ತುಮಕೂರು: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023ರ ಸಂಬಂಧ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗಿದ್ದು, ಎಫ್ಎಸ್ಟಿ ಮತ್ತು ಎಸ್ಎಸ್ಟಿ ತಂಡಗಳು ಕಾರ್ಯ ನಿರ್ವಹಿಸುತ್ತಿವೆ.
ಏಪ್ರಿಲ್ 17 ರಂದು ರಾತ್ರಿ 8.15ರ ಸಮಯದಲ್ಲಿ ತುಮಕೂರಿನ ಜಾಸ್ ಟೋಲ್ ಹತ್ತಿರ ಚುನಾವಣಾ ಚೆಕ್ಪೋಸ್ಟ್ ನಲ್ಲಿ ಕೆಎ-34- ಎನ್- 9504 ಕಾರಿನಲ್ಲಿ ಬಂದ ಸುಧೀರ್ ಎಂಬುವವರ ವಾಹನ ತಪಾಸಣೆ ನಡೆಸಿದಾಗ 2,62,000 ರೂ. ಗಳಿದ್ದು, ಈ ಕುರಿತು ಸದರಿಯವರು ಸಮಂಜಸ ಉತ್ತರ ನೀಡದೆ ಇರುವುದರಿಂದ ಎಸ್ಎಸ್ಟಿ ತಂಡದ ಮುಖ್ಯಸ್ಥ ಸಿ.ಆರ್.ರಾಘವೇಂದ್ರ ಸದರಿಯವರನ್ನು ಹಾಗೂ ಹಣ ವಶಕ್ಕೆ ಪಡೆದಿರುತ್ತಾರೆ ಹಾಗೂ ಮುಂದಿನ ಕ್ರಮಕ್ಕಾಗಿ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಅಕ್ರಮವಾಗಿ ಸಾಗಿಸುತ್ತಿದ್ದ 2.62ಲಕ್ಷ ರೂ. ಜಪ್ತಿ
Get real time updates directly on you device, subscribe now.
Next Post
Comments are closed.