ಜೆಡಿಎಸ್ ಅಭ್ಯರ್ಥಿಯಾಗಿ ಅಪ್ಪ, ಮಗ ನಾಮಿನೇಷನ್

ಕುಣಿಗಲ್ ನಲ್ಲಿ ನಾಗರಾಜಯ್ಯ, ರವಿ ನಾಮಪತ್ರ ಸಲ್ಲಿಕೆ

143

Get real time updates directly on you device, subscribe now.


ಕುಣಿಗಲ್: ಮಾಜಿ ಸಚಿವ ಹಾಗೂ ಅವರ ಪುತ್ರ ರವಿ ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ಜೆಡಿಎಸ್ ಪಕ್ಷಕ್ಕೆ ನಾಮಪತ್ರ ಸಲ್ಲಿಸಿದರು.
ಮಾಜಿ ಸಚಿವ ಡಿ.ನಾಗರಾಜಯ್ಯ, ಪುತ್ರ ಜಿಪಂ ಮಾಜಿ ಅಧ್ಯಕ್ಷ ಡಾ.ರವಿ ಅಪಾರ ಬೆಂಬಲಿಗರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ನಡೆಸಿ ಇಬ್ಬರೂ ಜೆಡಿಎಸ್ ಪಕ್ಷದ ಪರವಾಗಿ ನಾಮಪತ್ರ ಸಲ್ಲಿಸಿದ್ದು, ಕಾರ್ಯಕರ್ತರಿಗೆ ಅಭ್ಯರ್ಥಿ ಯಾರೆಂಬ ಗುಟ್ಟು ಬಿಟ್ಟುಕೊಡಲಿಲ್ಲ.

ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ಕಾಂಗ್ರೆಸ್ನವರು ಕಾಸುಕೊಟ್ಟರೆ ಇಸ್ಕೊಂಡು ಜೆಡಿಎಸ್ಗೆ ಮತ ಹಾಕಿ, ಕಾರಣ ತಾಲೂಕಿನಲ್ಲಿ ಬಂಡೆ ಲೂಟಿ ಹೊಡೆದು ಮಾಡಿದ ತಾಲೂಕಿನ ದುಡ್ಡೆ ಆಗಿದೆ. ಬಿಜೆಪಿ ಅಭ್ಯರ್ಥಿ ಹೇಳುವ ಸುಳ್ಳು, ಹತಾಷೆ ಮಾತಿಗೆ ಮರಳಾಗಬೇಡಿ, ಬಿಜೆಪಿ ಸರ್ಕಾರ ರೈತ ವಿರೋಧಿ ಧೋರಣೆ, ಬೆಲೆ ಏರಿಕೆಯ ಬಗ್ಗೆ ಜನ ಸಾಮಾನ್ಯರು ಅರಿವು ಹೊಂದಿ, ಜನಪರ, ರೈತಪರ ಕಾರ್ಯಕ್ರಮ ಘೋಷಿಸಿ ಅನುಷ್ಠಾನಕ್ಕೆ ಮುಂದಾಗಿರುವ ಜೆಡಿಎಸ್ ಬೆಂಬಲಿಸಬೇಕು. ಅಭ್ಯರ್ಥಿ ಯಾರೆ ಆಗಲಿ ಜೆಡಿಎಸ್ ಪಕ್ಷ ಬೆಂಬಲಿಸಬೇಕೆಂದು ಮನವಿ ಮಾಡಿದರು.

ಜಿಪಂ ಮಾಜಿ ಅಧ್ಯಕ್ಷ ಡಾ.ರವಿ ಮಾತನಾಡಿ, ಬಿಜೆಪಿ ಅಭ್ಯರ್ಥಿ ಜನತೆಗೆ ಹಗ್ಗ, ಹಾರ ತರುವಂತೆ ಮರುಳು ಮಾಡುತ್ತಿದ್ದಾರೆ. ಆದರೆ ಬಿಜೆಪಿ ಪಕ್ಷದ ಸಾಧನೆಯನ್ನು ಜನತೆ ಮುಂದಿಟ್ಟು ಮತಯಾಚನೆ ಮಾಡೋದು ಬಿಟ್ಟು ಭಾವಾನಾತ್ಮಕವಾಗಿ ಹೆದರಿಸುತ್ತಿದ್ದಾರೆ. ತಾಲೂಕಿನ ಮತದಾರರು ಇದಕ್ಕೆ ತಲೆ ಕೆಡಿಸಿಕೊಳ್ಳದೆ ಜೆಡಿಎಸ್ ಘೋಷಣೆ ಮಾಡಿರುವ ಪಂಚರತ್ನ ಯೋಜನೆ ಅಂಶಗಳ ಅನುಷ್ಠಾನಕ್ಕೆ ಜೆಡಿಎಸ್ಗೆ ಮತ ನೀಡಬೇಕು. ಕಾರ್ಯಕರ್ತರು ಇವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಮತಯಾಚನೆ ಮಾಡಬೇಕು ಎಂದರು.
ಕಾಂಗ್ರೆಸ್ ಶಾಸಕರು ಕ್ಷೇತ್ರದ ಅಭಿವೃದ್ಧಿ ಮರೆತ ಕಾರಣ ಜನತೆಗೆ ಆಮೀಷ ಒಡ್ಡಿ ಮತಯಾಚನೆಗೆ ಮುಂದಾಗಿರುವುದು ನಾಚಿಕೆಗೇಡು. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದ್ದು ಜನಪರ ಯೋಜನೆಗಳಾದ ಪಂಚರತ್ನ ಅಧಿಕಾರಕ್ಕೆ ಬಂದ ಕೂಡಲೆ ಜಾರಿಗೊಳ್ಳಲಿದೆ, ಮತದಾರರು ಜೆಡಿಎಸ್ ಬೆಂಬಲಿಸಿ ಕನ್ನಡಿಗರ ಸ್ವಾಭಿಮಾನ ಉಳಿಸಬೇಕೆಂದರು.

ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೂ ಮೆರವಣಿಗೆಯಲ್ಲಿ ಆಗಮಿಸಿದ್ದು ಸಂಚಾರ ವ್ಯವಸ್ಥೆ ನಿಯಂತ್ರಿಸಲು ಪೊಲೀಸರು ಪರದಾಡಿದರು, ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ಮುಖಂಡರಾದ ಪ್ರಕಾಶ್, ಶ್ರೀನಿವಾಸಗೌಡ, ಹರೀಶ್, ಮಾರುತಿ, ಧನಂಜಯ, ಶಿವಣ್ಣ, ಕೃಷ್ಣಪ್ಪ, ಯೂಸುಫ್, ಜೀಯಾವುಲ್ಲ, ಶಂಕರ್, ಕೃಷ್ಣೆಗೌಡ, ಕಲ್ಲನಾಯಕನಹಳ್ಳಿ ಶಿವಣ್ಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!