ತುಮಕೂರು: ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ- 2023ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 19 ರಂದು 62 ನಾಮಪತ್ರ ಸ್ವೀಕೃತಗೊಂಡಿವೆ.
ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿ ಕ್ಯಾಪ್ಟನ್ ಸೋಮಶೇಖರ್, ಪಕ್ಷೇತರ ಅಭ್ಯರ್ಥಿ ನಾಸೀರ್ ಬೇಗ್ ಎಂ., ಆಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿಯಿಂದ ಎಂ.ಕೆ. ಪಾಷ, ಪಕ್ಷೇತರ ಅಭ್ಯರ್ಥಿ ಗಿರೀಶ್.ಆರ್, ಭಾರತೀಯ ಬಹುಜನ ಕ್ರಾಂತಿ ದಳದಿಂದ ಹೆಚ್.ಟಿ.ನಾಗರಾಜು, ಇಂಡಿಯನ್ ನ್ಯಾಷನಲ್ ಕಾಂಗ್ರಸ್ ಪಕ್ಷದಿಂದ ಕೆ.ಎಸ್.ಕಿರಣ್ ಕುಮಾರ್ ನಾಮಪತ್ರ ಸಲ್ಲಿಸಿದರು.
ತಿಪಟೂರು ವಿಧಾನಸಭಾ ಕ್ಷೇತ್ರಕ್ಕೆ ಆಮ್ ಆದ್ಮಿ ಪಕ್ಷದಿಂದ ಟಿ.ಎಸ್. ಚಂದ್ರಶೇಖರ್ 2 ನಾಮಪತ್ರ, ಭಾರತೀಯ ಬಹುಜನ ಕ್ರಾಂತಿ ದಳದಿಂದ ಆರ್.ಎಂ.ಮಲ್ಲಿಕಾರ್ಜುನ ಸ್ವಾಮಿ, ಭಾರತೀಯ ಜನತಾಪಕ್ಷದಿಂದ ಬಿ.ಸಿ.ನಾಗೇಶ್, ಜನತಾದಳ (ಜಾತ್ಯಾತೀತ) ಕೆ.ಟಿ. ಶಾಂತಕುಮಾರ, ಸ್ವತಂತ್ರ ಅಭ್ಯರ್ಥಿ ಬಿ.ಎನ್.ವಿಜಯಕುಮಾರ್, ಸ್ವತಂತ್ರ ಅಭ್ಯರ್ಥಿ ಭರತ್.ಬಿ.ಎಸ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಗಂಗಾಧರಯ್ಯ.ಕೆ.ಎಸ್. ಉತ್ತಮ ಪ್ರಜಾಕೀಯ ಪಾರ್ಟಿ ಪಕ್ಷದಿಂದ ಗಿರೀಶ್.ಎಸ್.ಬಿ, ಸ್ವತಂತ್ರ ಅಭ್ಯರ್ಥಿ ಎಂ.ರವಿ ನಾಮಪತ್ರ ಸಲ್ಲಿಸಿರುತ್ತಾರೆ.
ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಭಾರತೀಯ ಜನತಾಪಕ್ಷ ಜಯರಾಂ.ಎ.ಎಸ್. 2 ನಾಮಪತ್ರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಾಂತರಾಜ್.ಬಿ.ಎಂ. 2 ನಾಮಪತ್ರ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಹಟ್ಟಯ್ಯ.ಎನ್, ಉತ್ತಮ ಪ್ರಜಾಕೀಯ ಪಾರ್ಟಿ ಭರತ್.ಎಸ್, ಪಕ್ಷೇತರ ಅಭ್ಯರ್ಥಿ ನಾರಾಯಣ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೆ.ಹುಚ್ಚೇಗೌಡ ನಾಮಪತ್ರ ಸಲ್ಲಿಸಿದರು.
ಕುಣಿಗಲ್ ವಿಧಾನ ಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿ ಹೆಚ್.ಡಿ.ರಾಜೇಶ್, ಆಮ್ ಆದ್ಮಿ ಪಕ್ಷದಿಂದ ಪ್ರಶಾಂತ್ ಹೆಚ್.ಜಿ, ಜನತಾದಳ (ಜಾತ್ಯಾತೀತ) ಡಿ.ನಾಗರಾಜಯ್ಯ 2 ನಾಮಪತ್ರ, ಜನತಾದಳ (ಜಾತ್ಯಾತೀತ) ಡಾ.ರವಿ ಬಿ.ಎನ್. 2 ನಾಮಪತ್ರ, ಸ್ವತಂತ್ರ ಅಭ್ಯರ್ಥಿ ಬಿ.ಟಿ. ತಿರುಮಲೇಗೌಡ ನಾಮಪತ್ರ ಸಲ್ಲಿಸಿದ್ದಾರೆ.
ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿ ಕುಮಾರ್.ಎಸ್, ಭಾರತೀಯ ಜನತಾ ಪಾರ್ಟಿ ಜಿ.ಬಿ.ಜ್ಯೋತಿಗಣೇಶ್ 2 ನಾಮಪತ್ರ, ಸ್ವತಂತ್ರ ಅಭ್ಯರ್ಥಿ ಎಸ್.ಶಿವಣ್ಣ, ಸ್ವತಂತ್ರ ಅಭ್ಯರ್ಥಿ ಶ್ರೀನಿವಾಸ್.ಜಿ.ಕೆ, ಸ್ವತಂತ್ರ ಅಭ್ಯರ್ಥಿ ಎನ್.ಗೋವಿಂದರಾಜು ನಾಮಪತ್ರ ಸಲ್ಲಿಸಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಜನತಾದಳ (ಜಾತ್ಯಾತೀತ) ಡಿ.ಸಿ.ಗೌರಿಶಂಕರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜಿ.ಹೆಚ್.ಷಣ್ಮುಖಪ್ಪ, ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಡಾ.ಜಿ.ಪರಮೇಶ್ವರ 3 ನಾಮಪತ್ರ, ಭಾರತೀಯ ಜನತಾ ಪಾರ್ಟಿಯಿಂದ ಬಿ.ಹೆಚ್.ಅನಿಲ್ ಕುಮಾರ್ ನಾಮಪತ್ರ ಸಲ್ಲಿಸಿದರು.
ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಜಾತ್ಯಾತೀತ ಜನತಾದಳದಿಂದ ನಾಗರಾಜು.ಬಿ.ಎಸ್, ಪಕ್ಷೇತರ ಅಭ್ಯರ್ಥಿ ಎ.ನಂಜುಂಡಯ್ಯ, ಪಕ್ಷೇತರ ಅಭ್ಯರ್ಥಿ ಎ.ಎಸ್.ಮಲ್ಲಿಕಾರ್ಜುನಯ್ಯ, ಶಿರಾ ವಿಧಾನ ಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿ ಬಿ.ಎ.ಮಂಜುನಾಥ, ಸ್ವಯಂ ಕೃಷಿ ಪಾರ್ಟಿಯಿಂದ ಕೆ.ಟಿ.ಗುಂಡರಾಜ್, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಗಿರೀಶ್, ಭಾರತೀಯ ಜನತಾ ಪಾರ್ಟಿಯಿಂದ ಸಿ.ಎಂ.ರಾಜೇಶ್ಗೌಡ, ಸ್ವತಂತ್ರ ಅಭ್ಯರ್ಥಿ ಎಸ್.ಎನ್.ಕಾಂತರಾಜು, ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯಿಂದ ಎನ್.ಕುಮಾರ್, ಪಾವಗಡ ವಿಧಾನಸಭಾ ಕ್ಷೇತ್ರಕ್ಕೆ ಜನತಾದಳ (ಜಾತ್ಯಾತೀತ) ಪಕ್ಷದಿಂದ ಕೆ.ಎಂ.ತಿಮ್ಮರಾಯಪ್ಪ 3 ನಾಮಪತ್ರ, ಪಕ್ಷೇತರ ಅಭ್ಯರ್ಥಿಯಾಗಿ ಹನುಮಂತರಾಯಪ್ಪ, ಭಾರತೀಯ ಬಹುಜನ ಕ್ರಾಂತಿ ದಳ (ಬಿಬಿಕೆಡಿ) ಪಕ್ಷದಿಂದ ಬಿ.ಟಿ.ರಾಮಸುಬ್ಬಯ್ಯ, ಪಕ್ಷೇತರ ಅಭ್ಯರ್ಥಿ ನಾಗರಾಜಪ್ಪ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ನಾಗೇಂದ್ರ ಕುಮಾರ್, ಮಧುಗಿರಿ ವಿಧಾನಸಭಾ ಕ್ಷೇತ್ರಕ್ಕೆ ಭಾರತೀಯ ಜನತಾಪಕ್ಷ ಎಲ್.ಸಿ.ನಾಗರಾಜ್ 2 ನಾಮಪತ್ರ, ಬಹುಜನ ಸಮಾಜ ಪಕ್ಷ ಎನ್.ಮಧು ನಾಮಪತ್ರ ಸಲ್ಲಿಸಿದರು.
Comments are closed.