ಕುಡಿವ ನೀರಿಗಾಗಿ ಗ್ರಾಮಸ್ಥರ ಪರದಾಟ

238

Get real time updates directly on you device, subscribe now.


ಕೊರಟಗೆರೆ: ಮೂಲಭೂತ ಸೌಕರ್ಯದಲ್ಲಿ ಒಂದಾದ ಕುಡಿಯುವ ನೀರನ್ನು ಜನ ಸಾಮಾನ್ಯರಿಗೆ ಬಹು ಮುಖ್ಯವಾಗಿದ್ದು, ನೀರು ಸಿಗದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕಿನ ಸಿ.ಎನ್.ದುರ್ಗ ಹೋಬಳಿಯ ಬುಕ್ಕಪಟ್ಟಣ ಗ್ರಾಪಂ ವ್ಯಾಪ್ತಿಯ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆಯಿದ್ದು ಜನರು ಗ್ರಾಪಂ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗ್ರಾಪಂ ಕಚೇರಿ ಆವರಣದಲ್ಲಿ ಖಾಲಿ ಕೊಡಗಳೊಂದಿಗೆ ಮಹಿಳೆಯರು, ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಈ ಬಾರಿ ವರುಣನ ಕೃಪೆಯಿಂದ ಸಾಕಷ್ಟು ಮಳೆಯಾಗಿ ಕೆರೆ- ಕಟ್ಟೆ ತುಂಬಿದ್ದವು, ಗ್ರಾಪಂ ಸಮರ್ಪಕವಾಗಿ ನೀರು ಸರಬರಾಜು ಮಾಡದೆ ನಿರ್ಲಕ್ಷ್ಯ ವಹಿಸಿದ ನಡೆಗೆ ಗ್ರಾಮದ ಮಹಿಳೆಯರು ಹಾಗೂ ಗ್ರಾಮಸ್ಥರು ಖಾಲಿ ಕೊಡ ಹಿಡಿದು ಆಕ್ರೋಶ ಹೊರ ಹಾಕಿದ ಘಟನೆ ನಡೆಯಿತು.

ಗ್ರಾಮದ ಮಹಿಳೆ ಲಕ್ಷ್ಮಮ್ಮ ಮಾತನಾಡಿ, ನಮಗೆ ಪೈಪ್ ಲೈನ್ ಮೂಲಕ ನೀರು ಸರಬರಾಜು ಮಾಡುತ್ತಿದ್ದರು. ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಗ್ರಾಪಂ ನವರು ಟ್ಯಾಂಕರ್ಗಳ ಮುಖಾಂತರ ಆಶುದ್ಧ ನೀರನ್ನು ಸರಬರಾಜು ಮಾಡಿದ್ದಾರೆ. ಆ ನೀರು ಕುಡಿದ ನಮಗೆಲ್ಲರಿಗೂ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ನಮ್ಮ ಸಮಸ್ಯೆ ಗಮನಹರಿಸಿ ಬಗೆಹರಿಸಿಕೊಡಬೇಕು ಎಂದು ಮನವಿ ಮಾಡಿದರು.

ಬುಕ್ಕಪಟ್ಟಣ ಗ್ರಾಪಂ ವ್ಯಾಪ್ತಿಯ ಇಂದಿರಾನಗರ, ಗೊಲ್ಲರಹಟ್ಟಿಗಳಲ್ಲಿ ನೀರು ಸರಬರಾಜು ಮಾಡುತ್ತಿದ್ದಾರೆ. ಆದರೆ ಇದೆ ಗ್ರಾಮದ ಕಾಲೋನಿಗಳಿಗೆ ಕುಡಿಯುವ ನೀರು ಕೊಡದೆ ಬೇರೆಯಾವೋ ನೀರನ್ನು ತಂದು ಕಾಲೋನಿಗಳಲ್ಲಿ ಬಿಡುತ್ತಿದ್ದಾರೆ. ಆದರಿಂದ ಮನೆಯ ಕುಟುಂಬದವರು ಖಾಯಿಲೆಗೆ ತುತ್ತಾಗುತ್ತಿದ್ದಾರೆ. ನಮ್ಮ ಚಿಕಿತ್ಸೆಗೆ ದುಡ್ಡು ಕೊಡುವವರು ಯಾರು ಎಂದು ಮೂಲಭೂತ ಸೌಕರ್ಯದಿಂದ ವಂಚಿತರಾದ ಗ್ರಾಮದ ರಂಗಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಕರ್ನಾಟಕ ದಲಿತ ಸರ್ವೋದಯ ಸಮಿತಿ ತಾ.ಅಧ್ಯಕ್ಷ ಹರೀಶ್, ದೊಡ್ಡಕಾಯಪ್ಪ, ರತ್ನಮ್ಮ, ರೇಣುಕಮ್ಮ, ಕೆಂಪರಾಜು, ಮಣ್ಣಮ್ಮ, ರತ್ನಮ್ಮ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!