ಕಾಂಗ್ರೆಸ್ ನವರ ಕುತಂತ್ರವನ್ನ ಜನ ನೋಡ್ತಿದ್ದಾರೆ: ಡಿಕೆ

83

Get real time updates directly on you device, subscribe now.


ಕುಣಿಗಲ್: ಚುನಾವಣೆ ನಾಮಪತ್ರ ಭರಾಟೆ ನಂತರ ಶುಕ್ರವಾರ ನಾಮಪತ್ರ ಪರಿಶೀಲನೆ ಕಾರ್ಯ ನೆರವೇರಿತು.

ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳು, ಏಜೆಂಟರ್ ಚುನಾವಣಾಧಿಕಾರಿಗಳ ಮುಂದೆ ಹಾಜರಾಗಿ ಪರಿಶೀಲನೆ ಕಾರ್ಯದಲ್ಲಿ ಭಾಗಿಯಾದರು.

23 ನಾಮಪತ್ರ ಸಲ್ಲಿಕೆಯಾಗಿದ್ದು, ಈ ಪೈಕಿ ನಾಲ್ಕು ನಾಮಪತ್ರ ತಿರಸ್ಕೃತಗೊಂಡಿವೆ. ಇದರಲ್ಲಿ ಮಾಜಿ ಸಚಿವ ಡಿ.ನಾಗರಾಜಯ್ಯ ಸಲ್ಲಿಸಿದ ಎರಡು, ಆಮ್ ಆದ್ಮಿ ಪಕ್ಷದಿಂದ ಪ್ರಶಾಂತ್ ಸಲ್ಲಿಸಿದ್ದ ಒಂದು ಹಾಗೂ ಶಾಸಕರ ಪತ್ನಿ ಸುಮಾ ರಂಗನಾಥ ಸಲ್ಲಿಸಿದ್ದ ಒಂದು ನಾಮಪತ್ರ ತಿರಸ್ಕೃತವಾಗಿದ್ದು 9 ಮಂದಿಯಿಂದ 19 ನಾಮಪತ್ರ ಪುರಸ್ಕರಿಸಲಾಗಿದೆ. ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ತಪ್ಪು ಮಾಹಿತಿ ಸಲ್ಲಿಸಿದ್ದು ಅವರ ಅರ್ಜಿ ತಿರಸ್ಕರಿಸಬೇಕೆಂದು ಸಂಘದ ಅಧ್ಯಕ್ಷರೊಬ್ಬರು, ವಕೀಲರೊಬ್ಬರು ಆಕ್ಷೇಪಣೆ ಸಲ್ಲಿಸಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ಅದನ್ನು ಮಾನ್ಯ ಮಾಡಿದ ಚುನಾವಣಾಧಿಕಾರಿಗಳು ಬಿಜೆಪಿ ಅಭ್ಯರ್ಥಿ ನಾಮಪತ್ರ ಪುರಸ್ಕರಿಸಿದರು.

ನಾಮಪತ್ರ ಸಲ್ಲಿಸಿ ಹೊರಬಂದ ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಮಾತನಾಡಿ, ತಮ್ಮ ನಾಮಪತ್ರ ಪುರಸ್ಕಾರಗೊಂಡಿದ್ದರಿಂದ ಸುಲಭವಾಗಿ ಗೆಲ್ಲುವ ಭ್ರಮೆಯಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿಯ ಆಸೆಗೆ ತಣ್ಣೀರು ಎರಚಿದಂತಾಗಿದೆ. ಕಾಂಗ್ರೆಸ್ ಪಕ್ಷದವರು ಚುನಾವಣೆಯಲ್ಲಿ ನನ್ನನ್ನು ನೇರವಾಗಿ ಎದುರಿಸಲಾರದೆ ಈ ರೀತಿ ಕೆಲವರಿಂದ ಪರೋಕ್ಷ ತಂತ್ರ ನಡೆಸುತ್ತಿದ್ದಾರೆ. ತಾವು ಎಲ್ಲವನ್ನು ನಿಯಮ ಬದ್ಧವಾಗಿ ಸಲ್ಲಿಸಿದ್ದು ಯಾವುದೇ ಲೋಪವಾಗಿಲ್ಲ. ನ್ಯಾಯಾಲಯದಲ್ಲಿ ಶಿಕ್ಷೆ ವಿಧಿಸಿದ್ದ ಪ್ರಕರಣ ತುಮಕೂರು ನ್ಯಾಯಾಲಯದಲ್ಲಿ ನವೆಂಬರ್ನಲ್ಲೆ ವಜಾಗೊಂಡಿದೆ. ಇದೀಗ ಹೈಕೊರ್ಟ್ನಲ್ಲಿ ಪ್ರಕರಣ ಇದೆ ಎನ್ನುತ್ತಾರೆ. ಆದರೆ ಹೈಕೋರ್ಟ್ನಿಂದ ನನಗೆ ಯಾವುದೇ ನೋಟೀಸ್ ಆಗಲಿ, ಸೂಚನೆ ಆಗಲಿ ಬಂದಿಲ್ಲ. ಆದ್ದರಿಂದ ನಾನು ಅ ಬಗ್ಗೆ ಉಲ್ಲೇಖಿಸಿಲ್ಲ. ತಮ್ಮ ಅರ್ಜಿ ಕಾನೂನು ಬದ್ಧವಾಗಿದ್ದು ಎಲ್ಲವನ್ನು ಘೋಷಿಸಿದ್ದೇನೆ. ಮತದಾರರು ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದರು. ವಕೀಲ ಸತ್ಯನಾರಾಯಣ ಒಡೆಯರ್, ನಾರಾಯಣಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ್, ಪ್ರಮುಖರಾದ ವೆಂಕಟೇಶ, ಆನಂದ್ಕುಮಾರ್, ದಿನೇಶ್, ತಿಮ್ಮಣ್ಣ, ಶ್ರೀನಿವಾಸ, ಸಂದೀಪ್, ಕೇಶವ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!