ಕಾರ್ಮಸ್ ವಿಭಾಗದ ಚಿನ್ಮಯಿ, ಗೀತಾ ಟಾಪರ್ಸ್

ಪಿಯು ಫಲಿತಾಂಶ- ವಿದ್ಯಾನಿಧಿ ವಿದ್ಯಾರ್ಥಿನಿಯರ ಸಾಧನೆ

97

Get real time updates directly on you device, subscribe now.


ತುಮಕೂರು: ಶುಕ್ರವಾರ ಪ್ರಕಟಗೊಂಡ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶದ ಕಾರ್ಮಸ್ ವಿಭಾಗದಲ್ಲಿ ಕೃಷ್ಣಾ ನಗರದ ವಿದ್ಯಾನಿಧಿ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು 600 ಅಂಕಗಳಿಗೆ 595 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದಿದ್ದಾರೆ.

ಕಾರ್ಮಸ್ ವಿಭಾಗದ ಚಿನ್ಮಯಿ ಎಂ, ಮತ್ತು ಗೀತಾ ಅವರು 600ಕ್ಕೆ 595 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೂರನೇ ರ್ಯಾಂಕ್ ಗಳಿಸಿದ್ದಾರೆ.
ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದ ಚಿನ್ಮಯಿ.ಎಂ. ಮಾತನಾಡಿ, ದ್ವಿತೀಯ ಪಿಯು ಫಲಿತಾಂಶದಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಬಂದಿರುವುದು ಅತ್ಯಂತ ಖುಷಿ ತಂದಿದೆ. ಮೊದಲನೇಯದಾಗಿ ವಿದ್ಯಾನಿಧಿ ಶಿಕ್ಷಣ ಸಂಸ್ಥೆಗೆ, ನನಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ ತಂದೆ ತಾಯಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಫಲಿಶಾಂತಕ್ಕೆ ನನ್ನ ನಿರಂತರ ಪರಿಶ್ರಮದ ಜೊತೆಗೆ, ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಚಾರ್ಟೆಡ್ ಅಕೌಂಟೆಂಟ್ ಆಗಬೇಕೆಂಬುದು ನಮ್ಮ ಬಯಕೆ, ಇದಕ್ಕಾಗಿ ಈಗಾಗಲೇ ತರಗತಿಗಳನ್ನು ಸೇರಿದ್ದೇನೆ. ನಮ್ಮ ಪೋಷಕರು, ಅದರಲ್ಲಿಯೂ ನಮ್ಮ ತಾಯಿ ನಿರಂತರವಾಗಿ ಕಾಲೇಜಿನ ಪೋಷಕರ ಸಭೆಯಲ್ಲಿ ಭಾಗವಹಿಸಿ ಪ್ರಶ್ನೆ ಮಾಡುತ್ತಿದ್ದರು. ಹೆಚ್ಚಿನ ಹೊಂ ವರ್ಕ್ಗೆ ಪ್ರೇರೇಪಿಸುತ್ತಿದ್ದರು ಎಂದರು.

3ನೇ ರ್ಯಾಂಕ್ ಪಡೆದ ಈ.ಗೀತಾ ಮಾತನಾಡಿ, ನಮ್ಮದು ಚಿಕ್ಕನಾಯಕಹಳ್ಳಿ ,ತಂದೆ ಈಶ್ವರ್ ವ್ಯವಸಾಯಗಾರರು. ತಾಯಿ ಮನೆ ನೋಡಿಕೊಳ್ಳುತ್ತಾರೆ. ನಾವು ಇಲ್ಲಿ ಹಾಸ್ಟೆಲ್ ನಲ್ಲಿ ಇದ್ದು ಓದಿಕೊಳ್ಳುತ್ತಿದ್ದು, ಬೆಳಗ್ಗೆ 5 ಗಂಟೆಗೆ ಎದ್ದು ಅಭ್ಯಾಸ ಆರಂಭಿಸುತ್ತಿದ್ದವು. ನಿರಂತರ ಪ್ರಯತ್ನ ಹಾಗೂ ಕಾಲೇಜಿನ ಶಿಕ್ಷಕರ ಪರಿಶ್ರಮದ ಫಲವಾಗಿ ನಮಗೆ 3ನೇ ರ್ಯಾಂಕ್ ಬಂದಿದೆ. ನಾನು ಸಿಎ ಮಾಡಬೇಕೆಂದಿದ್ದೇನೆ. ಬಿಕಾಂ ಸೇರಲಿದ್ದೇನೆ ಎಂದು ಸಂತಸ ಹಂಚಿಕೊಂಡರು.

ವಿದ್ಯಾನಿಧಿ ಕಾಲೇಜಿನ ನಿರ್ದೇಶಕ ಪ್ರದೀಪ್ ಮಾತನಾಡಿ, ಕಳೆದ ಐದಾರು ವರ್ಷಗಳಿಂದ ನಮ್ಮ ವಿದ್ಯಾನಿಧಿ ಕಾಲೇಜಿಗೆ ಒಂದಿಲೊಂದು ರ್ಯಾಂಕ್ ಬರುತ್ತಲಿದೆ. ಕೇವಲ ದಕ್ಷಿಣ ಕನ್ನಡದವರೇ ರ್ಯಾಂಕ್ ಲೀಸ್ಟ್ನಲ್ಲಿ ತುಂಬಿರುತ್ತಿದ್ದ ಕಾಲದಲ್ಲಿ ತುಮಕೂರಿಗೂ ಸ್ಥಾನ ದೊರೆತಿರುವುದಕ್ಕೆ ನಾನು ವಿದ್ಯಾರ್ಥಿಗಳು ಮತ್ತು ಕಾಲೇಜಿನ ಶಿಕ್ಷಕರು, ಮಕ್ಕಳ ಪೋಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದಲ್ಲದೆ ನಮ್ಮ ಕಾಲೇಜಿನ ಮತ್ತೆ ಮೂವರು ವಿದ್ಯಾರ್ಥಿಗಳು 600 ಅಂಕಗಳಿಗೆ 593 ಅಂಕಗಳನ್ನು ಪಡೆದಿದ್ದಾರೆ. ಅಲ್ಲದೆ ಕಾಲೇಜಿನ ಸುಮಾರು 348 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಅಧ್ಯಾಪಕರ ಶ್ರಮದಿಂದಾಗಿ ಈ ಒಳ್ಳೆಯ ಫಲಿತಾಂಶ ಬಂದಿದೆ. ಇದಕ್ಕಾಗಿ ಅವರೆಲ್ಲರನ್ನು ಅಭಿನಂದಿಸುವುದಾಗಿ ನುಡಿದರು.
ಈ ವೇಳೆ ಕಾಲೇಜಿನ ಪ್ರಾಂಶುಪಾಲ ಸಿದ್ದೇಶ್ವರಸ್ವಾಮಿ ಹಾಗೂ ಕಾಲೇಜಿನ ಸಿಬ್ಬಂದಿ ರ್ಯಾಂಕ್ ಪಡೆದ ಮಕ್ಕಳಿಗೆ ಸಿಹಿ ತಿನಿಸಿ, ಹೂಗುಚ್ಚ ನೀಡಿ ಅಭಿನಂದಿಸಿದರು.

Get real time updates directly on you device, subscribe now.

Comments are closed.

error: Content is protected !!