ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಶಾಸಕ ಡಿ.ಸಿ.ಗೌರಿಶಂಕರ್ ಸಾಂಕೇತಿಕವಾಗಿ ಚುನಾವಣಾಧಿಕಾರಿ ಹೋಟೆಲ್ ಶಿವಪ್ಪ ಅವರಿಗೆ ನಾಮಪತ್ರ ಸಲ್ಲಿಸಿದರು. ಮುಖಂಡರಾದ ಬೆಳಗುಂಬ ವೆಂಕಟೇಶ್, ಪಾಲಿಕೆ ಸದಸ್ಯ ಶ್ರೀನಿವಾಸ್, ನರುಗನಹಳ್ಳಿ ವಿಜಯಕುಮಾರ್, ತನ್ವೀರ್ ರೆಹಮಾನ್ ಜೊತೆಯಲ್ಲಿದ್ದರು.
ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಗೌರಿಶಂಕರ್, ತುಮಕುರು ಗ್ರಾಮಾಂತರದಲ್ಲಿ ಚುನಾವಣೆ ಏಕಪಕ್ಷೀಯವಾಗಿ ನಡೆಯಲಿದ್ದು, ಜನರು ಜೆಡಿಎಸ್ ಆಯ್ಕೆ ಮಾಡಲಿದ್ದಾರೆ. ಜನರ ಬಳಿಗೆ ಮತ ಭಿಕ್ಷೆಗಾಗಿ ಹೋಗುತ್ತೇನೆ, ಜನರ ಸೇವೆ ಮಾಡಿರುವುದಕ್ಕೆ ಮತ ನೀಡುತ್ತಾರೆ. ಸೇವೆ ಮಾಡದೆ ಇರುವವರಿಗೆ ಮತ ನೀಡುತ್ತಾರಾ ಎಂದು ಪ್ರಶ್ನಿಸಿದರು.
ಐದು ವರ್ಷ ಪ್ರಾಮಾಣಿಕವಾಗಿ ಜನರು ನೀಡಿದ್ದ ಕೂಲಿ ಕೆಲಸ ಮಾಡಿದ್ದೇನೆ. ಜನ ಮತ ಭಿಕ್ಷೆ ಹಾರುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಹೈಕೋರ್ಟ್ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ವಿಚಾರದಲ್ಲಿ ನ್ಯಾಯಾಲಯದ ಮೇಲೆ ಗೌರವವಿದೆ, ನ್ಯಾಯಾಲಯದಿಂದ ನ್ಯಾಯ ಸಿಗುವ ವಿಶ್ವಾಸ ಇದೆ ಎಂದರು.
ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ಗುರುವಾರ ಅಪಾರ ಪ್ರಮಾಣದ ಬೆಂಬಲಿಗರೊಂದಿಗೆ ನಗರದ ಬಿಜೆಎಸ್ ಸರ್ಕಲ್ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಕುಟುಂಬಸ್ಥರೊಂದಿಗೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
ನಾಮಪತ್ರ ಸಲ್ಲಿಕೆಗೆ ಕುಮಾರಣ್ಣ ಆಗಮಿಸುವ ನಿರೀಕ್ಷೆ ಇದ್ದು, ಗ್ರಾಮಾಂತರದಲ್ಲಿ ಜೆಡಿಎಸ್ ಬಲ ಪ್ರದರ್ಶನ ಕಾಣಲಿದೆ. ನನ್ನ ಮೇಲಿನ ಪ್ರೀತಿಯಿಂದಲೇ ಸಾವಿರಾರು ಜನರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
Comments are closed.