ಕೊರಟಗೆರೆ: 40 ಪರ್ಸೆಂಟ್ ಕಮಿಷನ್ ಹೊಡೆದು ಬಿಜೆಪಿ ಸರಕಾರ ಬಡ ಜನರ ಜೀವನದ ಜೊತೆ ಚೆಲ್ಲಾಟ ಆಡ್ತಿದೆ, ಬಿಜೆಪಿ ಪಕ್ಷದ ಜಗದೀಶ್ ಶೆಟ್ರು ಮತ್ತು ಲಕ್ಷ್ಮಣ್ ಸವದಿ ಅಂತಹ ಹಿರಿಯ ನಾಯಕರ ಆಗಮನದಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ. ತುಮಕೂರು ಜಿಲ್ಲೆಯ ಬೇರೆ ಬೇರೆ ಪಕ್ಷದ ನಾಯಕರು ನನ್ನ ಸಂಪರ್ಕದಲ್ಲಿ ಇದಾರೆ. ಈಗ ರಾಮದಾಸ್ ನಮ್ಮ ಪಕ್ಷಕ್ಕೆ ಬಂದರೂ ಆಶ್ಚರ್ಯ ವಿಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕೊರಟಗೆರೆ ಪಟ್ಟಣದ ಕಂದಾಯ ಇಲಾಖೆ ಕಚೇರಿಯಲ್ಲಿ ಚುನಾವಣಾ ಅಧಿಕಾರಿ ಹಾಲು ಸಿದ್ದಪ್ಪ ಪೂಜೇರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ತನ್ನ ಉಮೇದುವಾರಿಕೆ ಸಲ್ಲಿಸಿದ ನಂತರ ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಲಾಗಿದ್ದ ಬೃಹತ್ ಮೆರವಣಿಗೆಯಲ್ಲಿ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ನನ್ನ ಕೊರಟಗೆರೆ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರ್ತಾರೆ, ದಲಿತ ಸಿಎಂ ಕುರಿತು ನಾನು ಪ್ರತಿಕ್ರಿಯೆ ನೀಡೋದಿಲ್ಲ. ನಮಗೆ ಬೇಕಾಗಿರೋದು ಕಾಂಗ್ರೆಸ್ ಅಧಿಕಾರಿಕ್ಕೆ ತರೋದು, ಸಿಎಂ ಬಗ್ಗೆ ಟೀಕೆ ಟಿಪ್ಪಣಿ ಮಾಡೋದು ನನಗೆ ಇಷ್ಟ ಇಲ್ಲ, ಕಾಂಗ್ರೆಸ್ ಸರಕಾರ ಏನಾದ್ರು ಅಕ್ಕಿ ಕೊಡದೆ ಹೋಗಿದ್ರೆ ಜನ ಹಸಿವಿನಿಂದ ಸಾಯ್ತಿದ್ರು, ಮೇ 13ಕ್ಕೆ ಸಿಎಂ ಬೊಮ್ಮಾಯಿ ಅವರಿಗೆ ಗೊತ್ತಾಗುತ್ತೆ ಯಾವ ಸರಕಾರ ಅಧಿಕಾರಕ್ಕೆ ಬರುತ್ತೆ ಅಂತಾ, ಅಲ್ಲಿಯ ವರೆಗೆ ಕಾದು ನೋಡಲಿ ಎಂದು ಹೇಳಿದರು.
ಕೊರಟಗೆರೆ ಕ್ಷೇತ್ರದಲ್ಲಿ ಪರಮೇಶ್ವರ್ ಮೂರನೇ ಸ್ಥಾನಕ್ಕೆ ಹೋಗ್ತಾರೆ ಅಂದವರಿಗೆ ಇವತ್ತು ಜನರೆ ಉತ್ತರ ಕೊಟ್ಟಿದ್ದಾರೆ. ಇತಿಹಾಸದಲ್ಲಿ ಎಂದು ಸಹ ನಾಮಪತ್ರ ಸಲ್ಲಿಸೋದಕ್ಕೆ ಇಷ್ಟು ಜನ ಸೇರಿರಲಿಲ್ಲ. ಮುಂದೆ ನಿಮ್ಮ ಸೇವೆ ಮಾಡಿ ನಿಮ್ಮ ಋಣ ತೀರಿಸ್ತೀನಿ, 5 ವರ್ಷದಲ್ಲಿ 2500 ಸಾವಿರ ಕೋಟಿ ತಂದಿದ್ದೇನೆ. ಮುಂದೆ ನಿಮ್ಮ ಆಶೀರ್ವಾದ ಸಿಕ್ಕ ಮೇಲೆ 5 ಸಾವಿರ ಕೋಟಿ ತರುತ್ತೇನೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ, ಕೊರಟಗೆರೆ ಕ್ಷೇತ್ರದಲ್ಲಿ ನಾನು ಗೆದ್ದೇ ಗೆಲ್ತೀನಿ, ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ, ತುಮಕೂರು ನಗರ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಮಹಿಳಾಧ್ಯಕ್ಷೆ ಜಯಮ್ಮ, ಯುವಧ್ಯಕ್ಷ ವಿನಯ್, ಮುಖಂಡರಾದ ಎಂಎನ್ಜೆ ಮಂಜುನಾಥ, ಪ್ರಸನ್ನಕುಮಾರ್, ಗಂಗಾಧರಪ್ಪ, ರಾಜಣ್ಣ, ಹುಲಿಕುಂಟೆ ಪ್ರಸಾದ್, ಓಬಳರಾಜು, ಆನಂದ್, ಕವಿತಾ, ಜಯರಾಂ, ಮೂರ್ತಪ್ಪ ಇತರರು ಇದ್ದರು.
ಸ್ವಾಮೀಜಿಗಳ ಆಶೀರ್ವಾದ ಪಡೆದ ಮಾಜಿ ಡಿಸಿಎಂ..
ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ನಾಮಪತ್ರ ಸಲ್ಲಿಸುವ ಮುನ್ನಾ ತುಮಕೂರಿನ ಸಿದ್ದಗಂಗಾ ಕ್ಷೇತ್ರದ ಶ್ರೀಸಿದ್ದಗಂಗಾ ಸ್ವಾಮೀಜಿ, ಸಿದ್ದರಬೆಟ್ಟದ ವೀರಭದ್ರ ಶಿವಚಾರ್ಯ ಸ್ವಾಮೀಜಿ, ಎಲೆರಾಂಪುರದ ಡಾ.ಹನುಮಂತನಾಥ ಸ್ವಾಮೀಜಿ ಮತ್ತು ಬೆಳ್ಳಾರ ಶ್ರೀಕಾರದ ಮಠದ ಕಾರದ ವೀರಬಸವ ಸ್ವಾಮೀಜಿ, ತಂಗನಹಳ್ಳಿ ಮಠದ ಬಸವ ಮಹಾಲಿಂಗ ಸ್ವಾಮೀಜಿಯವರ ಆರ್ಶಿವಾದ ಪಡೆದರು.
35 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಬಾಗಿ
ಕೊರಟಗೆರೆ ಪಟ್ಟಣದ ಸರಕಾರಿ ಬಸ್ ನಿಲ್ದಾಣದಿಂದ 35 ಸಾವಿರಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಪಪಂವರೆಗೆ ರೋಡ್ ಶೋ ನಡೆಸಿ ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶಿಸಿದರು, ರೂಡ್ ಶೋನಲ್ಲಿ 15ಕ್ಕೂ ಅಧಿಕ ಜೆಸಿಬಿಗಳಿಂದ ಎಂಎನ್ಜೆ ಮಂಜುನಾಥ ಮತ್ತು ಅಭಿಮಾನಿಗಳು ಮಾಜಿ ಡಿಸಿಎಂ ಪರಮೇಶ್ವರ್ಗೆ ಹೂವಿನ ಸುರಿಮಳೆ ಸುರಿಸುವ ಮೂಲಕ ಕಾಂಗ್ರೆಸ್ ಪಕ್ಷದ ಪರವಾಗಿ ಅದ್ದೂರಿಯಾಗಿ ಪ್ರಚಾರ ನಡೆಸಿದರು.
ಮಹಿಳಾ ಪೇದೆ ಮೇಲೆ ಕಲ್ಲೆಸಿದ ಕಿಡಿಗೇಡಿ
ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ನಾಮಪತ್ರ ಸಲ್ಲಿಸುವ ವೇಳೆ ಮಹಿಳಾ ಪೊಲೀಸ್ ಪೇದೆ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದಿದೆ. ಪರಮೇಶ್ವರ್ ಜೊತೆ ನಾಮಪತ್ರ ಸಲ್ಲಿಸಲು ಒಳಗೆ ಬೀಡಲಿಲ್ಲ ಎಂದು ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ದಾದ ನಡೆದಿದೆ. ನಂತರ ಹೊರಗಡೆಯಿಂದ ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಮಹಿಳಾ ಪೇದೆಯ ತಲೆಗೆ ಪೆಟ್ಟಾಗಿ ಕೊರಟಗೆರೆ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments are closed.