ಶಿರಾ: ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದ ಶೈಕ್ಷಣಿಕ 2022- 23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪ್ರೆಸಿಡೆನ್ಸಿ ಪಿಯು ವಿಜ್ಞಾನ ಕಾಲೇಜು ಶೇಕಡಾ 99.80 ಫಲಿತಾಂಶದೊಂದಿಗೆ 576 ವಿದ್ಯಾರ್ಥಿಗಳಲ್ಲಿ 430 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ 140 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಹಾಗೂ 06 ವಿದ್ಯಾರ್ಥಿಗಳು ದ್ವಿತೀಯ ಸ್ಥಾನದೊಂದಿಗೆ ಅದ್ವಿತೀಯ ಸಾಧನೆ ಮೆರೆದಿದ್ದಾರೆ.
ಶೇಕಡಾ 98 ಕ್ಕಿಂತ ಅಧಿಕ 02, ಶೇ. 97ಕ್ಕಿಂತ ಅಧಿಕ 11, ಶೇ. 96 ಕ್ಕಿಂತ ಅಧಿಕ 23, ಶೇ. 95ಕ್ಕಿಂತ ಅಧಿಕ 36, ಶೇ. 94 ಕ್ಕಿಂತ ಅಧಿಕ 56, ಶೇ.93 ಕ್ಕಿಂತ ಅಧಿಕ 45, ಶೇ.92 ಕ್ಕಿಂತ ಅಧಿಕ 51 ಸೇರಿ ಒಟ್ಟಾರೆ ಶೇ.90 ಕ್ಕಿಂತ ಅಧಿಕ 289 ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿರುವ ಶಿರಾ ನಗರದ ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿಷಯಾವಾರು ಕನ್ನಡದಲ್ಲಿ 03, ಭೌತಶಾಸ್ತ್ರದಲ್ಲಿ 05, ರಸಾಯನ ಶಾಸ್ತ್ರದಲ್ಲಿ 03, ಗಣಿತದಲ್ಲಿ 21, ಜೀವಶಾಸ್ತ್ರದಲ್ಲಿ 05 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳಿಸಿದ್ದಾರೆ ಹಾಗೂ ಕನ್ನಡದಲ್ಲಿ 28, ಭೌತಶಾಸ್ತ್ರದಲ್ಲಿ 45, ರಸಾಯನ ಶಾಸ್ತ್ರದಲ್ಲಿ 09, ಗಣಿತದಲ್ಲಿ 49, ಜೀವಶಾಸ್ತ್ರದಲ್ಲಿ 22, ಗಣಕ ವಿಜ್ಞಾನದಲ್ಲಿ 01, ವಿದ್ಯಾರ್ಥಿಗಳು 100ಕ್ಕೆ 99 ಅಂಕ ಪಡೆದಿದ್ದಾರೆ.
ರಾಹುಲ್.ಎನ್.ಎಂ. ಶೇ.98, ಸುಮಾ.ಸಿ.ವಿ. ಶೇ.97.8, ಚಿನ್ಮಯಿ.ಬಿ.ಆರ್. ಶೇ.97.60, ಕಾರ್ತಿಕ್ಎಸ್., ಕುಸುಮಾ.ಎಂ, ಎಂ.ಶ್ರೀಲಕ್ಷ್ಮೀ, ನವ್ಯ.ಎಲ್. ಕೆ, ಸಮೃದ್ ಶ್ರೀಧರ್ ಶೇ.97.33, ಭರತ್.ಹೆಚ್.ಕೆ, ಭರತ್.ಕೆ.ಸಿ. ಶೇ.97.17, ಜೀವನ್ ಕಿಶೋರ್, ಮಿಥಾಲಿ.ಕೆ. ಗೊಂಚಿಕಾರ್, ಸಿಂಧು.ಎಸ್.ಎನ್. ಶೇ.97 ಅಂಕ ಪಡೆಯುವುದರೊಂದಿಗೆ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಚಿದಾನಂದ್ ಎಂ ಗೌಡ ಅಭಿನಂದಿಸಿದ್ದಾರೆ.
Comments are closed.