ನೋಡಿದಾಗ ಖುಷಿಯಾಗುತ್ತದೆ. ಕಾಂಗ್ರೆಸ್ ಪಕ್ಷ ಹಲವು ಯೋಜನೆ ಮಾಡಿದ್ದು ಉಚಿತ ವಿದ್ಯುತ್, ಮಹಿಳೆಯರಿಗೆ 2000 ರೂಪಾಯಿ ಸೇರಿದಂತೆ ಹಲವು ಯೋಜನೆಯನ್ನು ಸರ್ಕಾರ ನೀಡುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸುಭೀಕ್ಷವಾಗಿತ್ತು. ಈ ಬಾರಿ ಸಹ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದರು.

ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ನಾನು ಮೂರನೇ ಪ್ಲೇಸ್ಗೆ ಹೋಗುತ್ತೇನೆಂದು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ. ನಾನು ಲೆಕ್ಕಕ್ಕಿಲ್ಲ ಎನ್ನುವವರಿಗೆ ಮೇ 13ರ ಫಲಿತಾಂಶದಲ್ಲಿ ನಾನು ಯಾವ ಸ್ಥಾನದಲ್ಲಿದ್ದೆ ಎಂದು ಜನರು ತೀರ್ಮಾನ ಮಾಡಿರುತ್ತಾರೆ. ಚುನಾವಣೆಯಲ್ಲಿ ಯಾವುದೇ ಒಂದು ಸಮುದಾಯದಿಂದ ಗೆಲ್ಲಲು ಸಾಧ್ಯವಿಲ್ಲ. ಎಲ್ಲಾ ಸಮುದಾಯದವರು ಮತ ನೀಡಿದರೆ ಮಾತ್ರ ಗೆಲ್ಲಲು ಸಾಧ್ಯವಾಗುತ್ತದೆ. ನನಗೆ ವಿರೋಧಿ ಯಾರು ಎಂಬುದಿಲ್ಲ. ಪ್ರತಿ ಬಾರಿಯೂ ಕಾಯ ವಾಚ ಮನಸ ಚುನಾವಣೆ ಮಾಡುತ್ತೇನೆ. ನನ್ನ ಕಾರ್ಯಕರ್ತರು ಫಲಾ ಫಲ ನೀಡುತ್ತಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಎಂಎಲ್ಸಿ ರಾಜೇಂದ್ರ ಮಾತನಾಡಿ, ಮುಖ್ಯಮಂತ್ರಿ ಯಾರು ಎಂದು ಹೇಳಲು ಸಾಧ್ಯವಿಲ್ಲ, ನಮ್ಮ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಹೋರಾಟ ಮಾಡುತ್ತೇವೆ. ಶ್ರೀನಿವಾಸ್ ಅವರು ಹಾಗೂ ಕೆ.ಎನ್.ರಾಜಣ್ಣ ಅವರು ಬಹಳ ವರ್ಷಗಳಿಂದ ಹೆಚ್ಚು ವಿಶ್ವಾಾಸ ಇಟ್ಟುಕೊಂಡಿರುವವರು, ಹಾಗಾಗಿ ಅವರ ಮೇಲೆ ಜನರಿಗೆ ಪ್ರೀತಿ ಇದೆ ಎಂದರು.
ದೇವೇಗೌಡರ ಸೋಲಿಗೆ ಖಂಡಿತವಾಗಿಯೂ ರಾಜಣ್ಣ ಕಾರಣರಲ್ಲ, ನಮ್ಮ ಮತ ಕೇವಲ ಒಂದು ಮಾತ್ರ. ಜನರು ಯಾರು ಅಭಿವೃದ್ಧಿ ಮಾಡುತ್ತಾರೆ. ನಮ್ಮ ಜೊತೆ ಯಾರು ಇರುತ್ತಾರೆ ಎಂಬುದನ್ನರಿತು ಅವರು ಸಂಸದರ ಚುನಾವಣೆಯಲ್ಲಿ ಮತ ನೀಡಿದ್ದಾರೆ ಬಿಟ್ಟರೆ ನಮಗೂ ಅದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ತಿಳಿಸಿದರು.

ಜೆಸಿಬಿ ಮೂಲಕ ಮೆರವಣಿಗೆಯಲ್ಲಿ ಆಗಮಿಸಿದಂತಹ ಕಾರ್ಯಕರ್ತರಿಗೆ ಹೂವಿನ ಸ್ವಾಗತ ಸೇರಿದಂತೆ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿದ್ದವು.
ಮಾಜಿ ಎಂಎಲ್ಸಿ ಕಾಂತರಾಜು, ಕೆಪಿಸಿಸಿ ಜಿಲ್ಲಾ ಕಾರ್ಯದರ್ಶಿ ಮುರುಳಿಧರ ಹಾಲಪ್ಪ, ಕಾಂಗ್ರೆಸ್ ಮುಖಂಡ ಶಶಿ ಹುಲಿಕುಂಟೆ, ಜಿಲ್ಲಾ ಕಾರ್ಯದರ್ಶಿ ಶಂಕರಾನಂದ, ಭರತ್ ಗೌಡ, ಪಟ್ಟಣ ಪಂಚಾಯತಿ ಸದಸ್ಯರು, ಸಾವಿರಾರು ಕಾರ್ಯಕರ್ತರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!