ಪಿಡಿಒ ಅಮಾನತ್ತು ಪಡಿಸುವಂತೆ ಆಗ್ರಹ

123

Get real time updates directly on you device, subscribe now.


ಪಾವಗಡ: ತಾಲೂಕು ಕಸಬಾ ಹೋಬಳಿ ವಿರುಪಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡೇಟಿ ಗ್ರಾಮದಲ್ಲಿ ಕಳೆದ 15 ವರ್ಷಗಳಿಂದೆ ಸ್ಥಾಪಿತವಾಗಿ ಯಶಸ್ವಿಯಾಗಿ ನಡೆಯುತ್ತಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನಿವೇಶನದಲ್ಲಿ ಕಾನೂನುಬಾಹಿರವಾಗಿ ಖಾತೆ ಮಾಡಿಕೊಟ್ಟು ಖಾಸಗಿಯವರಿಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿಸಿರುವ ಪಿಡಿಒ ಚಿಕ್ಕಣ್ಣ ವಿರುದ್ಧ ಶಿಸ್ತು ಜರಗಿಸಬೇಕು ಮತ್ತು ಕೂಡಲೇ ಅವರನ್ನು ಅಮಾನತು ಪಡಿಸುವಂತೆ ಗೌಡೇಟಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.

60X40 ಅಳತೆಯ ಮಹಿಳಾ ಸಹಕಾರ ಸಂಘದ ನಿವೇಶನದಲ್ಲಿ 20X20 ಅಳತೆಯ ಕಟ್ಟಡವಿದ್ದು ಉಳಿಕೆ ಜಾಗದಲ್ಲಿ ಡೈರಿಗೆ ಬರುವಂತ ವಾಹನಗಳ ನಿಲುಗಡೆ ಮತ್ತು ಹಾಲು ತುಂಬಿಕೊಂಡು ಹೋಗುವಂತ ಟೆಂಪು ಬರಲು ಹಾಗೂ ಜಾನುವಾರುಗಳಿಗೆ ವೈದ್ಯರು ಬಂದಾಗ ಔಷಧಿಯನ್ನು ನೀಡುವ ಸಲುವಾಗಿ ಡೈರಿಯ ಮುಂಭಾಗ ಖಾಲಿ ಜಾಗವನ್ನು ಬಿಟ್ಟುಕೊಂಡಿರುತ್ತೇವೆ.
ಖಾತೆ ಇರುವ ಮಾಹಿತಿ ಗೊತ್ತಿದ್ದರೂ ಕೂಡ ಕಾನೂನುಬಾಹಿರವಾಗಿ ವಿರುಪಸಮುದ್ರ ಗ್ರಾಮ ಪಂಚಾಯಿತಿ ಪಿಡಿಓ ಚಿಕ್ಕಣ್ಣ ಹಣ ಪಡೆದು ಖಾಸಗಿ ವ್ಯಕ್ತಿಯೊಬ್ಬರಿಗೆ ನಮ್ಮ ನಿವೇಶನದಲ್ಲಿ ಖಾತೆ ಮಾಡಿಕೊಟ್ಟಿದ್ದು ಮನೆಯನ್ನು ಕೂಡ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸರ್ಕಾರಿ ಸ್ವಾಮ್ಯದ ಮಹಿಳಾ ಸಹಕಾರ ಸಂಘಕ್ಕೆ ಬಂದು ಹೋಗಲು ಸಂಪರ್ಕ ರಸ್ತೆ ಇರುವುದಿಲ್ಲ ಮತ್ತು ವಾಹನಗಳ ನಿಲುಗಡೆಗೂ ಜಾಗ ಇರುವುದಿಲ್ಲ.
ಈ ಬಗ್ಗೆ ಸೂಕ್ತ ದಾಖಲೆಗಳನ್ನು ಪಂಚಾಯತಿಗೆ ಪ್ರಚುರಪಡಿಸಿದರೂ ಕೂಡ ಯಾವುದೇ ಕ್ರಮ ಜರುಗಿಸದೆ ಪಿಡಿಓ ಮೌನ ವಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಮಗೆ 2004 ರಲ್ಲಿ ಖಾತೆಯಾಗಿರುವ 60X40 ನಿರ್ವೇಶನವನ್ನು ಬಿಡಿಸಿಕೊಡಬೇಕು ಮತ್ತು ಸಾರ್ವಜನಿಕರ ಹಿತಾಸಕ್ತಿಯಿಂದ ಹಾಗೂ ಇದು ಡೈರಿಯ ಸಾರ್ವಜನಿಕರ ಸ್ವತ್ತಾಗಿರುವುದರಿಂದ ಮನೆ ನಿರ್ಮಾಣದ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಕಾರ್ಯದರ್ಶಿ ತಿಳಿಸಿದ್ದಾರೆ.
ಕಾನೂನು ಬಾಹಿರವಾಗಿ ಯಾವುದೇ ಹಕ್ಕುಪತ್ರ ಇಲ್ಲದೆ ಕ್ರಯಪತ್ರವೂ ಇಲ್ಲದೆ ಇ ಖಾತ ಮಾಡಿರುವ ವಿರುಪಸಮುದ್ರ ಗ್ರಾಮ ಪಂಚಾಯತ್ ಪಿಡಿಓ ಚಿಕ್ಕಣ್ಣ ವಿರುದ್ಧವು ಶಿಸ್ತು ಕ್ರಮ ಜರುಗಿಸುವಂತೆ ಮಹಿಳಾ ಹಾಲೂ ಉತ್ಪಾದಕರ ಸಹಕಾರ ಸಂಘದ ಎಲ್ಲಾ ಸದಸ್ಯರು ಕೂಡ ಒತ್ತಾಯಿಸಿದ್ದಾರೆ.

ಡೈರಿಗೆ ಹಾಲು ಹಾಕುವ ಜಾನುವಾರುಗಳಿಗೆ ಔಷಧಿ ಕೊಡಿಸಲು ಹಾಗೂ ವಾಹನಗಳ ನಿಲುಗಡೆಗೆ ಸ್ಥಳ ಇಲ್ಲ. ಆದ್ದರಿಂದ ಯಾವುದೇ ದಾಖಲೆ ಇಲ್ಲದೆ ಇ ಖಾತಾ ಮಾಡಿರುವುದನ್ನು ಕೂಡಲೇ ರದ್ದುಪಡಿಸಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ನಿವೇಶನಕ್ಕೆ ನ್ಯಾಯ ಒದಗಿಸಿಕೊಡುವಂತೆ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ ಎಂದು ಸದಸ್ಯರು ತಿಳಿಸಿದ್ದಾರೆ.
ಈ ಬಗ್ಗೆ ಕ್ರಮ ಜರುಗಿಸದೆ ಇದ್ದರೆ ಸೋಮವಾರ ತಾಲ್ಲೂಕು ಪಂಚಾಯತ್ ಮುಂಭಾಗ ಪ್ರತಿಭಟನೆ ಮಾಡುವುದಾಗಿ ಕಾರ್ಯದರ್ಶಿಗಳು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!